ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ski Resort Fire: ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿ ಬೆಂಕಿ ದುರಂತ; 66 ಸಾವು, 51 ಜನರಿಗೆ ಗಂಭೀರ ಗಾಯ

Ski Resort Fire: ಟರ್ಕಿ ದೇಶದ ಪ್ರಖ್ಯಾತ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಬೀಕರ ಬೆಂಕಿ ದುರಂತದಲ್ಲಿ 66 ಜನರು ಸಾವನ್ನಪ್ಪಿದ್ದಾರೆ. ಬೋಲು ಪ್ರಾಂತ್ಯದ ಕಾರ್ತಲ್ಕಯಾ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಬೆಳಗಿನ ಜಾವ 3:27 ಕ್ಕೆ ಅವಘಡ ಸಂಭವಿಸಿದೆ. ಸತ್ತವರ ಸಂಖ್ಯೆ 66 ಇದ್ದರೆ 51 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವಾಲಯ ತಿಳಿಸಿದೆ.

Ski Resort Fire

ಅಂಕಾರಾ: ಟರ್ಕಿಯ(Turkey) ಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 66 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವಾಲಯ ಮಂಗಳವಾರ (ಜ. 21) ಹೇಳಿದೆ. ಬೋಲು ಪ್ರಾಂತ್ಯದ ಕಾರ್ತಲ್ಕಯಾದಲ್ಲಿ ಮುಂಜಾನೆ 3:27ರ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ (Ski Resort Fire). ದುರಂತದಲ್ಲಿ 51 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ನಾವು ಸಾಕಷ್ಟು ನೊಂದಿದ್ದೇವೆ. ದುರದೃಷ್ಟವಶಾತ್ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 66 ಜನರು ಮೃತಪಟ್ಟಿದ್ದಾರೆ”ಎಂದು ಯೆರ್ಲಿಕಾಯಾ ಸ್ಥಳವನ್ನು ಪರಿಶೀಲಿಸಿದ ಆರೋಗ್ಯ ಸಚಿವ ಕೆಮಲ್ ಮೆಮಿಸೊಗ್ಲು ಸುದ್ದಿಗಾರರಿಗೆ ತಿಳಿಸಿದರು. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ತೀರಾ ಗಂಭೀರವಾಗಿದ್ದು,ಸದ್ಯ ಏನನ್ನೂ ಹೇಳದ ಪರಿಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.



ಬೆಂಕಿ ಕಾಣಿಸಿಕೊಂಡ ಕೂಡಲೇ ರೆಸಾರ್ಟ್​ನಲ್ಲಿದ್ದ ಜನ ಕಿಟಕಿಗಳ ಮೂಲಕ ಹೊರಗೆ ಜಿಗಿಯಲು ಪ್ರತ್ನಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಜನವರಿಯಿಂದ ಫೆಬ್ರವರಿ ಮೊದಲ ವಾರದವರೆಗೆ ಶಾಲೆಗಳಿಗೆ ರಜೆಯಿದೆ. ಈ ಹಿನ್ನೆಲೆ ಚಳಿಗಾಲದ ತಾಣವಾಗಿರುವ ರೆಸಾರ್ಟ್‌ಗೆ ಇಸ್ತಾನ್‌ಬುಲ್ ಮತ್ತು ಅಂಕಾರಾದಿಂದ ಜನರು ಸ್ಕೀಯಿಂಗ್‌ಗಾಗಿ ಬರುತ್ತಾರೆ. ಬೋಲು ಪರ್ವತಗಳಿಗೆ ಹೆಚ್ಚಿನ ಜನರು ಬಂದಿರುವಾಗಲೇ ಅಗ್ನಿ ಅವಘಡ ನಡೆದಿದ್ದು ಸಾವು-ನೋವುಗಳು ಹೆಚ್ಚಾಗಿವೆ.

ಈ ಸುದ್ದಿಯನ್ನೂ ಓದಿ:Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ!