ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL vs AUS: ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಆಘಾತ ನೀಡಿದ ಶ್ರೀಲಂಕಾ!

SL vs AUS 1st ODI Highlights: ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ 49 ರನ್‌ಗಳಿಂದ ಗೆಲುವು ಪಡೆದಿದೆ. ನಾಯಕ ಚರಿತಾ ಅಸಲಂಕ ಶತಕ ಸಿಡಿಸಿ ಶ್ರೀಲಂಕಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. 215 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 165 ರನ್‌ಗಳಿಗೆ ಆಲ್‌ಔಟ್‌ ಆಯಿತು. ಮಹೇಶ ತೀಕ್ಷಣ 4 ವಿಕೆಟ್‌ ಕಿತ್ತರು.

ಲೋ-ಸ್ಕೋರಿಂಗ್‌ ಪಂದ್ಯದಲ್ಲಿ ಆಸೀಸ್‌ಗೆ ಸೋಲುಣಿಸಿದ ಶ್ರೀಲಂಕಾ!

Charita Asalanka Hundred

Profile Ramesh Kote Feb 12, 2025 10:50 PM

ಕೊಲಂಬೊ: ನಾಯಕ ಚರಿತಾ ಅಸಲಂಕ (127) ಶತಕ ಹಾಗೂ ಮಹೇಶ ತೀಕ್ಷಣ (40 ಕ್ಕೆ 4) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಶ್ರೀಲಂಕಾ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 49 ರನ್‌ಗಳ ಗೆಲುವು ಸಾಧಿಸಿದೆ. ಆ ಮೂಲಕ ಎರಡು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆಯನ್ನು ಪಡೆದಿದೆ. ಈಗಾಗಲೇ ಗಾಯದ ಕಾರಣ ಹಲವು ಸ್ಟಾರ್‌ಗಳನ್ನು ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಶ್ರೀಲಂಕಾ ಎದುರಿನ ಸೋಲು ಆಘಾತವನ್ನುಂಟು ಮಾಡಿದೆ.

ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 46 ಓವರ್‌ಗಳಲ್ಲಿ 214 ರನ್‌ಗಳಿಗೆ ಆಲ್‌ಔಟ್‌ ಆಯಿತು. ಲಂಕಾ ಪರ ನಾಯಕ ಚರಿತಾ ಅಸಲಂಕ 126 ಎಸೆತಗಳಲ್ಲಿ 14 ಬೌಂಡರಿಗಳು ಹಾಗೂ 5 ಸಿಕ್ಸರ್‌ಗಳ ಸಹಾಯದಿಂದ 127 ರನ್ ಗಳಿಸಿ ಶತಕವನ್ನು ಪೂರ್ಣಗೊಳಿಸಿದರ. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವರ ಜೊತೆಗೆ ದುನಿತ್ ವೆಲ್ಲಾಳಗೆ 30 ರನ್ ನಿರ್ಣಾಯಕ ಕೊಡುಗೆಯನ್ನು ನೀಡಿದರು. ಕುಸಾಲ್ ಮೆಂಡಿಸ್ (19) ಮತ್ತು ಜನಿತ್ ಲಿಯಾನಗೆ (11) ಎರಡಂಕಿ ವೈಯಕ್ತಿಕ ರನ್ ಗಳಿಸಿದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

AUS vs SL: ತವರಿನಲ್ಲಿ ಶ್ರೀಲಂಕಕ್ಕೆ ಮುಖಭಂಗ, ಆಸ್ಟ್ರೇಲಿಯಾಗೆ ಟೆಸ್ಟ್‌ ಸರಣಿ!

ಆಸ್ಟ್ರೇಲಿಯಾ ತಂಡದ ಪರ ಸ್ಪೆನ್ಸರ್ ಜಾನ್ಸನ್, ನೇಥನ್ ಎಲ್ಲಿಸ್ ಮತ್ತು ಆರೋನ್ ಹಾರ್ಡಿ ತಲಾ ಎರಡೆರಡು ವಿಕೆಟ್‌ ಪಡೆದರೆ, ವೇಗಿ ಶಾನ್‌ ಎಬಾಟ್ 3 ವಿಕೆಟ್ ಪಡೆದರು. ಮ್ಯಾಥ್ಯೂ ಶಾರ್ಟ್ ಒಂದು ವಿಕೆಟ್ ಪಡೆದರು. ನಾಯಕ ಅಸಲಂಕ ಆಡಿಲ್ಲವಾಗಿದ್ದರೆ ಶ್ರೀಲಂಕಾ ತಂಡ 150 ರನ್‌ಗಳನ್ನು ತಲುಪಲೂ ಸಾಧ್ಯವಾಗುತ್ತಿರಲಿಲ್ಲ.

215 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ ಗೆಲ್ಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಇದಕ್ಕೆ ಶ್ರೀಲಂಕಾ ಬೌಲರ್‌ಗಳು ಅವಕಾಶ ಮಾಡಿಕೊಳ್ಳಲಿಲ್ಲ. ಗುರಿ ಹಿಂಬಾಲಿಸಿದ್ದ ಆಸೀಸ್‌ಗೆ ಅಸಿತಾ ಫೆರ್ನಾಂಡೊ ಆರಂಭಿಕ ಆಘಾತ ನೀಡಿದ್ದರು. ಮ್ಯಾಥ್ಯೂ ಶಾರ್ಟ್‌ ಮತ್ತು ಜೇಕ್‌ ಪ್ರೆಸರ್‌ಮೆಗರ್ಕ್‌ ಅವರನ್ನು ಫೆರ್ನಾಂಡೊ ಔಟ್‌ ಮಾಡಿದ್ದರು. ಕೂಪರ್ ಕೊನೊಲಿ ಅವರನ್ನು ಮಹೇಶ್‌ ತೀಕ್ಷಣ ಔಟ್‌ ಮಾಡಿ ಫೆರ್ನಾಂಡೊ ಹಾದಿಯನ್ನು ಅನುಸರಿಸಿದರು. ನಾಯಕ ಸ್ಟೀವನ್‌ ಸ್ಮಿತ್‌ (12) ಅವರನ್ನು ದುಲಿತ್‌ ವೆಲ್ಲಾಳಗೆ ಕ್ಲೀನ್‌ ಬೌಲ್ಡ್‌ ಮಾಡಿದರು.



ಅಲೆಕ್ಸ್ ಕ್ಯಾರಿ 41 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು ಮತ್ತು ಆಡಮ್ ಜಂಪಾ ಕೊನೆಯಲ್ಲಿ 20 ರನ್ ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ಪರ ಮಹೇಶ್ ತೀಕ್ಷಣ 4 ವಿಕೆಟ್ ಪಡೆದರೆ, ವೆಲ್ಲಲಗೆ ಮತ್ತು ಅಸಿತಾ ಫರ್ನಾಂಡೊ ತಲಾ 2 ವಿಕೆಟ್ ಪಡೆದರು. ವನಿಂದು ಹಸರಂಗ ಮತ್ತು ಚರಿತ್ ಅಸ್ಲಂಕಾ ತಲಾ ಒಂದು ವಿಕೆಟ್ ಪಡೆದರು. ಮಾರ್ನಸ್‌ ಲಾಬುಶೇನ್‌ (15) ಅವರಿಗೆ ಮಹೇಶ್‌ ತೀಕ್ಷಣ ಪೆವಿಲಿಯನ್‌ ಹಾದಿ ತೋರಿದರು.



ಅಲೆಕ್ಸ್‌ ಕೇರಿ 40 ರನ್‌

ಆಸ್ಟ್ರೇಲಿಯಾ ತಂಡದ ಪರ ಕೆಳ ಮಧ್ಯಮ ಕ್ರಮಾಂಕದಲ್ಲಿ ಕೊಂಚ ಪ್ರತಿರೋಧ ತೋರಿದ ವಿಕೆಟ್‌ ಕೀಪರ್‌ ಅಲೆಕ್ಸ್‌ ಕೇರಿ 41 ರನ್‌ ಗಳಿಸಿದರು. ಆ ಮೂಲಕ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆದರೆ, ಅವರನ್ನು ಅಸಲಂಕ ಔಟ್‌ ಮಾಡಿದರು. ಆರೋನ್‌ ಹಾರ್ಡಿ 32 ರನ್‌ ಹಾಗೂ ಶಾನ್‌ ಎಬಾಟ್‌ ಮತ್ತು ಆಡಮ್‌ ಝಾಂಪ ತಲಾ 20 ರನ್‌ಗಳನ್ನು ಕಲೆ ಹಾಕಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ 33.5 ಓವರ್‌ಗಳಿಗೆ 165 ರನ್‌ಗಳಿಗೆ ಆಲ್‌ಔಟ್‌ ಆಯಿತು. ಶ್ರೀಲಂಕಾ ಪರ ಮಹೇಶ ತೀಕ್ಷಣ 4 ವಿಕೆಟ್‌ ಪಡೆದರೆ, ಅಸಿತಾ ಫೆರ್ನಾಂಡೊ ಮತ್ತು ದುನಿತ್‌ ವೆಲ್ಲಾಳಗೆ ತಲಾ ಎರಡೆರಡು ವಿಕೆಟ್‌ ಪಡೆದರು.