RRB Recruitment 2025: ಅಟೆನ್ಷನ್ ಪ್ಲೀಸ್; 32 ಸಾವಿರ ಹುದ್ದೆಗಳ ಭರ್ತಿಯ ಕೊನೆಯ ದಿನಾಂಕ ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ
ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ದೇಶಾದ್ಯಂತ ಬರೋಬ್ಬರಿ 32,438 ಹುದ್ದೆಗಳಿದ್ದು, 10ನೇ ತರಗತಿ ಪಾಸಾದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಅರ್ಜಿ ಸಲ್ಲಿಸಲು ಫೆ. 22 ಕೊನೆಯ ದಿನವಾಗಿತ್ತು. ಇದೀಗ ಕೊನೆಯ ದಿನವನ್ನು ಮಾ. 1ರ ತನಕ ವಿಸ್ತರಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿದೆ (RRB Recruitment 2025). ಅಸಿಸ್ಟಂಟ್, ಟ್ರ್ಯಾಕ್ ಮೈಂಟೈನರ್ ಸೇರಿ ದೇಶಾದ್ಯಂತ ಬರೋಬ್ಬರಿ 32,438 ಹುದ್ದೆಗಳಿದ್ದು, 10ನೇ ತರಗತಿ ಪಾಸಾದವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು (Job Guide). ಈ ಹಿಂದೆ ಅರ್ಜಿ ಸಲ್ಲಿಸಲು ಫೆ. 22 ಕೊನೆಯ ದಿನವಾಗಿತ್ತು. ಇದೀಗ ಕೊನೆಯ ದಿನವನ್ನು ಮಾ. 1ರ ತನಕ ವಿಸ್ತರಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಪಾಯಿಂಟ್ಸ್‌ಮ್ಯಾನ್-ಬಿ (Pointsman-B)- 5,058 ಹುದ್ದೆ
ಅಸಿಸ್ಟಂಟ್ (ಟ್ರ್ಯಾಕ್ ಮೆಷಿನ್) - 799 ಹುದ್ದೆ
ಸಹಾಯಕ (ಬ್ರಿಡ್ಜ್) - 301 ಹುದ್ದೆ
ಟ್ರ್ಯಾಕ್ ನಿರ್ವಹಣೆ ಗ್ರೇಡ್-IV - 13,187 ಹುದ್ದೆ
ಅಸಿಸ್ಟಂಟ್ ಪಿ-ವೇ - 257 ಹುದ್ದೆ
ಅಸಿಸ್ಟಂಟ್ (ಸಿ & ಡಬ್ಲ್ಯು) - 2,587 ಹುದ್ದೆ
ಅಸಿಸ್ಟಂಟ್ ಟಿಆರ್‌ಡಿ - 1,381 ಹುದ್ದೆ
ಅಸಿಸ್ಟಂಟ್ ಲೋಕೋ ಶೆಡ್ (ಡೀಸೆಲ್) - 2,012 ಹುದ್ದೆ
ಅಸಿಸ್ಟಂಟ್ ಲೋಕೋ ಶೆಡ್ (ಎಲೆಕ್ಟ್ರಿಕಲ್) - 420 ಹುದ್ದೆ
ಅಸಿಸ್ಟಂಟ್ ಆಪರೇಷನ್ಸ್ (ಎಲೆಕ್ಟ್ರಿಕಲ್) - 950 ಹುದ್ದೆ
ಅಸಿಸ್ಟಂಟ್ (ಎಸ್ & ಟಿ) - 744 ಹುದ್ದೆ
ಅಸಿಸ್ಟಂಟ್ ಟಿಎಲ್ & ಎಸಿ - 1,041 ಹುದ್ದೆ
ಅಸಿಸ್ಟಂಟ್ ಟಿಎಲ್ &ಎಸಿ (ವರ್ಕ್ ಶಾಪ್) - 624 ಹುದ್ದೆ
ಅಸಿಸ್ಟಂಟ್ (ವರ್ಕ್‌ಶಾಪ್) (ಮೆಕ್) - 3,077 ಹುದ್ದೆ
10ನೇ ತರಗತಿ ಮತ್ತು ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 36 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 250 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT), ಫಿಸಿಕಲ್ ಎಫಿಶ್ಯೆನ್ಸಿ ಟೆಸ್ಟ್ (PET), ದಾಖಲಾತಿ ಪರಿಶೀಲನೆ (Document Verification), ವೈದ್ಯಕೀಯ ಪರೀಕ್ಷೆ (Medical Examination) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಿಬಿಟಿ ತಲಾ 1 ಅಂಕದ 100 ಪ್ರಶ್ನೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಸಾಮಾನ್ಯ ವಿಜ್ಞಾನ, ಗಣಿತ ಶಾಸ್ತ್ರ, ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಜನರಲ್ ಅವೆರೆನೆಸ್ ಮತ್ತು ಕರೆಂಟ್ ಅಫೈರ್ಸ್ ಪ್ರಶ್ನೆಗಳಿರುತ್ತವೆ.
RRB Recruitment 2025 ದಿನಾಂಕ ವಿಸ್ತರಣೆಯ ಪ್ರಕಟಣೆ ಓದಲು ಇಲ್ಲಿ ಕ್ಲಿಕ್ ಮಾಡಿ.
RRB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://www.rrbapply.gov.in/#/auth/landing).
* ಹೆಸರು ನೋಂದಾಯಿಸಿ.
* ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
* ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಹೆಲ್ಪ್‌ಲೈನ್ ನಂಬರ್: 0172-565-3333 and 9592001188ಕ್ಕೆ ಕರೆ ಮಾಡಿ.
ಈ ಸುದ್ದಿಯನ್ನೂ ಓದಿ: BPNL Recruitment 2025: ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್‌ನಲ್ಲಿದೆ 2,152 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ