ಬ್ಯಾಟಿಂಗ್ ನೀಡದ್ದಕ್ಕೆ ಸಹ ಆಟಗಾರರ ಮೇಲೆ ಬರ್ಬರ ಹಲ್ಲೆ ನಡೆಸಿದ ಯುವಕ: ವಿಡಿಯೋ ವೈರಲ್
Viral Video: ನೇಪಾಳದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರರ ನಡುವೆ ನಡೆದ ಜಗಳದಿಂದ ಕ್ರಿಕೆಟ್ ಪಂದ್ಯವೇ ಅಸ್ತವ್ಯಸ್ತವಾಗಿದೆ. ಯುವಕನೊಬ್ಬ ತನ್ನ ಸಹ ಆಟಗಾರನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ. ತನಗೆ ಆಟ ಆಡಲು ಬ್ಯಾಟಿಂಗ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇತರ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಹ ಆಟಗಾರರ ಮೇಲೆ ಬರ್ಬರ ಹಲ್ಲೆ ನಡೆಸಿದ ಯುವಕ -
ಕಾಠ್ಮಂಡು, ಮಾ.10: ಯುವಕರು ಹೆಚ್ಚಾಗಿ ಇಷ್ಟಪಟ್ಟು ಆಡುವ ಆಟ ಅಂದ್ರೆ ಅದು ಕ್ರಿಕೆಟ್. ಸಂಜೆಯಾದರೆ ಸಾಕು ತನ್ನದೇ ಬಳಗವನ್ನು ಕಟ್ಟಿಕೊಂಡು ಮೈದಾನಕ್ಕೆ ಇಳಿಯುವ ಅನೇಕ ಯುವಕರಿದ್ದಾರೆ. ಆದರೆ ನೇಪಾಳದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಆಟಗಾರರ ನಡುವೆ ನಡೆದ ಜಗಳದಿಂದ ಕ್ರಿಕೆಟ್ ಪಂದ್ಯವೇ ಅಸ್ತವ್ಯಸ್ತವಾಗಿದೆ. ಯುವಕನೊಬ್ಬ ತನ್ನ ಸಹ ಆಟಗಾರ ನನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಕಂಡು ಬಂದಿದೆ. ತನಗೆ ಆಟ ಆಡಲು ಬ್ಯಾಟಿಂಗ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇತರ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಕ್ರಿಕೆಟ್ ಆಡುವ ಸಂದರ್ಭದಲ್ಲಿ ತನಗೆ ಬ್ಯಾಟಿಂಗ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಯುವಕ ಆಕ್ರೋಶಗೊಂಡಿದ್ದಾನೆ. ಈ ಘಟನೆ ನೇಪಾಳದಲ್ಲಿ ನಡೆದಿದೆ ಎಂದು ವರದಿಯಾಗಿದೆ, ಆದಾಗ್ಯೂ, ಘಟನೆಯ ನಿಖರವಾದ ಸ್ಥಳ ಇನ್ನೂ ತಿಳಿದುಬಂದಿಲ್ಲ. ಸತತ ಮೂರು ಪಂದ್ಯಗಳಿಗೆ ಬ್ಯಾಟಿಂಗ್ ನಿರಾಕರಿಸಿದ್ದರಿಂದ ಯುವಕ ಕೋಪಗೊಂಡಿದ್ದಾನೆ.
ವಿಡಿಯೋ ನೋಡಿ:
ಯುವಕನು ತನ್ನ ಸಹ ಆಟಗಾರನ ಮೇಲೆ ದಾಳಿ ಮಾಡಿದ್ದಾನೆ. ಕಪ್ಪು ಜಾಕೆಟ್ ಹಾಕಿದ್ದ ಯುವಕ ಕೆಳಗೆ ಬಿದ್ದಿದ್ದರೂ ಬಿಡದೇ ಹಲ್ಲೆ ಮಾಡುತ್ತಲೆ ಇದ್ದಾನೆ. ಕ್ರಿಕೆಟ್ ಬ್ಯಾಟ್‌ನಿಂದ ಆತನ ತಲೆ ಮತ್ತು ಮೈಕೈಗೆ ಬಲವಾಗಿ ಹೊಡೆದಿದ್ದಾನೆ. ಕೆಲವು ಹೊಡೆತಗಳ ನಂತರ, ಬಲಿಪಶು ಯುವಕ ಎದ್ದು ನಿಂತು ಯುವಕನ ಮೇಲೆ ಒದೆಯುತ್ತಾ ಮತ್ತು ಗುದ್ದುತ್ತಾ ದಾಳಿ ಮಾಡಲು ಪ್ರಯತ್ನಿಸುತ್ತಾನೆ ಆದರೆ, ಅವನು ನಿಲ್ಲದೆ ಬ್ಯಾಟ್ ನಿಂದ ಹೊಡೆಯುತ್ತಲೇ ಇದ್ದನು. ಸ್ಥಳದಲ್ಲಿದ್ದ ಇತರ ಯುವಕರು ಜಗಳದಿಂದ ಓಡಿ ಹೋಗುತ್ತಿರುವುದು ಕಂಡು ಬಂದಿದೆ.
Viral Video: ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ
ಯುವಕನನ್ನು ಕ್ರೂರವಾಗಿ ಥಳಿಸುತ್ತಿರುವುದು ಕಂಡು ಬಂದರೂ ಯಾರೂ ಕೂಡ ರಕ್ಷಿಸಲು ಮುಂದೆ ಬಂದಿಲ್ಲ. ಯುವಕರು ಓಡುತ್ತಿರುವಾಗ ಅವರ ಬಟ್ಟೆ ಮತ್ತು ಮುಖಗಳ ಮೇಲೆ ಹೋಳಿ ಬಣ್ಣಗಳನ್ನು ಹಾಕಿಕೊಂಡಿರುವುದನ್ನು ವೀಡಿಯೊ ತೋರಿಸುತ್ತದೆ. ಬಹುಶಃ ಹೋಳಿ ಹಬ್ಬದ ಅಂಗವಾಗಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು ಎನ್ನಲಾಗಿದೆ.