ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sensodyneನಿಂದ 2025ರ ವಿಶ್ವ ಬಾಯಿ ಆರೋಗ್ಯ ದಿನದ ಅಭಿಯಾನ ಪ್ರಾರಂಭಿಸುವ ಹಿನ್ನೆಲೆಯಲ್ಲಿ “ಗಿನ್ನೆಸ್ ವಿಶ್ವ ದಾಖಲೆ”

ಮಹಾಕುಂಭ 2025ರಲ್ಲಿ ನಡೆದಿದ್ದು ಇದರಲ್ಲಿ 27,000ಕ್ಕೂ ಹೆಚ್ಚು ವ್ಯಕ್ತಿಗಳು ದಂತ ಪರೀಕ್ಷೆ ಯಲ್ಲಿ ಭಾಗವಹಿಸಿದ್ದು ಭಾರತೀಯರಲ್ಲಿ ಸಕ್ರಿಯ ಬಾಯಿ ಆರೈಕೆಯ ಪ್ರಾಮುಖ್ಯತೆ ಕುರಿತು ಅರಿವು ನೀಡುವುದರಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಈ ಬದ್ಧತೆಗೆ ಪೂರಕವಾಗಿ Sensodyne ಹೊಸದಾಗಿ ಬಿಡುಗಡೆ ಮಾಡಿದ ₹20ರ ಸಣ್ಣ ಟೂಥ್ ಪೇಸ್ಟ್ ಪ್ಯಾಕ್ ಗಳನ್ನು ವಿತರಿಸಿತು,

ಮಹಾಕುಂಭದಲ್ಲಿ ಒಂದು ದಿನದಲ್ಲಿ 27, 396 ದಂತ ಪರೀಕ್ಷೆ

Profile Ashok Nayak Mar 27, 2025 4:21 PM

ವಿಶ್ವ ಬಾಯಿ ಆರೋಗ್ಯ ದಿನದ ಅಭಿಯಾನವು ಜನರಿಗೆ ಉತ್ತಮ ಬಾಯಿ ಆರೋಗ್ಯದ ಪ್ರಾಮುಖ್ಯತೆ ಕುರಿತು ಅರಿವು ನೀಡಲಿದೆ ಮತ್ತು ಉಚಿತ ದಂತ ಪರೀಕ್ಷೆ ಸಾಧನದ ಮೂಲಕ ಉತ್ತಮ ಅರ್ಥೈಸಿಕೊಳ್ಳುವಿಕೆ ನೀಡುತ್ತಿದೆ

Haleon (ಹ್ಯಾಲಿಯೊನ್)(ಹಿಂದೆ ಗ್ಲಾಕ್ಸೊಸ್ಮಿತ್ ಕ್ಲೈನ್ ಕನ್ಸೂನರ್ ಹೆಲ್ತ್ ಕೇರ್ ಎಂದಿತ್ತು) ನಿಂದ ಮುಂಚೂಣಿಯ ಬಾಯಿ ಆರೈಕೆಯ ಬ್ರಾಂಡ್ Sensodyne (ಸೆನ್ಸೊಡೈನ್) ಯಶಸ್ವಿ ಯಾಗಿ `24 ಗಂಟೆಗಳಲ್ಲಿ ಅತ್ಯಂತ ಹೆಚ್ಚು ಆನ್ಲೈನ್ ದಂತ ಪರೀಕ್ಷೆಗಳನ್ನು ನಡೆಸಿದ್ದಕ್ಕಾಗಿ’ ಗಿನ್ನೆಸ್ ವಿಶ್ವ ದಾಖಲೆ ಸಾಧಿಸಿದೆ. ಈ ದಾಖಲೆಯ ಉಪಕ್ರಮವು ಮಹಾಕುಂಭ 2025ರಲ್ಲಿ ನಡೆದಿದ್ದು ಇದರಲ್ಲಿ 27,000ಕ್ಕೂ ಹೆಚ್ಚು ವ್ಯಕ್ತಿಗಳು ದಂತ ಪರೀಕ್ಷೆಯಲ್ಲಿ ಭಾಗವಹಿಸಿದ್ದು ಭಾರತೀಯರಲ್ಲಿ ಸಕ್ರಿಯ ಬಾಯಿ ಆರೈಕೆಯ ಪ್ರಾಮುಖ್ಯತೆ ಕುರಿತು ಅರಿವು ನೀಡುವುದರಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಈ ಬದ್ಧತೆಗೆ ಪೂರಕವಾಗಿ Sensodyne ಹೊಸದಾಗಿ ಬಿಡುಗಡೆ ಮಾಡಿದ ₹20ರ ಸಣ್ಣ ಟೂಥ್ ಪೇಸ್ಟ್ ಪ್ಯಾಕ್ ಗಳನ್ನು ವಿತರಿಸಿತು, ಈ ಪ್ಯಾಕ್ ಗಳನ್ನು ಸೆನ್ಸಿಟಿವಿಟಿಯಿಂದ ರಕ್ಷಣೆ ಹೆಚ್ಚು ಕೈಗೆಟುಕುವ ಮತ್ತು ಲಭ್ಯವಾಗು ವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.

ಈ ದಾಖಲೆಯು Sensodyne ನ ವಿಶ್ವ ಬಾಯಿ ಆರೋಗ್ಯ ದಿನದ ಅಭಿಯಾನದ ಪ್ರಾರಂಭಕ್ಕೂ ಗುರುತಾಗಿದ್ದು ವ್ಯಕ್ತಿಗಳಿಗೆ ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ ಇರಿಸಲು ಉತ್ತೇಜಿಸುವ ಗುರಿ ಹೊಂದಿದೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ Sensodyne ಗ್ರಾಹಕರಿಗೆ ಹಲ್ಲಿನ ಸೆನ್ಸಿಟಿವಿಟಿಯನ್ನು ಪ್ರಾರಂಭದಲ್ಲೇ ಗುರುತಿಸಲು ಮತ್ತು ಅದನ್ನು ನಿವಾರಿಸಲು ನೆರವಾಗುತ್ತಿದೆ ಮತ್ತು ಭಾರತದಾದ್ಯಂತ “ಚಿಲ್ ಟೆಸ್ಟ್”ಗಳನ್ನು ನಡೆಸುತ್ತಿದೆ. ಈ ಉಪಕ್ರಮವು ಲಕ್ಷಾಂತರ ಮಂದಿಗೆ ಅವರ ಸಮಸ್ಯೆಯನ್ನು ಗುರುತಿಸಲು, ಸಕಾಲಿಕ ಮಧ್ಯಪ್ರವೇಶ ಪಡೆಯಲು ಮತ್ತು ಅವರ ಅಚ್ಚುಮೆಚ್ಚಿನ ಆಹಾರವನ್ನು ಆನಂದಿಸಲು ಅಂತಿಮವಾಗಿ ಅವರ ಜೀವನದ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತಿದೆ.

Haleon ಇಂಡಿಯಾ ಉಪಖಂಡದ ಬಾಯಿ ಆರೈಕೆಯ ಕ್ಯಾಟಗರಿ ಲೀಡ್ ಕಿಶ್ಲೇ ಸೇಥ್, “Sensodyne ನಲ್ಲಿ ನಮ್ಮ ಉದ್ದೇಶ ಜನರಿಗೆ ಅವರ ಬಾಯಿ ಆರೋಗ್ಯ ಕುರಿತಂತೆ ಮೊದಲ ಹೆಜ್ಜೆ ಇರಿಸಲು ಉತ್ತೇಜಿಸುವುದು. ಮಹಾಕುಂಭ 2025ರಲ್ಲಿ ಗಿನ್ನೆಸ್ ದಾಖಲೆ ಸಾಧಿಸುವುದು ಎಂದರೆ ಅದು ಬರೀ ಸಂಖ್ಯೆಗಳಲ್ಲ, ಅದು ಸಾವಿರಾರು ವ್ಯಕ್ತಿಗಳನ್ನು ತಲುಪುವ ಮೂಲಕ ನಾವು ಸೃಷ್ಟಿಸಲು ಬಯಸಿರುವ ಪರಿಣಾಮ, ಅರಿವನ್ನು ಹೆಚ್ಚಿಸುವುದು ಮತ್ತು ಪ್ರತಿನಿತ್ಯ ಉತ್ತಮ ಬಾಯಿ ಆರೋಗ್ಯಕ್ಕೆ ಉತ್ತೇಜಿಸುವುದಾಗಿದೆ.

ನಾವು ಈ ಉಪಕ್ರಮವನ್ನು ಇಡೀ ವಿಶ್ವ ಬಾಯಿ ಆರೋಗ್ಯ ಮಾಸದಾದ್ಯಂತ ಮುನ್ನಡೆಸು ತ್ತಿದ್ದೇವೆ ಮತ್ತು ಉಚಿತ ಡಿಜಿಟಲ್ ದಂತ ಪರೀಕ್ಷೆಗಳನ್ನು ಒದಗಿಸುತ್ತಿದ್ದೇವೆ. ಈ ಪ್ರಸ್ತುತ ಪ್ರಯತ್ನಗಳ ಮೂಲಕ Sensodyne ಭಾರತದಲ್ಲಿ ಬಾಯಿ ಆರೋಗ್ಯದ ಕ್ಷೇತ್ರವನ್ನು ಉನ್ನತೀಕರಿಸುವ, ಬಾಯಿ ಆರೈಕೆ ಶಿಕ್ಷಣ, ಅರಿವು ಮತ್ತು ಚಿಕಿತ್ಸೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ” ಎಂದರು.

ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಮಾನ್ಯ ಸೆಕ್ರೆಟರಿ ಜನರಲ್ ಹೆಡ್ ಡಾ.ಅಶೋಕ್ ಧೊಬ್ಲೆ, “Sensodyne ನೊಂದಿಗೆ Sensodyne ಭಾರತದಲ್ಲಿ ಬಾಯಿ ಆರೋಗ್ಯದ ಅರಿವು ಹೆಚ್ಚಿಸುವ ಈ ಉಪಕ್ರಮಕ್ಕೆ ಸಹಯೋಗ ಹೊಂದಲು ನಾವು ಬಹಳ ಹೆಮ್ಮೆ ಪಡುತ್ತೇವೆ. ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಆಗಿ ನಾವು ರೋಗತಡೆಯ ದಂತ ಆರೈಕೆ ಯನ್ನು ಉತ್ತೇಜಿಸುವವರಲ್ಲಿ ಮುಂಚೂಣಿಯಲ್ಲಿದ್ದೇವೆ ಮತ್ತು ಈ ಉಪಕ್ರಮವು ಶಿಕ್ಷಣದ ಶಕ್ತಿಯನ್ನು ತೋರಿಸಲು ಮತ್ತು ಬಾಯಿ ಆರೋಗ್ಯವನ್ನು ಪರಿವರ್ತಿಸುವಲ್ಲಿ ಉದಾಹರಣೆ ಯಾಗಿದೆ. ಈ ಪ್ರಯತ್ನವು ವ್ಯಕ್ತಿಗಳಿಗೆ ಉತ್ತಮ ಬಾಯಿ ಆರೋಗ್ಯದತ್ತ ಮೊದಲ ಹೆಜ್ಜೆ ಇರಿಸಲು ಕ್ರಮ ಕೈಗೊಳ್ಳಲು ಉತ್ತೇಜಿಸುವುದಲ್ಲದೆ ಪ್ರಾರಂಭಿಕ ರೋಗಪತ್ತೆ ಮತ್ತು ಮಧ್ಯಪ್ರವೇಶದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ” ಎಂದರು.

ಮಹಾಕುಂಭದಲ್ಲಿ ನಡೆಸಲಾದ ಪರೀಕ್ಷೆಗಳನ್ನು ಸುಮಾರು 200+ ಪ್ರೊಮೋಟರ್ ಗಳ ತಂಡವು ಅನುಕೂಲಕ ಕಲ್ಪಿಸಿದ್ದು ಎ ಡೆಂಟಲ್ ಫ್ರೆಂಡ್ (A Dental Friend) ಮತ್ತು ಸ್ಮೈಲೊ (Smilo) ಸಹಯೋಗದಲ್ಲಿ ಮೊಬೈಲ್ ತಂತ್ರಜ್ಞಾನ ಅಳವಡಿಸಿತ್ತು. 29ಕ್ಕೂ ಹೆಚ್ಚು ಐಡಿಎ ಸದಸ್ಯ ದಂತವೈದ್ಯರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಮತ್ತು ವಿಚಾರಣೆ ಗಳಿಗೆ ಉತ್ತರಿಸುವ ಮೂಲಕ ತಡೆರಹಿತ ಮತ್ತು ವಿಶ್ವಾಸಾರ್ಹ ಅನುಭವ ನೀಡಿದರು.

ಮಾರ್ಚ್ 20ರಂದು ವಿಶ್ವ ಬಾಯಿ ಆರೋಗ್ಯ ದಿನಾಚರಣೆ ನಡೆಸಲಾಗುತ್ತಿದ್ದು Sensodyne ನ ಉಪಕ್ರಮವು ಬಹುದೊಡ್ಡ ಚಳವಳಿಗೆ ವೇದಿಕೆ ಸೃಷ್ಟಿಸಿದ್ದು ಶಿಕ್ಷಣ, ತಂತ್ರಜ್ಞಾನ ಮತ್ತು ಲಭ್ಯತೆ ನೀಡಿದೆ. ಈ ದಾಖಲೆ ಮುರಿಯುವ ಕಾರ್ಯಕ್ರಮದ ಯಶಸ್ಸಿನಿಂದ Sensodyne ಈಗ ಉಚಿತ ಡಿಜಿಟಲ್ ದಂತಪರೀಕ್ಷೆಗಳನ್ನು ಸಾರ್ವಜನಿಕರಿಗೆ ನಡೆಸುತ್ತಿದ್ದು ಹೆಚ್ಚು ಹೆಚ್ಚು ಜನರಿಗೆ ಬಾಯಿ ಆರೋಗ್ಯದ ಅನುಕೂಲಕರ ಲಭ್ಯತೆ ದೊರೆಯುವಂತೆ ಮಾಡಿದೆ.

ಮುಂದಿನ ದಿನಗಳಲ್ಲಿ Sensodyne ಸಮಗ್ರ ಮಲ್ಟಿಮೀಡಿಯಾ ಕಾರ್ಯತಂತ್ರವನ್ನು ಸಕ್ರಿಯಗೊಳಿಸಲಿದ್ದು ಅದರಲ್ಲಿ ಡಿಜಿಟಲ್ ಅಭಿಯಾನ, ಇನ್ಫ್ಲುಯೆನ್ಸರ್ ಸಹಯೋಗಗಳು, ಸ್ಪೋಟಿಫೈ ಇಂಟಿಗ್ರೇಷನ್ ಮತ್ತು ಟಿ.ವಿ. ರೇಡಿಯೊ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಹೆಚ್ಚು ಭಾರತೀಯರಿಗೆ ಅವರ ಬಾಯಿ ಆರೋಗ್ಯದ `ಮೊದಲ ಹೆಜ್ಜೆ ಇರಿಸಲು’ ಉತ್ತೇಜಿಸಲಿದೆ. ಈ ಬ್ರಾಂಡ್ ದೇಶಾದ್ಯಂತ ಬಾಯಿ ಆರೈಕೆಯ ಉತ್ತಮ ಲಭ್ಯತೆ ಸಾಧಿಸಲು ಡೆಂಟಲ್ ವ್ಯಾನ್ ಗಳ ಬಿಡುಗಡೆ ಮತ್ತು ಕಾರ್ಪೊರೇಟ್ ಆರೋಗ್ಯಶಿಬಿರಗಳನ್ನು ನಡೆಸಲಿದೆ.

*ತಂತ್ರಜ್ಞಾನ ಬಳಸಿ ಡಿಜಿಟಲ್ ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಅದು ವೃತ್ತಿಪರ ಮಾರ್ಗದರ್ಶನಕ್ಕೆ ಪರ್ಯಾಯವಲ್ಲ. ದಂತವೈದ್ಯರ ಸಲಹೆಯನ್ನು ಶಿಫಾರಸು ಮಾಡಲಾ ಗುತ್ತದೆ.