#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ ನಡೆದಿದ್ದು, ಮಧ್ಯರಾತ್ರಿ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಘಟನೆಯ ಬಗ್ಗೆ ಆಟೋ ಡ್ರೈವರ್‌ ಮಾತನಾಡಿದ್ದಾರೆ.

ʻನಾನು ಸೈಫ್‌ ಅಲಿ ಖಾನ್‌ ಅಂತಾ ಅಂದಾಗ ಶಾಕ್‌ ಆಗಿತ್ತುʼ... ಆಟೋ ಚಾಲಕ ಘಟನೆ ಬಗ್ಗೆ ಹೇಳಿದ್ದೇನು?

Saif ali Khan

Profile Vishakha Bhat Jan 18, 2025 9:38 AM

ಮುಂಬೈ ಜ.18, 2025 : ಬಾಲಿವುಡ್‌ ನಟ ಸೈಫ್‌ ಅಲಿ (Saif Ali Khan) ಖಾನ್‌ ಅವರ ಮೇಲೆ ಗುರುವಾರ ಬೆಳಗಿನ ಜಾವ ಅವರ ಮನೆಗೆ ನುಗ್ಗಿದ ದರೋಡೆಕೋರನೊಬ್ಬ ಸೈಫ್‌ಗೆ ಚಾಕುವಿನಿಂದ ಇರಿದಿದ್ದಾನೆ. ಖಾನ್ ಅವರಿಗೆ 6 ಬಾರಿ ಚಾಕುವಿನಿಂದ ಇರಿಯಲಾಗಿದೆ. ಚೂರಿ ಇರಿತದಿಂದಾಗಿ ಸೈಫ್ ಅಲಿಖಾನ್ ಅವರ ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯವಾಗಿದೆ. ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ. ಘಟನೆಯ ದಿನ ಸೈಫ್‌ ಅಲಿ ಖಾನ್‌ ಅವರನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲೆಡೆ ವೈರಲ್‌ ಆಗಿತ್ತು. ಸದ್ಯ ಆಟೋ ಚಾಲಕ ಭಜನ್ ಸಿಂಗ್ ರಾಣಾ ಈ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಮಧ್ಯರಾತ್ರಿ ಸುಮಾರು 2.45 ರ ಸಮಯಕ್ಕೆ ನಾನು ಲಿಂಕಿನ್ ರೋಡ್ ಮೂಲಕ ಹೋಗುತ್ತಿದ್ದೆ. ಒಬ್ಬ ಮಹಿಳೆ ನಿಲ್ಲಿಸಿ , ನಿಲ್ಲಿಸಿ ಎಂದು ಕೂಗುತ್ತಾ ಬಂದರು. ಅವರ ಜೊತೆ ಇನ್ನೂ ಕೆಲವರಿದ್ದರು. ವ್ಯಕ್ತಿಯೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಸೈಫ್ ಅಲಿ ಖಾನ್ ಎಂದು ನನಗೆ ತಿಳಿದಿರಲಿಲ್ಲ. ನನ್ನ ಆಟೋಗೆ ಏರುವ ಈ ಪ್ರಯಾಣಿಕ ಯಾರು ಎಂದು ನಾನು ಹೆದರಿದ್ದೆ. ನಾನು ತೊಂದರೆಗೆ ಸಿಲುಕಬಹುದೆಂದು ನಾನು ಚಿಂತೆ ಮಾಡುತ್ತಿದ್ದೆ. ಮತ್ತು ಅದಕ್ಕಾಗಿಯೇ ನಾನು ಆತಂಕಗೊಂಡಿದ್ದೆ ಎಂದು ರಾಣಾ ಹೇಳಿದ್ದಾರೆ.

ಅವರು ಬಿಳಿ ಬಣ್ಣದ ಅಂಗಿ ಧರಿಸಿದ್ದು, ಅದು ರಕ್ತಸಿಕ್ತವಾಗಿತ್ತು. ಆಟೋ ಹತ್ತುವಾಗ ಸೈಫ್‌ ಜೊತೆ ಒಬ್ಬ ಯುವಕ ಹಾಗೂ ಇನ್ನೊಂದು ಮಗು ಕೂಡ ಇತ್ತು ಎಂದು ಅವರು ಹೇಳಿದ್ದಾರೆ. ಹೋಲಿ ಫ್ಯಾಮಿಲಿ ಅಥವಾ ಲೀಲಾವತಿ ಆಸ್ಪತ್ರೆಗೆ ಓಡಿಸಬೇಕೇ ಎಂದು ಕೇಳಿದಾಗ, "ನನ್ನನ್ನು ಲೀಲಾವತಿಗೆ ಕರೆದುಕೊಂಡು ಹೋಗು" ಎಂದು ನಟ ಹೇಳಿದರು. ಆಸ್ಪತ್ರೆಯನ್ನು ತಲುಪಿದ ನಂತರ, ಸಿಬ್ಬಂದಿಯನ್ನು ಕರೆಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆಗ ಅವರು ತಮ್ಮನ್ನು ತಾವು ನಟ ಸೈಫ್‌ ಅಲಿ ಖಾನ್‌ ಎಂದು ಪರಿಚಯ ಮಾಡಿಕೊಂಡರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Saif Ali Khan : ಕುಟುಂಬವನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟರಾ ಸೈಫ್‌ ಅಲಿ ಖಾನ್‌ ? ಆ 30 ನಿಮಿಷದಲ್ಲಿ ನಡೆದಿದ್ದಾದರೂ ಏನು?

ಸದ್ಯ ಸೈಫ್‌ ಅಲಿ ಖಾನ್‌ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು , ಸುಮಾರು 2.5 ಇಂಚಿನ ಚಾಕುವನ್ನು ಅವರ ಬೆನ್ನಿನಿಂದ ಹೊರತೆಗೆಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಲೀಲಾವತಿ ಆಸ್ಪತ್ರೆಯ ವೈದ್ಯರು ಅವರಿಗೆ ಒಂದು ತಿಂಗಳು ಸಂಪೂರ್ಣ ವಿಶ್ರಾಂತಿ ಬೇಕು ಎಂದು ತಿಳಿಸಿದ್ದಾರೆ. ಸದ್ಯ ಚಾಕು ಇರಿತದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.