Chikkaballapur News: ಸಾಲ ಮರುಪಾವತಿಯಾದಲ್ಲಿ ಮಾತ್ರ ಸಹಕಾರಿ ರಂಗ ಬೆಳೆಯಲಿದೆ : ಎಂ.ನರಸಿಂಹಮೂರ್ತಿ
ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಬೇಕಾದರೆ ರೈತರು ತಾವು ತೆಗೆದುಕೊಂಡ ಬೆಳೆ ಸಾಲವನ್ನು ನಿಗ ಧಿತ ಅವಧಿಯಲ್ಲಿ ಮರು ಪಾವತಿಸಬೇಕು,ಕಾರ್ಯದರ್ಶಿಗಳು ಮತ್ತು ಸೊಸೈಟಿಯ ಸಿಬ್ಬಂದಿ ವರ್ಗದ ವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು,ಹಣಕಾಸು ನಿರ್ವಹಣೆಯಲ್ಲಿ ಆರ್ಥಿಕ ಶಿಸ್ತು ಪಾಲಿಸಬೇಕು ಎಂದರು
ಗೌರಿಬಿದನೂರು : ಕಸಬಾ ವಿಎಸ್‌ಎಸ್‌ಎನ್ ಸೊಸೈಟಿ ಮೊದಲಿನಿಂದಲೂ ರೈತರ ಒಳತಿಗಾಗಿ ಕಾರ್ಯ ನಿರ್ವಹಿಸುತ್ತಿದೆ, ನಮ್ಮ ಅವಧಿಯಲ್ಲಿ ಕೂಡ ಇದೇ ಪರಂಪರೆ ಮುಂದುವರೆಸಲಾಗುವುದು ಎಂದು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ.ನರಸಿಂಹಮೂರ್ತಿ ತಿಳಿಸಿದರು.
ನಗರದ ಕಸಬಾ ವಿಎಸ್‌ಎಸ್‌ಎನ್ ಸೊಸೈಟಿಯ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ನಂತರ ಸೊಸೈಟಿಯ ನಿರ್ದೇಶಕರು ಗಳಿಗೆ ಅಭಿನಂದನೆಗಳು ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಇದನ್ನೂ ಓದಿ: Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ
ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಬೇಕಾದರೆ ರೈತರು ತಾವು ತೆಗೆದುಕೊಂಡ ಬೆಳೆ ಸಾಲವನ್ನು ನಿಗಧಿತ ಅವಧಿಯಲ್ಲಿ ಮರು ಪಾವತಿಸಬೇಕು,ಕಾರ್ಯದರ್ಶಿಗಳು ಮತ್ತು ಸೊಸೈಟಿಯ ಸಿಬ್ಬಂದಿ ವರ್ಗದವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು,ಹಣಕಾಸು ನಿರ್ವಹಣೆಯಲ್ಲಿ ಆರ್ಥಿಕ ಶಿಸ್ತು ಪಾಲಿಸಬೇಕು ಎಂದರು.
ಕಸಬಾ ಸೊಸೈಟಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ಯನ್ನು ನಿಗದಿ ಪಡಿಸಲಾಗಿತ್ತು,ಒಟ್ಟು ಹನ್ನೆರಡು ನಿರ್ದೇಶಕರು ಹಾಗೂ ಡಿಸಿಸಿ ಬ್ಯಾಂಕ್ ಒಬ್ಬ ಪ್ರತಿನಿಧಿಯ ಬಲವನ್ನು ಹೊಂದಿದ್ದ ಕಸಬಾ ಸೊಸೈಟಿಯ ಅಧ್ಯಕ್ಷ ಸ್ಥಾನಕ್ಕೆ ಎಂ.ನರಸಿಂಹ ಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಗೌಡ ನಾಮಪತ್ರವನ್ನು ಸಲ್ಲಿಸಿದರು.ಅಧ್ಯಕ್ಷ ಸ್ಥಾನಕ್ಕೆ ಎಂ ನರಸಿಂಹಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಗೌಡ ಹೊರತುಪಡಿಸಿ ಬೇರಿನ್ಯಾರು ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶಿವಲಿಂಗಯ್ಯನವರು ಎಂ.ನರಸಿAಹಮೂರ್ತಿ ಅವರನ್ನು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀನಿವಾಸಗೌಡ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಮರಳೂರು ಗೋಪಾಲ್, ಕಾದಲವೇಣಿ ಬಾಲಕೃಷ್ಣ, ಅಸೆಡಾ ಗಂಗಾಧರ್, ಪ್ರಭಾಕರ್, ನಗರಸಭೆ ಸದಸ್ಯರಾದ ಪದ್ಮಾವತಮ್ಮ,ಮಂಜುನಾಥ್, ಅಬುಬೇಕರ್ ಹಾಗೂ ಸೊಸೈಟಿಯ ಕಾರ್ಯದರ್ಶಿ ಸತೀಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.