Siddaramaiah: ಮೇಕೆದಾಟು, ಕೃಷ್ಣಾದಂತಹ ಯೋಜನೆಗೆ ಅನುದಾನವಿಲ್ಲ

ದೂರದೃಷ್ಟಿ ಇಲ್ಲದೇ ಇರುವ ಬಜೆಟ್. 2025-26 ನೇ ಸಾಲಿನ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿ ಯಿಂದ ಬಜೆಟ್ ಪೂರ್ವಭಾವಿ ಸಭೆಗೆ ಕರೆದಿದ್ದರು. ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದರು. ನಾವು ರಾಜ್ಯ ದಿಂದ ಹಲವು ಬೇಡಿಕೆ ಇಟ್ಟಿದ್ದೆವು. ರಾಜ್ಯ ಸರಕಾರದ ಬೇಡಿಕೆಗಳು ಕೇವಲ ಬೇಡಿಕೆಗಳಾಗಿವೆ. ಒಂದೇ ಒಂದು ಬೇಡಿಕೆಯನ್ನು ಕೇಂದ್ರ ಈಡೇರಿಸಿಲ್ಲ

Meke ok
Profile Ashok Nayak Feb 2, 2025 2:39 PM

ವಿಶ್ಲೇಷಣೆ

ಕೇಂದ್ರದ ಆಯವ್ಯಯದಲ್ಲಿ ರಾಜ್ಯಕ್ಕೆ ಅತ್ಯವಶ್ಯವಾಗಿರುವ ವಿಷಯದ ಬಗ್ಗೆ ಬೇಡಿಕೆ ಮಂಡಿಸ ಲಾಗಿತ್ತಾದರೂ, ರಾಜ್ಯಸರ್ಕಾರದ ಬೇಡಿಕೆಗಳು ಕೇವಲ ಬೇಡಿಕೆಗಳಾಗಿ ಉಳಿದಿವೆ. ಒಂದೇ ಒಂದು ಬೇಡಿಕೆಯನ್ನು ಕೇಂದ್ರ ಈಡೇರಿಸಿಲ್ಲ. ಕೇಂದ್ರ ಸರಕಾರದ ಆಯವ್ಯಯ ಕುರಿತು ಶನಿವಾರ ಮೈಸೂರಿ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತದೃಷ್ಠಿಯಿಂದ ಬಹಳ ನಿರಾಶಾದಾಯಕ ಬಜೆಟ್.

ದೂರದೃಷ್ಟಿ ಇಲ್ಲದೇ ಇರುವ ಬಜೆಟ್. 2025-26 ನೇ ಸಾಲಿನ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿ ಯಿಂದ ಬಜೆಟ್ ಪೂರ್ವಭಾವಿ ಸಭೆಗೆ ಕರೆದಿದ್ದರು. ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದರು. ನಾವು ರಾಜ್ಯದಿಂದ ಹಲವು ಬೇಡಿಕೆ ಇಟ್ಟಿದ್ದೆವು. ರಾಜ್ಯ ಸರಕಾರದ ಬೇಡಿಕೆಗಳು ಕೇವಲ ಬೇಡಿಕೆ ಗಳಾಗಿವೆ. ಒಂದೇ ಒಂದು ಬೇಡಿಕೆಯನ್ನು ಕೇಂದ್ರ ಈಡೇರಿಸಿಲ್ಲ.

ಹೆಚ್ಚು ತೆರಿಗೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಬಿಹಾರ, ಆಂಧ್ರ ಪ್ರದೇಶಕ್ಕೆ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಬಿಹಾರ ರಾಜ್ಯದಲ್ಲಿ ಚುನಾವಣೆ ಕಾರಣಕ್ಕೆ ಹೆಚ್ಚು ಹಣ ಬಿಡುಗಡೆ ಮಾಡಿದ್ದು, ಆಂಧ್ರಕ್ಕೆ ಹೆಚ್ಚು ಅನುದಾನ ನೀಡಿರುವ ಬಜೆಟ್ ಇದಾಗಿದೆ. ರಾಜ್ಯದ ಮೇಕೆದಾಟು, ಕೃಷ್ಣಾ ಸೇರಿ ಯಾವ ಯೋಜನೆಗೂ ಹಣ ನೀಡಿಲ್ಲ. 2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಈವರಗೆ ಒಂದೇ ಒಂದು ರೂಪಾಯಿ ನೀಡಿಲ್ಲ. ಬಜೆಟ್‌ನಲ್ಲಿ ಅದರ ಪ್ರಸ್ತಾಪವೂ ಆಗಿಲ್ಲ.

ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದ ವಿಷಯ ಕೂಡ ಪ್ರಸ್ತಾಪ ಆಗಿಲ್ಲ. ಕರ್ನಾಟಕವು ರಾಜ ಸ್ತಾನ ಬಿಟ್ಟರೆ ಹೆಚ್ಚು ಒಣಭೂಮಿ ಇರುವ ರಾಜ್ಯ. ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಪ್ರಸ್ತಾಪವಿಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಿಸುವ ನಿರೀಕ್ಷೆ ಮಾಡಿದ್ದೆ. ಕೇಂದ್ರ ಸಚಿವ ನಡ್ಡಾ ಭರವಸೆ ನೀಡಿದ್ದರು. ಅದರ ಪ್ರಸ್ತಾಪ ಕೂಡ ಇಲ್ಲ. ರಾಜ್ಯದ ನಗರಗಳಲ್ಲಿ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಪ್ರದೇಶ , ರೈಲು ಹೆದ್ದಾರಿಗಳಿಗೆ ಹಣ ಒದಗಿಸಿಕೊಡುವಂತೆ ಕೇಳಿದ್ದೆವು, ಅದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ.

ಚೆಂಬು ಕೊಡುವ ಕೆಲಸ: ಬೆಂಗಳೂರಲ್ಲಿ ವಿಶೇಷ ಕಾರಿಡಾರ್ ಯೋಜನೆಗೆ ಕೊಟ್ಟಿದ್ದು ಖಾಲಿ ಚೆಂಬು. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಗೌರವ ಧನ ಕೂಡ ಹೆಚ್ಚಿಸಿಲ್ಲ. ಕೇಂದ್ರ ಸರಕಾರದ ಯೋಜನೆಯಾದರೂ ಒಂದೇ ಒಂದು ರೂ. ನೀಡಿಲ್ಲ. ನಗರ ಪ್ರದೇಶದ ವಸತಿ ಯೋಜನೆಯನ್ನು 5 ಲಕ್ಷಕ್ಕೆ ಹೆಚ್ಚಿಸುವಂತೆ ಕೇಳಿದ್ದೆವು. ಗ್ರಾಮೀಣ ಪ್ರದೇಶದ ಹಣವನ್ನು 75 ಸಾವಿರದಿಂದ ಮೂರು ಲಕ್ಷಕ್ಕೆ ಹೆಚ್ಚಿಸುವಂತೆ ಕೇಳಿದ್ದೆವು.

ಅದು ಯಾವುದನ್ನೂ ಕೂಡ ಕೇಂದ್ರ ಬಜೆಟ್ ಮಾಡಿಲ್ಲ. ಈ ಬಾರಿಯ ನರೇಂದ್ರ ಮೋದಿ ಬಜೆಟ್ ಚೊಂಬು ಕೊಡುವ ಕೆಲಸ ಮಾಡಿದೆ. ನಾವು ಈ ಬಜೆಟ್ ನಲ್ಲಿ ಅನೇಕ ಬೇಡಿಕೆ ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದನ್ನೂ ಈಡೇರಿಸುವ ಕೆಲಸ ಕೇಂದ್ರ ಮಾಡಿಲ್ಲ.

ಈ ಬಜೆಟ್ ಗಾತ್ರದಲ್ಲಿ 50 ಲಕ್ಷ 65 ಸಾವಿರ 365 ಕೋಟಿ . ಕೇಂದ್ರ ಸರಕಾರ ಸಾಲ ಮಾಡಿರುವಂ ತಹದ್ದು 15 ಲಕ್ಷದ 68 ಸಾವಿರದ 936 ಕೋಟಿ. ಬಡ್ಡಿ ಪಾವತಿಗೆ 12 ಲಕ್ಷದ 76 ಸಾವಿರ ಕೋಟಿ. ಈ ದೇಶದ ಸಾಲ 202 ಲಕ್ಷದಿಂದ 205 ಲಕ್ಷ ಕೋಟಿಯಷ್ಟಿದೆ. ಒಟ್ಟಾರೆಯಾಗಿ ಈ ಬಜೆಟ್ ಅತ್ಯಂತ ನಿರಾಶಾದಾಯಕ. ಕರ್ನಾಟಕಕ್ಕೆ ವಿರುದ್ಧವಾಗಿರುವ ಬಜೆಟ್ ಇದಾಗಿದೆ.

2023-324ನೇ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಘೋಷಣೆ ಮಾಡಿದರು. ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುವಾಗ ರಾಷ್ಟ್ರೀಯ ಯೋಜನೆ ಮಾಡ್ತೀವಿ ಎಂದಿದ್ದರು. ಅದು ಕೂಡ ಪ್ರಸ್ತಾಪ ಮಾಡಿಲ್ಲ. ವಸತಿ ಯೋಜನೆಗಳಿಗೆ ಕೇಂದ್ರದವರು 1.5 ಲಕ್ಷ ಕೊಡುತ್ತಾರೆ, ಅದನ್ನು ಐದು ಲಕ್ಷಕ್ಕೆ ಏರಿಸುವಂತೆ ಕೇಳಿದ್ದೆವು, ಆದರೆ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಮೂರು ಲಕ್ಷದವರೆಗೆ ಏರಿಸುವಂತೆ ಕೇಳಿದ್ದವು. ಆದರೆ ಯಾವು ದನ್ನೂ ಮಾಡಿಲ್ಲ.

ಬಾಯಿ ಮಾತಲ್ಲಿ ಹೊಟ್ಟೆ ತುಂಬಿಸುವ ಬಜೆಟ್: ನರೇಗಾ ಯೋಜನೆಯ ಹಣ ಕೂಡ ಕಡಿಮೆ ಯಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕೂಡ ನಿರೀಕ್ಷೆ ಮೀರಿ ಪ್ರಯೋಜನಕ್ಕೆ ಬಂದಿಲ್ಲ. ಎಸ್‌ಸಿ/ಎಸ್ ಟಿ ವಿದ್ಯಾರ್ಥಿ ವೇತನ ಹೆಚ್ಚಿಸಿಲ್ಲ. ರೈತರಿಗೆ ನೀಡುವ ಬೆಳೆವಿಮೆ ಕಡಿಮೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬಗ್ಗೆ ಜಾಸ್ತಿ ಮಾತನಾಡುತ್ತಾರೆ. ಮೇಕ್ ಇನ್ ಇಂಡಿಯಾಗೆ ಇಟ್ಟಿರುವುದು ಕೇವಲ ನೂರು ಕೋಟಿ. ಈ ಬಜೆಟ್ ಕೇವಲ ಬಾಯಿಮಾತಲ್ಲಿ ಹೊಟ್ಟೆ ತುಂಬಿಸುವ ಬಜೆಟ್. ಕೃಷಿ ಕ್ಷೇತ್ರಕ್ಕೆ ದೊಡ್ಡ ಯೋಜನೆ ಕೊಡುತ್ತೇನೆ ಎಂಬ ಭರವಸೆ ಹುಸಿಯಾಗಿದೆ. ಬಜೆಟ್‌ನಲ್ಲಿ ಅದರ ಗಾತ್ರ ಕಡಿಮೆ ಮಾಡಿದ್ದಾರೆ.

ಆಹಾರ ಭದ್ರತೆಯಿಲ್ಲ: ಬಡವರ ಆಹಾರ ಖಾತ್ರಿ ಯೋಜನೆಗೆ 2024-25ರಲ್ಲಿ 2 ಲಕ್ಷದ 6 ಸಾವಿರ ಕೋಟಿ. 2025-26 ನೇ ಸಾಲಿಗೆ 2 ಲಕ್ಷದ 3 ಸಾವಿರ ಕೋಟಿ. ಈ ಬಾರಿ ಆಹಾರ ಭದ್ರತೆಗೆ ಕಡಿಮೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಬಡವರು, ಕಾರ್ಮಿಕರು, ಯುವಕರು, ಮಹಿಳೆಯರ ಅಭಿವೃದ್ಧಿಗೆ ಖರ್ಚು ಮಾಡಿಲ್ಲ. ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಟೆಲಿಕಾಂಉದ್ಯಮಿಗಳಿಗೆ 2 ಸಾವಿರ ಕೋಟಿಯಿಂದ 24 ಸಾವಿರ ಕೋಟಿ ಹಣ ಇಟ್ಟಿದ್ದಾರೆ. ಬಿಹಾರ ಚುನಾವ ಣೆ ಹಿನ್ನೆಲೆ ಮೂರು- ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ಬಜೆಟ್ ನಲ್ಲಿ ನಮಗೆ ಘೋಷಣೆ ಮಾಡಿ ಚೆಂಬು ನೀಡಿದ್ದರು, ಅದೇ ರೀತಿ ಬಿಹಾರಕ್ಕೂ ಚೆಂಬು ಕೊಡುತ್ತಾರೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್