Ranji Trophy: ಹರಿಯಾಣ ವಿರುದ್ಧ 26 ರನ್‌ಗೆ ಔಟಾದ ರಾಹುಲ್
ಕರ್ನಾಟಕ ಪರ ನಾಯಕ ಅಗರ್ವಾರ್ಲ್ 149 ಎಸೆತ ಎದುರಿಸಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 91 ರನ್ ಬಾರಿಸಿದರು. ದೇವದತ್ತ ಪಡಿಕ್ಕಲ್ 43, ಸ್ಮರಣ್ ರವಿಚಂದ್ರನ್ 35 ರನ್ ಬಾರಿಸಿದರು.

Rahul

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಹರಿಯಾಣ ವಿರುದ್ಧದ ಕರ್ನಾಟಕದ ರಣಜಿ(Ranji Trophy) ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ಕೆ.ಎಲ್ ರಾಹುಲ್ 37 ಎಸೆತಗಳಲ್ಲಿ 26 ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದ ರಾಹುಲ್, ಎರಡನೇ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್ವಾಲ್ ಜತೆ 54 ರನ್ ಜತೆಯಾಟ ನಡೆಸಿ, ವೇಗಿ ಅನ್ಶುಲ್ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಇದು ರಾಹುಲ್ 5 ವರ್ಷದ ಬಳಿಕ ಆಡಲಿಳಿದ ದೇಶೀಯ ಪಂದ್ಯವಾಗಿತ್ತು. 2020ರಲ್ಲಿ ಅವರು ಕೊನೆಯ ಬಾರಿಗೆ ರಣಜಿ ಆಡಿದ್ದರು. ಆ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿಯೂ ವಿಫಲವಾಗಿದ್ದರು. ಶೂನ್ಯ ಮತ್ತು 26 ರನ್ ಬಾರಿಸಿದ್ದರು.
Rahul gone for 26 (37b). Thin edge to keeper ends 56 minute stint for Rahul. pic.twitter.com/la1HISwMCP
— Ashwin Achal (@AshwinAchal) January 30, 2025
ಕಳೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೆಲ ಪಂದ್ಯಗಳಲ್ಲಿ ಆರಂಭಿಕನಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದರು. ಆದರೆ ರಣಜಿಯಲ್ಲಿ ಮಂಕಾಗಿದ್ದಾರೆ. ದ್ವಿತೀಯ ಇನಿಂಗ್ಸ್‌ನಲ್ಲಾದರೂ ದೊಡ್ಡ ಮೊತ್ತ ಬಾರಿಸಬಹುದಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ ಕೊಹ್ಲಿ ಆಟ ನೋಡಲು ಪ್ರೇಕ್ಷಕರ ನೂಕುನುಗ್ಗಲು; ಹಲವರಿಗೆ ಗಾಯ
ಕರ್ನಾಟಕ ಪರ ನಾಯಕ ಅಗರ್ವಾರ್ಲ್ 149 ಎಸೆತ ಎದುರಿಸಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 91 ರನ್ ಬಾರಿಸಿದರು. ದೇವದತ್ತ ಪಡಿಕ್ಕಲ್ 43, ಸ್ಮರಣ್ ರವಿಚಂದ್ರನ್ 35 ರನ್ ಬಾರಿಸಿದರು.