Ranji Trophy: ಹ್ಯಾಟ್ರಿಕ್ ವಿಕೆಟ್ ಕಿತ್ತು ದಾಖಲೆ ಬರೆದ ಶಾರ್ದೂಲ್ ಠಾಕೂರ್
ಮೊದಲು ಬ್ಯಾಟಿಂಗ್ ನಡೆಸಿದ ಮೇಘಾಲಯ ಪರ ಹಿಮಾನ್ ಫುಕನ್(28) ಮತ್ತು ಪ್ರಿಂಗ್ಸಂಗ್ ಸಂಗ್ಮಾ(19) ಗರಿಷ್ಠ ರನ್ ಬಾರಿಸಿದರು. ಉಳಿದವರು ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು.

Shardul Thakur

ಮುಂಬಯಿ: ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿರುವ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್(Shardul Thakur) ರಣಜಿ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಮೇಘಾಲಯ(Mumbai vs Meghalaya) ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದಾರೆ.
ಶಾರ್ದೂಲ್ ಠಾಕೂರ್ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮುಂಬೈನ ಐದನೇ ಬೌಲರ್ ಎನಿಸಿಕೊಂಡರು. ಜಹಾಂಗೀರ್ ಖೋತ್ ಮೊದಲಿಗರು. 1943/44ರ ಸಾಲಿನ ರಣಜಿಯಲ್ಲಿ ಅವರು ಬರೋಡಾ ತಂಡದ ವಿರುದ್ಧ ಈ ಸಾಧನೆ ಮಾಡಿದ್ದರು.
ಶಾರ್ದೂಲ್ ಮತ್ತು ಮೋಹಿತ್ ಅವಸ್ತಿ ಬೌಲಿಂಗ್ ದಾಳಿಗೆ ನಲುಗಿದ ಮೇಘಾಲಯ ಕೇವಲ 86 ರನ್‌ಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 213 ರನ್ ಬಾರಿಸಿದೆ. ನಾಯಕ ಅಜಿಂಕ್ಯಾ ರಹಾನೆ (83) ಮತ್ತು ಸಿದ್ಧಾರ್ತ್ ಲಾಡ್(89) ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಮೇಘಾಲಯ ಪರ ಹಿಮಾನ್ ಫುಕನ್(28) ಮತ್ತು ಪ್ರಿಂಗ್ಸಂಗ್ ಸಂಗ್ಮಾ(19) ಗರಿಷ್ಠ ರನ್ ಬಾರಿಸಿದರು. ಉಳಿದವರು ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು.
ಇದನ್ನೂ Ranji Trophy: ಹರಿಯಾಣ ವಿರುದ್ಧ 26 ರನ್‌ಗೆ ಔಟಾದ ರಾಹುಲ್
ಜಮ್ಮು ಮತ್ತು ಕಾಶ್ಮೀರ ಎದುರು ಸೋಲು ಕಂಡ ಕಾರಣದಿಂದ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡದ ಕ್ವಾರ್ಟರ್ ಫೈನಲ್ ಪ್ರವೇಶ ಕಠಿಣವಾಗಿಸಿದೆ. ಮೇಘಾಲಯ ವಿರುದ್ಧ ದೊಡ್ಡ ಅಂತರದಿಂದ ಗೆದ್ದರಷ್ಟೇ ನಾಕೌಟ್ ಕನಸು ಜೀವಂತವಾಗಿ ಉಳಿಯಲಿದೆ. ಸದ್ಯ ಮುಂಬೈ ಬೃಹತ್ ಮೊತ್ತದೆಡೆಗೆ ಸಾಗುತ್ತಿದೆ.
ಜಮ್ಮು ವಿರುದ್ಧ ರೋಹಿತ್ ಶರ್ಮಾ(Rohit Sharma), ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಆಡಿದ್ದರು. ಆದರೆ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.