Saif Ali Khan : ಕುಟುಂಬವನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟರಾ ಸೈಫ್ ಅಲಿ ಖಾನ್ ? ಆ 30 ನಿಮಿಷದಲ್ಲಿ ನಡೆದಿದ್ದಾದರೂ ಏನು?
ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ನಡೆದಿದ್ದು, ಅವರ ಮನೆಕೆಲಸದಾಕೆ ಇದೀಗ ರೋಚಕ ಸಂಗತಿಗಳನ್ನು ಬಚ್ಚಿಟ್ಟಿದ್ದಾರೆ. ದರೋಡೆಕೋರನ ಜೊತೆ ಸೈಫ್ ಹೋರಾಡಿದ ಬಗ್ಗೆ ಆಕೆ ಪೊಲೀಸ್ ಹೇಳಿಕೆಯಲ್ಲಿ ದಾಖಲಿಸಿದ್ದಾಳೆ.
ಮುಂಬೈ ಜ 17, 2025 : ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೇಲೆ ದಾಳಿ ನಡೆದಿದೆ. ಸದ್ಯ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆಕೋರನೊಬ್ಬ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ಪರಿಣಾಮ ಖಾನ್ ಅವರಿಗೆ ತೀವೃತರನಾದ ಗಾಯಗಳಾಗಿವೆ. ಸದ್ಯ ದಾಳಿಯ ಬಗ್ಗೆ ಹಲವು ಮಾಹಿತಿಗಳು ತೆರೆದುಕೊಂಡಿದ್ದು, ಬೆಚ್ಚಿ ಬೀಳಿಸುವಂತಿದೆ. ಖಾನ್ ಅವರ ಎರಡನೇ ಪುತ್ರ ನಾಲ್ಕು ವರ್ಷದ ಜಹಾಂಗೀರ್ ಮಲಗಿದ್ದ ಕೋಣೆಗೆ ಆರೋಪಿ ನುಗ್ಗಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಜೇಹ್‌ನನ್ನು ನೋಡಿಕೊಳ್ಳುವ ದಾದಿ ಎಲಿಯಮ್ಮ ಫಿಲಿಪ್ ದೂರಿನಲ್ಲಿ ತಿಳಿಸಿದ್ದಾರೆ.
ಸೈಫ್ ಕುಟುಂಬ ಅಪಾರ್ಟ್‌ಮೆಂಟ್‌ನ 11 ಮತ್ತು 12 ನೇ ಮಹಡಿಯಲ್ಲಿ ವಾಸಿಸುತ್ತಿದೆ. ಈ ಘಟನೆಯು 11 ನೇ ಮಹಡಿಯಲ್ಲಿ ಸಂಭವಿಸಿದೆ, ಇದರಲ್ಲಿ ಮೂರು ಕೊಠಡಿಗಳಿವೆ ಒಂದು ಸೈಫ್ ದಂಪತಿಗಳದ್ದು, ಇನ್ನೊಂದು ಅವರ ಮಗ ತೈಮೂರ್ ಮತ್ತು ಅವರ ದಾದಿ ಗೀತಾ ಇದ್ದರೆ, ಮತ್ತು ಮೂರನೆಯದು ಜಹಾಂಗೀರ್ ಇರುವುದು ಅದರಲ್ಲಿ ಇಬ್ಬರು ಕೆಲಸದವರಿದ್ದು, ಒಬ್ಬರು ಫಿಲಿಪ್ ಮತ್ತು ಇನ್ನೊಬ್ಬ ದಾದಿ, ಜುನು. ಘಟನೆಯ ಬಗ್ಗೆ ಎಲಿಯಮ್ಮ ಫಿಲಿಪ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಜಹಾಂಗೀರ್‌ನನ್ನು ಮಲಗಿಸಿದರು. ಸುಮಾರು 2 ಗಂಟೆಗೆ, ಏನೋ ಶಬ್ದದಿಂದ ಎಚ್ಚರಗೊಂಡಳು. ಆಗ ಬಾತ್ರೂಮ್ ಲೈಟ್ ಆನ್ ಆಗಿರುವುದನ್ನು ಅವರು ನೋಡಿದ್ದಾರೆ . ಆರಂಭದಲ್ಲಿ ಕರೀನಾ ಕಪೂರ್ ಮಗುವನ್ನು ಪರೀಕ್ಷಿಸಲು ಬಂದಿದ್ದಾರೆ ಎಂದು ಭಾವಿಸಿದ್ದಳು. ಆದರೆ ಅವರಿಗೆ ಅಲ್ಲೆನೋ ಸರಿ ಇಲ್ಲ ಎಂದು ತಿಳಿಯಲು ಹೆಚ್ಚು ಸಮಯ ಬೇಕಿರಲಿಲ್ಲ. ಟೋಪಿ ಧರಿಸಿದ ವ್ಯಕ್ತಿ ಸ್ನಾನಗೃಹದಿಂದ ಹೊರಬಂದು ಜಹಾಂಗೀರ್ ಹಾಸಿಗೆಯ ಕಡೆಗೆ ಹೋಗುವುದನ್ನು ಆಕೆ ನೋಡಿದ್ದಾರೆ.
ಆಗ ಆರೋಪಿ ಅವಳ ಕಡೆ ಚಾಕು ತೋರಿಸಿ ಸದ್ದು ಮಾಡಬೇಡ ಎಂದು ಹೆದರಿಸಿದ್ದಾನೆ. ಆರೋಪಿ ತನ್ನ ಎಡಗೈಯಲ್ಲಿ ಮರದ ಕೋಲನ್ನು ಹೊಂದಿದ್ದನು ಮತ್ತು ಅವನ ಬಲಗೈಯಲ್ಲಿ ಉದ್ದವಾದ, ಹ್ಯಾಕ್ಸಾದಂತಹ ಬ್ಲೇಡ್ ಅನ್ನು ಹೊಂದಿದ್ದನು ಎಂದು ಆಕೆ ಹೇಳಿದ್ದಾಳೆ. ಆತ ಬ್ಲೇಡ್‌ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನ ಮಣಿಕಟ್ಟಿನ ಮೇಲೆ ಗಾಯವಾಯಿತು. ನಾನು ಅವನಿಗೆ ಏನು ಬೇಕು ಎಂದು ಕೇಳಿದೆ. ತನಗೆ ಹಣ ಬೇಕು ಎಂದು ಹೇಳಿದ್ದು 1 ಕೋಟಿ ರೂ. ಬೇಕು ಎಂದು ಹೇಳಿದ್ದಾನೆ. ಅಷ್ಟರಲ್ಲಿ ಸೈಫ್ ಅವರಿಗೆ ಎಚ್ಚರವಾಗಿದೆ. ಅವರು ಹಾಗೂ ಗೀತಾ ಆತನನ್ನು ತಡೆಯಲು ಪ್ರಯತ್ನ ಪಟ್ಟಿದ್ದಾರೆ. ಆ ಘಟನೆಯಲ್ಲಿ ಖಾನ್ ಅವರ ಕುತ್ತಿಗೆ, ಬೆನ್ನು, ಕೈ ಮತ್ತು ಭುಜದ ಮೇಲೆ ಗಾಯಗಳಾಗಿದ್ದು, ಗೀತಾಗೆ ಮುಖ, ಮಣಿಕಟ್ಟು ಮತ್ತು ಬೆನ್ನಿನ ಮೇಲೆ ಗಾಯಗಳಾಗಿವೆ. ಗಲಾಟೆ ಜೋರಾಗುತ್ತಿದ್ದಂತೆ ಮನೆಯ ಇತರ ನೌಕರರಿಗೆ ಎಚ್ಚರವಾಗಿದೆ. ಅಷ್ಟರಲ್ಲಿ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಸೈಫ್ ಚೇತರಿಕೆ
ಸದ್ಯ ಸೈಫ್ ಅಲಿ ಖಾನ್ ಗಾಯದಿಂದ ಚೇತರಿಕೆ ಕಂಡಿದ್ದು, ಈ ಬಗ್ಗೆ ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮಿ ಮಾಹಿತಿ ನೀಡಿದ್ದಾರೆ. ಸೈಫ್ ಅವರು ಇಂದು ಸಿಂಹದಂತೆ ನಡೆದಿದ್ದಾರೆ. ಅವರು ಸ್ಟ್ರೆಚರ್ ಬಳಸಲು ನಿರಾಕರಿಸಿದರು ಎಂದು ಹೇಳಿದ್ದಾರೆ. ಅವರು ಸೈಫ್ ಅಲಿ ಖಾನ್ ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ. ಮೂರು ದಿನಗಳಲ್ಲಿ ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Saif Ali Khan : ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದ ಆರೋಪಿ ಅರೆಸ್ಟ್ ; ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು
ನಾವು ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ ಮತ್ತು ಅವರು ನಮ್ಮ ನಿರೀಕ್ಷೆಗೆ ಅನುಗುಣವಾಗಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಪ್ರಗತಿಗೆ ಅನುಗುಣವಾಗಿ ನಾವು ಅವರಿಗೆ ಬೆಡ್ ರೆಸ್ಟ್ ಮಾಡಲು ಸಲಹೆ ನೀಡಿದ್ದೇವೆ ಮತ್ತು ಅವರು ಆರಾಮದಾಯಕವಾಗಿದ್ದರೆ, ಎರಡು ಮೂರು ದಿನಗಳಲ್ಲಿ ನಾವು ಅವರನ್ನು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಲೀಲಾವತಿ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕಡಾ ನಿತಿನ್ ಡಾಂಗೆ ಹೇಳಿದ್ದಾರೆ.