Rohit Sharma: ಓವಲ್ ಟೆಸ್ಟ್ ವೀಕ್ಷಣೆ ವೇಳೆ ರೋಹಿತ್ ಧರಿಸಿದ್ದ ವಾಚ್ ಮೌಲ್ಯ ಎಷ್ಟು ಗೊತ್ತಾ!
rohit sharma watch price: 2013ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಬಾರಿ ಟೆಸ್ಟ್ ಆಡಿದ್ದ ರೋಹಿತ್ ಶರ್ಮ, ಭಾರತ ಪರ 67 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 12 ಶತಕ, 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್ ಕಲೆಹಾಕಿದ್ದಾರೆ.


ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಜಿದ್ದಾಜಿದ್ದಿನ ಓವಲ್ ಟೆಸ್ಟ್(Oval test ind vs eng) ಪಂದ್ಯದ ಸೆಣಸಾಟದ ನಡುವೆಯೂ ಭಾರತ ಟೆಸ್ಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ(Rohit Sharma), ಧರಿಸಿದ್ದ ಕೈ ಗಡಿಯಾರ (ವಾಚ್) ಕ್ರೀಡಾಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು! ಪಂದ್ಯ ವೀಕ್ಷಣೆಗೆ ಬಂದಿದ್ದ ರೋಹಿತ್ ಶರ್ಮ ಧರಿಸಿದ್ದ ಗುಲಾಬಿ ಚಿನ್ನದ ಲೇಪಿತ ಕೈ ಗಡಿಯಾರ ಬರೋಬ್ಬರಿ 2.46 ಕೋಟಿ ರೂಪಾಯಿ(rohit sharma watch price) ಮೌಲ್ಯದ್ದಾಗಿದೆ.
ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಜಂಬೊ ಎಕ್ಸ್‌ಟ್ರಾ-ಥಿನ್ ಸ್ಮೋಕ್ಡ್ ಬರ್ಗಂಡಿ ಟೈಟಾನಿಯಂ ವಾಚ್ ಇದಾಗಿದೆ. ಈ ರಾಯಲ್ ಓಕ್ ಜಂಬೋ ಮಾದರಿಯ ವಾಚ್‌ಗಳನ್ನು ಕೈಗಳಿಂದ ವಿನ್ಯಾಸಗೊಳಿಸಾಗಿದೆ. ಇದು ಕ್ರೀಡೆ ಮತ್ತು ಅತ್ಯಾಧುನಿಕತೆಯನ್ನು ಅದ್ಭುತವಾಗಿ ಸಂಯೋಜಿಸುತ್ತದೆ.
ಕಳೆದೊಂದು ವರ್ಷದಿಂದ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದ ರೋಹಿತ್, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೂ ಲಯಕ್ಕೆ ಮರಳಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ನಲ್ಲಿ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಕಳಪೆ ಆಟದಿಂದಾಗಿ 5ನೇ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡ ಪ್ರಕಟಿಸಲು ಕೆಲವೇ ಇನಗಳು ಬಾಕಿ ಇರುವಾಗ ರೋಹಿತ್ ದಿಢೀರ್ ಟೆಸ್ಟ್ ನಿವೃತ್ತಿ ಪ್ರಕಟಿಸಿದ್ದರು.
2013ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಬಾರಿ ಟೆಸ್ಟ್ ಆಡಿದ್ದ ರೋಹಿತ್, ಭಾರತ ಪರ 67 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 12 ಶತಕ, 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್ ಕಲೆಹಾಕಿದ್ದಾರೆ.
ಟೆಸ್ಟ್‌ನಲ್ಲಿ ರೋಹಿತ್ ಸಾಧನೆ
ಪಂದ್ಯ: 67
ರನ್: 4301
ಗರಿಷ್ಠ ಸ್ಕೋರ್: 212
ಶತಕ: 12
ಅರ್ಧಶತಕ: 18
ಸಿಕ್ಸರ್: 88