Saif Ali Khan : ಸೈಫ್‌ಗೆ ಇರಿದವ ಬಾಂಗ್ಲಾದೇಶದ ಮಾಜಿ ಕುಸ್ತಿಪಟು? ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಸಂಗತಿ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಆತ ಬಾಂಗ್ಲಾದೇಶದ ಮಾಜಿ ಕುಸ್ತಿಪಟು ಎಂದು ತಿಳಿದು ಬಂದಿದೆ. ಸದ್ಯ ಆತನ ವಿಚಾರಣೆ ನಡೆಸಲಾಗುತ್ತಿದೆ. ಸೈಫ್ ಅಲಿ ಖಾನ್ ಅವರು ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ(Saif ali Khan) ಖಾನ್ ಅವರ ಮನೆ ಮೇಲೆ ಜ. 16ರ ಮಧ್ಯರಾತ್ರಿ ದಾಳಿಕೋರನೊಬ್ಬ ದಾಳಿ ನಡೆಸಿದ್ದು, ಅವರಿಗೆ 6 ಬಾರಿ ಚಾಕುವಿನಿಂದ ಇರಿದಿದ್ದ. ಘಟನೆಗೆ ಸಂಬಂಧಿಸಿದಂತೆ ಖಾನ್ ಅವರ ಮನೆಯ ಸಿಸಿಟಿವಿ ಆಧರಿಸಿ ಆತನನ್ನು ಭಾನುವಾರ ಬೆಳಗ್ಗೆ ಪಶ್ಚಿಮ ಬಾಂದ್ರಾದಲ್ಲಿ ಆತನನ್ನು ಬಂಧಿಸಿದ್ದರು. ಬಂಧನ ನಂತರ ಆತನ ಬಗ್ಗೆ ಒಂದೊಂದೇ ವಿಷಯಗಳು ಹೊರ ಬೀಳುತ್ತಿವೆ.
ಆರೋಪಿಯನ್ನು ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದ್ದು, ಆತ ಬಾಂಗ್ಲಾದೇಶಿ ಪ್ರಜೆ ಎಂದು ಹೇಳಲಾಗುತ್ತಿದೆ. ಸದ್ಯ ಆತನ ಬಳಿ ಇರುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆತನ ಬಗ್ಗೆ ಮತ್ತೊಂದು ಮಾಹಿತಿ ದೊರಕಿದ್ದು, ಬಾಂಗ್ಲಾದೇಶದಲ್ಲಿ ನೆಲೆಸಿದ್ದಾಗ ರಾಷ್ಟ್ರೀಯ ಮಟ್ಟದ ಕುಸ್ತಿ ಚಾಂಪಿಯನ್ ಆಗಿದ್ದ ಎಂದು ಮೂಲಗಳು ತಿಳಿಸಿವೆ. ಆತ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕೆಲವು ತಿಂಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಜನವರಿ 19, ಭಾನುವಾರ ಥಾಣೆಯಿಂದ ಶೆಹಜಾದ್‌ನನ್ನು ಬಂಧಿಸಿದ ನಂತರ, ತಾನು ಬಾಂಗ್ಲಾದೇಶದಲ್ಲಿ ಜಿಲ್ಲಾ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಕುಸ್ತಿಪಟುವಾಗಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ : Saif Ali Khan : ಇವನು ಅವನಲ್ಲ ಅಂತಾ ಹೇಳ್ತಾ ಇರೋ ನೆಟ್ಟಿಗರು! ಸೈಫ್ ಅಲಿ ಖಾನ್‌ಗೆ ಇರಿದ ಆರೋಪಿಯನ್ನು ಬಿಟ್ಟು ಬೇರೆಯವರನ್ನು ಬಂಧಿಸಿದ್ರಾ ಪೊಲೀಸರು ?
ದಾಳಿಯ ನಂತರ ಶೆಹಜಾದ್ ಬಾಂದ್ರಾ, ದಾದರ್, ವರ್ಲಿ, ಅಂಧೇರಿ ಮತ್ತು ಥಾಣೆಯಾದ್ಯಂತ ಪ್ರಯಾಣಿಸಿದನೆಂದು ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿದಾಗ ಅವರು ಅಂತಿಮವಾಗಿ ಥಾಣೆಯಲ್ಲಿ ಕಾರ್ಮಿಕ ಶಿಬಿರದ ಬಳಿ ಇದ್ದ. ಜ.16 ರಂದು ನಟ ಸೈಫ್ ಅಲಿ ಖಾನ್ ಮನೆ ಮೇಲೆ ಸುಮಾರು ಮಧ್ಯರಾತ್ರಿ 2.30 ರ ಸಮಯಕ್ಕೆ ಆರೋಪಿ ದಾಳಿ ನಡೆಸಿದ್ದ. ಸೈಫ್ ಅವರ ಕಿರಿಯ ಮಗ ಜಹಾಂಗೀರ್ ಅವರ ಕೋಣೆಗೆ ನುಗ್ಗಲು ಪ್ರಯತ್ನಿಸಿದ್ದ. ನಂತರ ಸೈಫ್ ಅಲಿ ಖಾನ್ ಅವರಿಗೆ ಎಚ್ಚರವಾಗಿ ಆತನನ್ನು ತಡೆಯಲು ಪ್ರಯತ್ನಪಟ್ಟಿದ್ದರು. ಆ ವೇಳೆ ಆರೋಪಿ ನಟನಿಗೆ ಹರಿತವಾದ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರು ಚೇತರಿಕೆ ಕಂಡಿದ್ದಾರೆ.