AICC: ಎಐಸಿಸಿ ಪರಿಶಿಷ್ಟ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ಕೆಪಿಸಿಸಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್, ಎಂ.ಎಲ್.ಸಿ ಜಕ್ಕಪ್ಪನವರ್ ನೇಮಕ
ದಲಿತ ಚಳವಳಿಯ ಮಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಜಕ್ಕಪ್ಪನವರ್ ಹಾಗೂ ಸಾಮಾಜಿಕ ಕಾರ್ಯಕರ್ತ, ಪರಿಶಿಷ್ಟರ ಪರ ಹೋರಾಟ ಮಾಡುತ್ತಿರುವ ಡಾ. ಆನಂದ್ ಕುಮಾರ್ ಅವರಿಗೆ ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದ ಸಂಘಟನೆಯಲ್ಲಿ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.

-

ಬೆಂಗಳೂರು: ಎಐಸಿಸಿ(AICC) ಪರಿಶಿಷ್ಟ ವಿಭಾಗವನ್ನು ಮತ್ತಷ್ಟು ವಿಸ್ತರಿಸಿದ್ದು, ಪಕ್ಷದ ವಿವಿಧ ಘಟಕ ಗಳು, ರಾಜ್ಯಗಳಿಗೆ ಹೊಸದಾಗಿ ೪೫ ಮಂದಿಯನ್ನು ರಾಷ್ಟ್ರೀಯ ಸಂಯೋಜಕರನ್ನು ನೇಮಿಸ ಲಾಗಿದೆ.
ಕರ್ನಾಟಕದಿಂದ ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ್, ಕೆಪಿಸಿಸಿ(KPCC) ಕಾರ್ಯದರ್ಶಿ ಡಾ. ಆನಂದ ಕುಮಾರ್ ಅವರನ್ನು ಮಹಾರಾಷ್ಟ್ರದ ಸಂಯೋಜಕರನ್ನಾಗಿ ನೇಮಿಸಿ ಮಹಾರಾಷ್ಟ್ರದ ಉಸ್ತುವಾರಿ ನೀಡಿ ಎಐಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ನೇಮಕ ಮಾಡಿದ್ದಾರೆ.
ದಲಿತ ಚಳವಳಿಯ ಮಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಜಕ್ಕಪ್ಪನವರ್ ಹಾಗೂ ಸಾಮಾಜಿಕ ಕಾರ್ಯಕರ್ತ, ಪರಿಶಿಷ್ಟರ ಪರ ಹೋರಾಟ ಮಾಡುತ್ತಿರುವ ಡಾ. ಆನಂದ್ ಕುಮಾರ್ ಅವರಿಗೆ ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದ ಸಂಘಟನೆಯಲ್ಲಿ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ದಲಿತ ಸಮುದಾಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಅತ್ಯುತ್ತಮ ಸಾಮರ್ಥ್ಯದ ಮೂಲಕ ಸಂಘಟನೆ ಮಾಡಬೇಕು. ಜೊತೆಗೆ, ಶೋಷಿತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಪರಿಶಿಷ್ಟರನ್ನು ಪಕ್ಷದತ್ತ ಸೆಳೆಯಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಪ್ರತಿ ತಿಂಗಳಿಗೊಮ್ಮೆ ತಮ್ಮ ಕಾರ್ಯ ಚಟುವಟಿಕೆ ಬಗ್ಗೆ ಎಐಸಿಸಿಗೆ ವರದಿ ನೀಡಬೇಕು ಎಂದು ರಾಜೇಂದ್ರ ಪಾಲ್ ಗೌತಮ್ ತಮ್ಮ ನೇಮಕಾತಿ ಪತ್ರದಲ್ಲಿ ಸೂಚಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಡಾ. ಆನಂದ್ ಕುಮಾರ್, ತಮಗೆ ಪಕ್ಷ ವಹಿಸಿರುವ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.