Praneetha Subhash: ಎಚ್.ಎಸ್.ಡಬ್ಲ್ಯೂ.ದಿಂದ ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬೆಂಗಳೂರಿನಲ್ಲಿ ಬಿಡುಗಡೆ
ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆ ಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ.
-
ಬೆಂಗಳೂರು: ಎಂಬ್ರಾಯಿಡರಿ ತಂತ್ರಜ್ಞಾನ ವಲಯವು ಬೆಂಗಳೂರಿನಲ್ಲಿ ಮಹತ್ತರ ಹೆಜ್ಜೆ ಇರಿಸಿದ್ದು ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು 1500 ಆರ್.ಪಿ.ಎಂ.ವರೆಗಿನ ವೇಗ ತಲುಪುವ ಯಂತ್ರ ಬೈ ಎಚ್.ಎಸ್.ಡಬ್ಲ್ಯೂ.ವಿನ ಟರ್ಬೊ 1.5 ಬಿಡುಗಡೆ ಮಾಡಿದರು ಮತ್ತು ಇದು ಭಾರತದ ಅತ್ಯಂತ ವೇಗದ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವಾಗಿ ತನ್ನ ಸ್ಥಾನ ದೃಢೀಕರಿಸಿಕೊಂಡಿದೆ.
ಈ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಎಂಬ್ರಾಯಿಡರಿ ವೃತ್ತಿಪರರು ಮತ್ತು ಉದ್ಯಮದ ಪಾಲುದಾರರು ಒಳಗೊಂಡಿದ್ದು ಅವರು ಎಂಬ್ರಾಯಿಡರಿ ಮೆಷಿನ್ ಉದ್ಯಮ ದಲ್ಲಿ 13 ವರ್ಷಗಳು ಪೂರೈಸಿದ ಸೂರತ್ ಮೂಲದ ಕಂಪನಿಯ ಹೊಚ್ಚಹೊಸ ತಂತ್ರಜ್ಞಾನ ಕಾಣಲು ಉಪಸ್ಥಿತರಿದ್ದರು.
ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ. ಕಂಪನಿಯು ಇಂದು ಭಾರತ ದಾದ್ಯಂತ 6000ಕ್ಕೂ ಹೆಚ್ಚು ಗ್ರಾಹಕರು ಹಾಗೂ ಹಲವಾರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುತ್ತಿದ್ದು ಅವರಲ್ಲಿ ಬಹಳಷ್ಟು ಬಳಕೆದಾರರು ಎಂಬ್ರಾಯಿಡರಿ ಉತ್ಪಾದನೆಯ ಸಣ್ಣ ವ್ಯಾಪಾರಗಳನ್ನು ನಿರ್ಮಿಸಿಕೊಂಡಿದ್ದಾರೆ.
ಇದನ್ನೂ ಓದಿ: Pranitha Subhash: ಮುಖ್ಯಮಂತ್ರಿಯನ್ನು ಭೇಟಿಯಾದ ನಟಿ ಪ್ರಣಿತಾ ಸುಭಾಷ್
ಹೊಸದಾಗಿ ಬಿಡುಗಡೆಯಾದ ಟರ್ಬೊ 1.5 ಅನ್ನು ವೇಗ ಮತ್ತು ಉತ್ಪಾದನೆಯ ದಕ್ಷತೆಗೆ ಆದ್ಯತೆ ನೀಡಿ ವಿನ್ಯಾಸಗೊಳಿಸಲಾಗಿದೆ.
ಎಚ್.ಎಸ್.ಡಬ್ಲ್ಯೂ. ಟರ್ಬೊ 1.5 ವಿಶೇಷತೆಗಳು:
10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ
12 ಸೂಜಿಯ ಕಾನ್ಫಿಗರೇಷನ್
ಗರಿಷ್ಠ ವೇಗ 1500 ಆರ್.ಪಿ.ಎಂ.
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
ದೊಡ್ಡ ಎಂಬ್ರಾಯಿಡರಿ
5 ವರ್ಷಗಳ ವಾರೆಂಟಿ
ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತು ಲೆಹಂಗಾ ಕಲಿ ವರ್ಕ್ ಗೆ ಸೂಕ್ತ
ಈ ಬಿಡುಗಡೆಯ ಕಾರ್ಯಕ್ರಮ ಕುರಿತು ಎಚ್.ಎಸ್.ಡಬ್ಲ್ಯೂ ಸಂಸ್ಥಾಪಕ ತಪನ್ ಕಪಾಡಿಯಾ ಕಂಪನಿಯು ಸದಾ ವ್ಯಕ್ತಿಗಳಿಗೆ ಬರೀ ಸಾಧನ ನಿರ್ವಹಿಸುವುದರ ಬದಲಿಗೆ ಉದ್ಯಮಗಳನ್ನು ನಿರ್ಮಿಸಲು ನೆರವಾಗುತ್ತದೆ ಎಂದರು.
“ಎಂಬ್ರಾಯಿಡರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಿದಾಗ ಜೀವನಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ” ಎಂದು ತಪನ್ ಕಪಾಡಿಯಾ ಹೇಳಿದರು. “ನಮ್ಮ ಯಂತ್ರಗಳನ್ನು ಸಣ್ಣದಾಗಿ ಪ್ರಾರಂಭಿಸಿ ನಂತರ ತಮ್ಮದೇ ಉದ್ಯಮಗಳನ್ನು ನಿರ್ಮಿಸುವ ಜನರಿಂದ ಬಳಸಲ್ಪಡುತ್ತವೆ. ಟರ್ಬೊ 1.5 ಅನ್ನು ಅವರು ಬೆಳೆಯಲು ಅಗತ್ಯವಾದ ವೇಗ ಮತ್ತು ದಕ್ಷತೆ ನೀಡಲು ನಿರ್ಮಿಸಲಾಗಿದೆ” ಎಂದರು.
ಟರ್ಬೊ 1.5 ನೊಂದಿಗೆ ಎಚ್.ಎಸ್.ಡಬ್ಲ್ಯೂ. ಎರಡು ಇತರೆ ಸಿಂಗಲ್ ಹೆಡ್ ಎಂಬ್ರಾ ಯಿಡರಿ ಯಂತ್ರಗಳನ್ನೂ ಈ ಹೊಸ ಶ್ರೇಣಿಯ ಭಾಗವಾಗಿ ಬಿಡುಗಡೆ ಮಾಡಿದೆ.
ಅವುಗಳಲ್ಲಿ ಒಂದು ಅಲ್ಟ್ರಾ, ಇದು ಕಂಪನಿಯ ಅತ್ಯಂತ ಯಶಸ್ವಿ 5ಜಿ ಸೀರೀಸ್ ಉನ್ನತೀ ಕರಿಸಿದ ಆವೃತ್ತಿಯಾಗಿದೆ. ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವನ್ನು ಗಾರ್ಮೆಂಟ್ ಉದ್ಯಮಗಳಿಗೆ ಮತ್ತು ವಿಶ್ವಾಸಾರ್ಹ ಉತ್ಪಾದನೆಯ ವೇಗಗಳು ಮತ್ತು ದೊಡ್ಡ ಕೆಲಸದ ಪ್ರದೇಶ ಹೊಂದಿರುವ ಎಂಬ್ರಾಯಿಡರಿ ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿದೆ.
ಎಚ್.ಎಸ್.ಡಬ್ಲ್ಯೂ ಅಲ್ಟ್ರಾ ವಿಶೇಷತೆಗಳು:
10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ
12 ಸೂಜಿಯ ಸೆಟಪ್
ಗರಿಷ್ಠ ವೇಗ 1200 ಆರ್.ಪಿ.ಎಂ.
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
5 ವರ್ಷಗಳ ವಾರೆಂಟಿ
ಗಾರ್ಮೆಂಟ್ಸ್ ಮತ್ತು ಕಸ್ಟಮೈಸ್ಡ್ ಟೆಕ್ಸ್ಟೈಲ್ ವರ್ಕ್ ಗೆ ದೊಡ್ಡ ಎಂಬ್ರಾಯಿಡರಿ ಪ್ರದೇಶವಿದ್ದವರಿಗೆ ಸೂಕ್ತ
ಈ ಬಿಡುಗಡೆಯಾದ ಮೂರನೇ ಮಾದರಿಯನ್ನು ನಿಯೊ, ಇದು ಸಿಂಗಲ್ ಹೆಡ್ ಎಂಬ್ರಾ ಯಿಡರಿ ಯಂತ್ರವಾಗಿದ್ದು ಇದನ್ನು ಮೊದಲ ಸಲದ ಬಳಕೆದಾರರಿಗೆ ಮತ್ತು ಸಣ್ಣ ಉತ್ಪಾದನೆಯ ಸೆಟಪ್ ಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರವು ಸುಲಭ ಬಳಕೆ ಮತ್ತು ಪ್ರತಿನಿತ್ಯದ ಎಂಬ್ರಾಯಿಡರಿ ಕೆಲಸಕ್ಕೆ ಪ್ರಾಯೋಗಿಕ ವಿನ್ಯಾಸಕ್ಕೆ ಆದ್ಯತೆ ನೀಡುತ್ತದೆ.
ಎಚ್.ಎಸ್.ಡಬ್ಲ್ಯೂ. ನಿಯೊ ವಿಶೇಷತೆಗಳು:
12 ಸೂಜಿಯ ಸಿಸ್ಟಂ
ಗರಿಷ್ಠ ವೇಗ 1200 ಆರ್.ಪಿ.ಎಂ.
ಕಿರಿದಾದ ಮತ್ತು ಬಳಕೆದಾರ ಸ್ನೇಹಿ ವಿನ್ಯಾಸ
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
2 ವರ್ಷಗಳ ವಾರೆಂಟಿ
ಕ್ಯಾಪ್ ಗಳು, ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತ ಲೆಹಂಗಾ ಕಲಿ ವರ್ಕ್ ಗೆ ಸೂಕ್ತ
ಈ ಕಾರ್ಯಕ್ರಮದ ಸಂದರ್ಭದಲ್ಲಿ ನಟಿ ಪ್ರಣೀತಾ ಸುಭಾಷ್ ಭಾಗವಹಿಸಿದವರೊಂದಿಗೆ ಸಂವಹನ ನಡೆಸಿದರು ಮತ್ತು ವ್ಯಕ್ತಿಗಳಲ್ಲಿ ಎಂಬ್ರಾಯಿಡರಿಯು ಆದಾಯದ ಮೂಲವಾಗಿ ಉದ್ಯಮಶೀಲತೆ ಕುರಿತಾಗಿ ವೃದ್ಧಿಸುತ್ತಿರುವ ಆಸಕ್ತಿ ಕುರಿತು ಮಾತನಾಡಿದರು.
ಹಲವು ವರ್ಷಗಳಿಂದ ಎಚ್.ಎಸ್.ಡಬ್ಲ್ಯೂ.ಯಂತ್ರಗಳು ಸಾವಿರಾರು ಜನರಿಗೆ ಎಂಬ್ರಾಯಿ ಡರಿ ಉದ್ಯಮಗಳನ್ನು ಅವರೇ ಸ್ವಂತ ಪ್ರಾರಂಭಿಸಲು ನೆರವಾಗುತ್ತವೆ. ಈ ಉದ್ಯಮಿಗಳಲ್ಲಿ ಹಲವರು ಮಹಿಳೆಯರಾಗಿದ್ದು ಅವರು ಮನೆಯಿಂದ ಸಣ್ಣ ಎಂಬ್ರಾಯಿಡರಿ ಯೂನಿಟ್ ಗಳಿಂದ ಪ್ರಾರಂಭಿಸುತ್ತಾರೆ, ಅವರಲ್ಲಿ ಸ್ಥಿರವಾದ ಆದಾಯದ ಅವಕಾಶಗಳನ್ನು ನಿರೀಕ್ಷಿಸುವ ವಿಧವೆಯರು ಮತ್ತು ಒಂಟಿ ತಾಯಂದಿರು ಇದ್ದಾರೆ.
ಕಂಪನಿಯು ತನ್ನ ಗ್ರಾಹಕರಿಗೆ ಆನ್ಲೈನ್ ತರಬೇತಿ ಮತ್ತು ಸೇವಾ ನೆರವಿನೊಂದಿಗೆ ಬೆಂಬಲಿ ಸುತ್ತದೆ, ಇದರಿಂದ ಮೊದಲ ಸಲದ ಉದ್ಯಮಿಗಳು ತಾಂತ್ರಿಕ ಮಾರ್ಗದರ್ಶನಕ್ಕೆ ಪ್ರಯಾಣಿ ಸುವ ಅಗತ್ಯವಿಲ್ಲದೆ ಯಂತ್ರದ ಬಳಕೆ ಮತ್ತು ಉತ್ಪಾದನೆಯ ತಂತ್ರಗಳನ್ನು ಕಲಿಯ ಬಹುದು.
ಅಲ್ಟ್ರಾ ಮತ್ತು ನಿಯೊ ಮಾಡೆಲ್ ಗಳಿಗೆ ಟರ್ಬೊ 1.5 ಬಿಡುಗಡೆಯಿಂದ ಎಚ್.ಎಸ್. ಡಬ್ಲ್ಯೂ ಮೂರು ಹೊಸ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನು ತನ್ನ ಗಾರ್ಮೆಂಟ್ ಉದ್ಯಮಗಳ ಪೋರ್ಟ್ ಫೋಲಿಯೊಗೆ ಸೇರಿಸಿದೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರೀಕ್ಷಿಸುವ ಉದ್ದೇಶದ ಉದ್ಯಮಿಗಳಿಗೆ ತಂದಿದೆ.