ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

RRB Recruitment 2025: 1,036 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೀಗೆ ಅಪ್ಲೈ ಮಾಡಿ

RRB Recruitment 2025: ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವಿವಿಧ ವಿಷಯಗಳ ಪೋಸ್ಟ್‌ ಗ್ರಾಜ್ಯುಯೆಟ್‌ ಟೀಚರ್ಸ್ (PGT), ಸೈಂಟಿಫಿಕ್‌ ಸೂಪರ್‌ವೈಸರ್‌ (ಎರ್ಗೋನೊಮಿಕ್ಸ್‌ ಮತ್ತು ಟ್ರೈನಿಂಗ್)‌, ಲೈಬ್ರೇರಿಯನ್‌ ಸೇರಿ ಒಟ್ಟು 1,036 ಹುದ್ದೆಗಳಿವೆ. 12ನೇ ತರಗತಿ, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಫೆ. 6.

ರೈಲ್ವೆ ಇಲಾಖೆಯಲ್ಲಿದೆ ಬರೋಬ್ಬರಿ 1,036 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಸಾಂದರ್ಭಿಕ ಚಿತ್ರ

Profile Ramesh B Jan 18, 2025 4:12 PM

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (RRB Recruitment 2025). ವಿವಿಧ ವಿಷಯಗಳ ಪೋಸ್ಟ್‌ ಗ್ರಾಜ್ಯುಯೆಟ್‌ ಟೀಚರ್ಸ್ (PGT), ಸೈಂಟಿಫಿಕ್‌ ಸೂಪರ್‌ವೈಸರ್‌ (ಎರ್ಗೋನೊಮಿಕ್ಸ್‌ ಮತ್ತು ಟ್ರೈನಿಂಗ್)‌, ಲೈಬ್ರೇರಿಯನ್‌ ಸೇರಿ ಒಟ್ಟು 1,036 ಹುದ್ದೆಗಳಿವೆ. 12ನೇ ತರಗತಿ, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಫೆ. 6 (Job Guide).

ಹುದ್ದೆಗಳ ವಿವರ

ವಿವಿಧ ವಿಷಯಗಳ ಪೋಸ್ಟ್‌ ಗ್ರ್ಯಾಜುಯೆಟ್‌ ಟೀಚರ್ಸ್‌ (PGT) - 187 ಹುದ್ದೆ

ಸೈಂಟಿಫಿಕ್‌ ಸೂಪರ್‌ ವೈಸರ್‌ (ಎರ್ಗೋನೊಮಿಕ್ಸ್‌ ಮತ್ತು ಟ್ರೈನಿಂಗ್‌)- 3 ಹುದ್ದೆ

ವಿವಿಧ ವಿಷಯಗಳ ಗ್ರ್ಯಾಜುಯೆಟ್‌ ಟೀಚರ್‌ (TGT)- 338 ಹುದ್ದೆ

ಚೀಫ್‌ ಲಾ ಅಸಿಸ್ಟಂಟ್‌- 54 ಹುದ್ದೆ

ಪಬ್ಲಿಕ್‌ ಪ್ರಾಸಿಕ್ಯೂಟರ್‌- 20 ಹುದ್ದೆ

ಫಿಸಿಕಲ್‌ ಟ್ರೈನಿಂಗ್‌ ಇನ್ಸ್‌ಪೆಕ್ಟರ್‌ (ಇಂಗ್ಲಿಷ್‌ ಮೀಡಿಯಂ)- 18 ಹುದ್ದೆ

ಸೈಂಟಿಫಿಕ್‌ ಅಸಿಸ್ಟಂಟ್‌ / ಟ್ರೈನಿಂಗ್‌- 2 ಹುದ್ದೆ

ಜೂನಿಯರ್‌ ಟ್ರಾನ್ಸ್‌ಲೇಟರ್‌ / ಹಿಂದಿ- 130 ಹುದ್ದೆ

ಸೀನಿಯರ್‌ ಪಬ್ಲಿಸಿಟಿ ಇನ್ಸ್‌ಪೆಕ್ಟರ್‌- 3 ಹುದ್ದೆ

ಸ್ಟಾಫ್‌ ಆ್ಯಂಡ್‌ ವೆಲ್‌ಫೇರ್‌ ಇನ್ಸ್‌ಪೆಕ್ಟರ್‌- 59 ಹುದ್ದೆ

ಲೈಬ್ರೇರಿಯನ್‌- 10 ಹುದ್ದೆ

ಮ್ಯೂಸಿಕ್‌ ಟೀಚರ್‌ (ಮಹಿಳೆ)- 3 ಹುದ್ದೆ

ವಿವಿಧ ವಿಷಯಗಳ ಪ್ರೈಮರಿ ರೈಲ್ವೆ ಟೀಚರ್‌- 188 ಹುದ್ದೆ

ಅಸಿಸ್ಟಂಟ್‌ ಟೀಚರ್‌ (ಮಹಿಳೆ) (ಕಿರಿಯ ಶಾಲೆ)- 2 ಹುದ್ದೆ

ಲ್ಯಾಬರೋಟರಿ ಅಸಿಸ್ಟಂಟ್‌/ಸ್ಕೂಲ್‌- 7 ಹುದ್ದೆ

ಲ್ಯಾಬ್‌ ಅಸಿಸ್ಟಂಟ್‌ ಗ್ರೇಟ್‌ III (ಕೆಮಿಸ್ಟ್‌ ಮತ್ತು ಮೆಟಲರ್ಜಿಸ್ಟ್‌)- 12 ಹುದ್ದೆ

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 48 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌/ಸಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯು ಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಒಬಿಸಿ / ಪಿಡಬ್ಲ್ಯುಬಿಡಿ / ಮಾಜಿ ಯೋಧರು / ಮಹಿಳಾ / ತೃತೀಯ ಲಿಂಗಿ ಅಭ್ಯರ್ಥಿಗಳು 250 ರೂ. ಮತ್ತು ಇತರ ಎಲ್ಲ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

ಆಯ್ಕೆ ವಿಧಾನ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT), ಸ್ಕಿಲ್‌ ಅಸ್ಸೆಸ್‌ಮೆಂಟ್ಸ್‌, ಸ್ಟೆನೊಗ್ರಫಿ ಸ್ಕಿಲ್‌ ಟೆಸ್ಟ್‌, ಟ್ರಾನ್ಸ್‌ಲೇಷನ್‌ ಟೆಸ್ಟ್‌, ಟೀಚಿಂಗ್‌ ಸ್ಕಿಲ್‌ ಟೆಸ್ಟ್‌, ದಾಖಲಾತಿ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

RRB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಈ ಸುದ್ದಿಯನ್ನೂ ಓದಿ: Job Guide: ಆಯಿಲ್‌ & ನ್ಯಾಚುರಲ್‌ ಕಾರ್ಪೋರೇಷನ್‌ನಲ್ಲಿದೆ 108 ಹುದ್ದೆ; ಆನ್‌ಲೈನ್‌ ಮೂಲಕ ಹೀಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ

* ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
(rrbapply.gov.in.)

* ಹೆಸರು ನೋಂದಾಯಿಸಿ.

* ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.

* ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.

* ಅರ್ಜಿ ಶುಲ್ಕ ಪಾವತಿಸಿ.

* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

* ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 9592001188, 01725653333ಕ್ಕೆ ಕರೆ ಮಾಡಿ.