ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಸೈಫ್‌ ಆಲಿ ಖಾನ್‌ಗೆ ಇರಿತ ಪ್ರಕರಣ; ಶಂಕಿತ ಆರೋಪಿ ಅರೆಸ್ಟ್‌

Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಶಂಕಿತನನ್ನು ಮಧ್ಯ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂದ್ರಾ ಅಪಾರ್ಟ್‌ನಲ್ಲಿರುವ ಸೈಫ್‌ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ವ್ಯಕ್ತಿ ಈತನೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸೈಫ್‌ ಆಲಿ ಖಾನ್‌ಗೆ ಇರಿತ ಪ್ರಕರಣ; ಶಂಕಿತ ಅರೆಸ್ಟ್‌

ಸೈಫ್‌ ಆಲಿ ಖಾನ್‌ ಮತ್ತು ಕರೀನಾ ಕಪೂರ್‌ ಖಾನ್‌

Profile Ramesh B Jan 18, 2025 5:00 PM

ಮುಂಬೈ: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ (Saif Ali Khan) ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಶಂಕಿತನನ್ನು ಮಧ್ಯ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ''ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ಶಂಕಿತನನ್ನು ರೈಲ್ವೆ ಸಂರಕ್ಷಣಾ ಪಡೆ ಮಧ್ಯ ಪ್ರದೇಶದಲ್ಲಿ ಬಂಧಿಸಿದೆ. ಸೈಫ್‌ ಆಲಿ ಖಾನ್ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾದ ಶಂಕಿತನನ್ನು ಹೋಲುವ ವ್ಯಕ್ತಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆʼʼ ಎಂದು ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂದ್ರಾ ಅಪಾರ್ಟ್‌ನಲ್ಲಿರುವ ಸೈಫ್‌ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ವ್ಯಕ್ತಿ ಈತನೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.





ಕರೀನಾ ಕಪೂರ್‌ ಹೇಳಿದ್ದೇನು?

ಘಟನೆ ಬಗ್ಗೆ ಸೈಫ್‌ ಆಲಿ ಖಾನ್‌ ಅವರ ಪತ್ನಿಯೂ ಆದ ಬಾಲಿವುಡ್‌ ನಟಿ ಕರೀನಾ ಕಪೂರ್‌ ಪ್ರತಿಕ್ರಿಯಿಸಿದ್ದಾರೆ. ಗುರುವಾರ (ಜ. 16) ಮುಂಜಾನೆ ಬಾಂದ್ರಾ ನಿವಾಸದಲ್ಲಿ ನಡೆದ ದಾಳಿಯನ್ನು ನೆನಪಿಸಿಕೊಂಡ ಕರೀನಾ ಕಪೂರ್ ಖಾನ್, ಮನೆ ಒಳಗೆ ನುಗ್ಗಿದ ದುಷ್ಕರ್ಮಿ, ಸೈಫ್‌ ಆಲಿ ಖಾನ್ ಅವರನ್ನು ಪದೇ ಪದೆ ಇರಿದಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

"ದಾಳಿಕೋರ ಆಕ್ರಮಣಕಾರಿಯಾಗಿದ್ದ. ಅವನು ಸೈಫ್ ಮೇಲೆ ಪದೇ ಪದೆ ದಾಳಿ ಮಾಡುವುದನ್ನು ನಾನು ನೋಡಿದ್ದೇನೆ. ಸೈಫ್ ಅವರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು" ಎಂದು ಅವರು ಪೊಲೀಸರ ಬಳಿ ತಿಳಿಸಿದ್ದಾರೆ. ಮನೆಯಿಂದ ಯಾವುದೇ ವಸ್ತು ಕಳುವಾಗಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಕರೀನಾ ಪ್ರಕಾರ ಸೈಫ್‌ ತಮ್ಮ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ (ಜೆಹ್)ನನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಜೆಹ್‌ ಬಳಿ ತೆರಳದಂತೆ ತಡೆದ ಸೈಫ್‌ ಮೇಲೆ ದಾಳಿಕೋರ ಹಲ್ಲೆ ನಡೆಸಿರುವುದಾಗಿ ಕರೀನಾ ವಿವರಿಸಿದ್ದಾರೆ.

ಘಟನೆ ನಡೆದ ಭಯಭೀತರಾದ ಕರೀನಾ ಕಪೂರ್ ಅವರನ್ನು ಸಹೋದರಿ ಕರಿಷ್ಮಾ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ಈ ಸುದ್ದಿಯನ್ನೂ ಓದಿ: Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

ಸೈಫ್‌ ಆಲಿ ಖಾನ್‌ ಅವರಿಗೆ 6 ಕಡೆ ಗಾಯಗಳಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಮುಂಜಾನೆ 2.30ರ ವೇಳೆಗೆ ಮುಂಬೈಯ ಬಾಂದ್ರಾದ ಸದ್ಗುರು ಶರಣ್‌ ಅಪಾರ್ಟ್‌ಮೆಂಟ್‌ನ 11ನೇ ಮಹಡಿಯಲ್ಲಿರುವ ಸೈಫ್‌ ಆಲಿ ಖಾನ್‌ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ಚೂರಿಯಿಂದ ಇರಿದು ಅವರನ್ನು ಗಾಯಗೊಳಿಸಿದ್ದ. ಬಳಿಕ ಪರಾರಿಯಾಗಿದ್ದ. ಕೂಡಲೇ ಸೈಫ್‌ ಆಲಿ ಖಾನ್‌ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಯ ಚಲನ ವಲನ ಸಿಸಿ ಟಿವಿಯಲ್ಲಿ ದಾಖಲಾಗಿದೆ.