ರಸ್ತೆ ಮತ್ತು ಸ್ಮಶಾನದ ಜಾಗ: ಒತ್ತುವರಿ ತೆರವುಗೊಳಿಸಿ ಕ್ರಮ ಜರುಗಿಸಬೇಕೆಂದು ತಹಸೀಲ್ದಾರರಿಗೆ ಮನವಿ
ಹಲವು ಬಾರಿ ಶಂಖಮವಾರಪಲ್ಲಿ ಗ್ರಾಮದ ಸ್ಮಶಾಸನ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿ ಕೊಂಡಿದ್ದು, ತೆರವುಗೊಳಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗೆಯೇ ನಕಾಶೆಯಲ್ಲಿರುವಂತೆ ಸ್ಮಶಾನಕ್ಕೆ, ರೈತರ ಜಮೀನುಗಳಿಗೆ ದಾರಿಯನ್ನೂ ಕಲ್ಪಿಸದೇ, ಮೃತರ ಅಂತಿಮ ಸಂಸ್ಕಾರಕ್ಕೆ ಪರದಾಡುವಂತಾಗಿದೆ
ಬಾಗೇಪಲ್ಲಿ: ತಾಲೂಕಿನ ಶಂಖಮವಾರಪಲ್ಲಿ ಗ್ರಾಮದ ಸ್ಮಶಾನ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಸ್ಮಶಾನಗಳ ಜಾಗ ಒತ್ತುವರಿ ಮತ್ತು ನಕಾಶೆಗಳಲ್ಲಿರುವಂತೆ ಸ್ಮಶಾನಕ್ಕಿರುವ ರಸ್ತೆ ಮಾರ್ಗ,ರೈತರ ಜಮೀನುಗಳಿಗಿರುವ ದಾರಿಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಒತ್ತು ವರಿ ತೆರವುಗೊಳಿಸಿ ಕ್ರಮ ಜರುಗಿಸಬೇಕೆಂದು ತಹಶೀಲ್ದಾರರ ಕಚೇರಿಯ ಮುಂಭಾಗದಲ್ಲಿ ಬುಧ ವಾರ ಸಿಪಿಎಂ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು.
ಇದನ್ನೂ ಓದಿ: Chikkaballapur News: ಸಾಲ ಮರುಪಾವತಿಯಾದಲ್ಲಿ ಮಾತ್ರ ಸಹಕಾರಿ ರಂಗ ಬೆಳೆಯಲಿದೆ : ಎಂ.ನರಸಿಂಹಮೂರ್ತಿ
ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಹಾಗೂ ಗ್ರಾಮದ ಮುಖಂಡ ಲಕ್ಷ್ಮಣ್ ರೆಡ್ಡಿ ಮಾತನಾಡಿ, ಹಲವು ಬಾರಿ ಶಂಖಮವಾರಪಲ್ಲಿ ಗ್ರಾಮದ ಸ್ಮಶಾಸನ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿ ಕೊಂಡಿದ್ದು, ತೆರವುಗೊಳಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗೆಯೇ ನಕಾಶೆಯಲ್ಲಿರುವಂತೆ ಸ್ಮಶಾನಕ್ಕೆ, ರೈತರ ಜಮೀನುಗಳಿಗೆ ದಾರಿಯನ್ನೂ ಕಲ್ಪಿಸದೇ, ಮೃತರ ಅಂತಿಮ ಸಂಸ್ಕಾರಕ್ಕೆ ಪರದಾಡುವಂತಾಗಿದೆ. ಹಾಗೆಯೇ ರೈತರು ಒಬ್ಬರ ಜಮೀನು ದಾಟಿ ಮತ್ತೊಬ್ಬರ ಜಮೀನುಗಳಿಗೆ ಹೋಗಲು ದಾರಿಗಳಿಲ್ಲ. ನಕಾಶೆಯಲ್ಲಿದ್ದರೂ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅನಿರ್ಧಿಷ್ಟಾವಧಿ ಧರಣಿಯ ಎಚ್ಚರಿಕೆ
ಇದೇ ವೇಳೆ ಸಿಪಿಎಂ ಪಕ್ಷದ ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ, ಈ ಭಾಗದಲ್ಲಿ ಸಾವಿನ ನಂತರವೂ ಜನರನ್ನು ಈ ಆಡಳಿತ ವೈಖರಿ ಕಾಡುತ್ತಿದೆ. ಶವ ಸಂಸ್ಕಾರಕ್ಕೆ ಹಲವೆಡೆ ಸೂಕ್ತ ಜಾಗವಿಲ್ಲ, ಸ್ಮಶಾನ ಜಾಗವಿದ್ದರೂ ಒತ್ತುವರಿ, ನಿರ್ವಹಣೆ ಕೊರತೆ, ದಾರಿ ಇಲ್ಲದಿರು ವುದು ಮುಂತಾದ ಕಾರಣಗಳಿಂದ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ತಾಲೂಕಿ ನೆಲ್ಲೆಡೆ ಸ್ಮಶಾನ ಜಾಗಗಳನ್ನು ಗುರ್ತಿಸಿ,ಅವುಗಳ ಸಂರಕ್ಷಣೆಗೆ ಕ್ರಮ ಜರುಗಿಸಬೇಕು. ಹಾಗೆಯೇ, ಶಂಖ ಮವಾರಪಲ್ಲಿ ಸ್ಮಶಾನ ಜಾಗದ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಸಿಪಿಎಂ ಮುಖಂಡರಾದ ರಘುರಾಮರೆಡ್ಡಿ, ಚನ್ನರಾಯಪ್ಪ, ಬಿಳ್ಳೂರು ನಾಗರಾಜ್, ಸೋಮ ಶೇಖರ್ ಗ್ರಾಮಸ್ಥರಾದ ಎಸ್.ಎನ್.ಆದಿನಾರಾಯಣಪ್ಪ, ಹರೀಶ,ನಾರಾಯಣ ಸ್ವಾಮಿ, ನಂಜುಂಡಪ್ಪ, ಗಂಗಪ್ಪ, ವೆಂಕಟೇಶಪ್ಪ, ಗುರ್ರಪ್ಪ, ಗಂಗರಾಜು, ಸಿ.ಬಾವನ್ನಾ, ನಾಗರಾಜ ಮತ್ತಿತರರು ಇದ್ದರು.