ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‌ಎಸ್‌ಎಲ್‌ಸಿ ಫಲಿತಾಂಶ 10ರೊಳಗಿನ ಕನಸು ಭಗ್ನ : 22 ರಿಂದ 33ನೇ ಸ್ಥಾನಕ್ಕೆ ಕುಸಿದ ಜಿಲ್ಲೆ

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಕಳೆದ ಬಾರಿ ಪಡೆದಿದ್ದ 22ನೇ ಸ್ಥಾನದಿಂದ ಈ ಬಾರಿ 33ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆದರೆ ಒಬ್ಬ ವಿದ್ಯಾರ್ಥಿ 2ನೇ ರ‍್ಯಾಂಕ್, 4 ವಿದ್ಯಾರ್ಥಿಗಳು 3ನೇ ರ‍್ಯಾಂಕ್ ಪಡೆದಿರುವುದು ಸಮಾಧಾನದ ಸಂಗತಿಯಾಗಿದೆ. ಶೇಕಡವಾರು ಫಲಿ ತಾಂಶದಲ್ಲಿ ಕಳೆದ ಬಾರಿಗಿಂತ 23.6 ರಷ್ಟು ಏರಿಕೆಯಾಗಿದ್ದರು ಕೂಡ ರಾಜ್ಯ ಮಟ್ಟದ ರಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿಗೆ 33ನೇ ಸ್ಥಾನಕ್ಕೆ ಕುಸಿದಿರುವುದು ಪೋಷಕರು ಮತ್ತು ಜನತೆಯ ಬೇಸರಕ್ಕೆ ಕಾರಣವಾಗಿದೆ.

ಕಳೆದ ಬಾರಿಗಿಂತ ಶೇ 90.88 ರಷ್ಟು ಏರಿಕೆ ಅಂದರೆ 63ರಿಂದ 27.68ರಷ್ಟು ಏರಿಕೆಯೇ ಸಮಾಧಾನ

624 ಅಂಕಗಳ ಮೂಲಕ 2ನೇ ರ‍್ಯಾಂಕ್ ಪಡೆದ ಬಿಜಿಎಸ್ ಮಂಚನಬಲೆ ಗ್ರಾಮೀಣ ಶಾಲೆಯ ವಿದ್ಯಾರ್ಥಿ ಪ್ರಣಿತಿರಾಜ್.ಜಿ.

ಚಿಕ್ಕಬಳ್ಳಾಪುರ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಕಳೆದ ಬಾರಿ ಪಡೆದಿದ್ದ 22ನೇ ಸ್ಥಾನದಿಂದ ಈ ಬಾರಿ 33ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆದರೆ ಒಬ್ಬ ವಿದ್ಯಾರ್ಥಿ 2ನೇ ರ‍್ಯಾಂಕ್, 4 ವಿದ್ಯಾರ್ಥಿಗಳು 3ನೇ ರ‍್ಯಾಂಕ್ ಪಡೆದಿರುವುದು ಸಮಾಧಾನದ ಸಂಗತಿಯಾಗಿದೆ.

ಶೇಕಡವಾರು ಫಲಿತಾಂಶದಲ್ಲಿ ಕಳೆದ ಬಾರಿಗಿಂತ 23.6 ರಷ್ಟು ಏರಿಕೆಯಾಗಿದ್ದರು ಕೂಡ ರಾಜ್ಯ ಮಟ್ಟದ ರಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿಗೆ 33ನೇ ಸ್ಥಾನಕ್ಕೆ ಕುಸಿದಿರುವುದು ಪೋಷಕರು ಮತ್ತು ಜನತೆಯ ಬೇಸರಕ್ಕೆ ಕಾರಣವಾಗಿದೆ.

ಜಿಲ್ಲೆಯ ಮಾನ ಉಳಿಸಿರುವ ಐದು ವಿದ್ಯಾರ್ಥಿಗಳ ಪೈಕಿ ಮಂಚನಬಲೆಯ ಬಾಲಗಂಗಾಧರನಾಥ ಸ್ವಾಮೀಜಿ ಪ್ರೌಢಶಾಲೆ ಪ್ರಣತಿರಾಜ್.ಜಿ 625 ಅಂಕಗಳಿಗೆ ೬೨೪ ಅಂಕ ಗಳಿಸುವ ಮೂಲಕ ಎರಡನೇ ರಾಂಕ್ ಪಡೆದಿದ್ದಾರೆ. ಇದೇ ರೀತಿ ಅಗಲಗುರ್ಕಿ ಬಿಜಿಎಸ್ ಇಂಗ್ಲಿಷ್ ಹೈಸ್ಕೂಲ್ ನ ಪಿ.ಎಸ್. ಸೂಫಿಯಾ-622, ಬಾಗೇಪಲ್ಲಿಯ ಶ್ರೀ ಎಸ್‌ಎಸ್‌ವಿಎನ್ ಇಂಗ್ಲಿಷ್ ಪ್ರೌಢಶಾಲೆಯ ಯಾಮಿನಿ.ಆರ್-622, ಬಾಗೇಪಲ್ಲಿಯ ಬಿಜಿಎಸ್ ಪಬ್ಲಿಕ್ ಶಾಲೆಯ ಯಶಸ್ವಿನಿ.ಎನ್-622, ಗೌರಿ ಬಿದನೂರು ಬಿಜಿಎಸ್ ಪಬ್ಲಿಕ್ ಶಾಲೆಯ ತೇಜಶ್ರೀ.ಆರ್-622 ಅಂಕ ಗಳಿಸುವ ಮೂಲಕ ಜಿಲ್ಲೆಯ ಮಾನ ಉಳಿಸಿದ್ದಾರೆ.

ಇದನ್ನೂ ಓದಿ: SSLC Result: ಎಸ್‌ಡಿಎಂ ಶಾಲೆಯ ವಿದ್ಯಾರ್ಥಿನಿಯರ ಎಸ್‌ಎಸ್‌ಎಲ್‌ಸಿ ಶ್ರೇಷ್ಠ ಸಾಧನೆ

ಅಂದ ಹಾಗೆ ಈ ಬಾರಿ 2025-26ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 1437.5 ವಿದ್ಯಾರ್ಥಿಗಳು ಹಾಜರಾಗಿದ್ದು 12999 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 90.88 ಫಲಿತಾಂಶ ತಂದಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 6940 ಹುಡುಗರ ಪೈಕಿ 6089 ಹುಡುಗರು ಉತ್ತೀರ್ಣರಾಗುವ ಮೂಲಕ 87.73 ಶೇಕಡವಾರು ಫಲಿತಾಂಶ ತಂದಿದ್ದಾರೆ. ಅದೇ ರೀತಿ, 7435 ಹುಡುಗಿಯರು ಪರೀಕ್ಷೆ ತೆಗೆದುಕೊಂಡಿದ್ದು, 6910 ಉತ್ತೀರ್ಣರಾಗಿ ಶೇಕಡವಾರು 92.93 ಫಲಿತಾಂಶ ತಂದಿದ್ದಾರೆ.
*
ಈ ಬಾರಿ  ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 3621 ಹೆಣ್ಣು ಮಕ್ಕಳು, 2936 ಗಂಡು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 2462 ಗಂಡು ಮಕ್ಕಳು 3281 ಹೆಣ್ಣು ಮಕ್ಕಳು ಒಟ್ಟು 5743 ಮಂದಿ ಉತ್ತೀರ್ಣರಾಗುವ ಮೂಲಕ 87.58 ಶೇಕಡವಾರು ಫಲಿತಾಂಶ ದಾಖಲಿಸಿದ್ದಾರೆ.

pranatiraj 624

ಒಟ್ಟು ಅನುದಾನಿತ ಪ್ರೌಢಶಾಲೆಗಳ 1211 ಗಂಡು ಮಕ್ಕಳು 1306 ಹೆಣ್ಣು ಮಕ್ಕಳು ಒಟ್ಟು 2517 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 972 ಗಂಡು ಮಕ್ಕಳು 1176 ಹೆಣ್ಣು ಮಕ್ಕಳು ಒಟ್ಟು 2148 ಪಾಸಾಗಿದ್ದು ಶೇಕಡವಾರು 85.33 ಫಲಿತಾಂಶ ಪಡೆದಿದ್ದಾರೆ.

ಅನುದಾನ ರಹಿತ ಶಾಲೆಗಳಲ್ಲಿ 2793 ಗಂಡು 2508 ಹೆಣ್ಣು ಒಟ್ಟು 5301 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 2655 ಗಂಡು, 2453 ಹೆಣ್ಣು ಒಟ್ಟು 5108 ಮಂದಿ ಉತ್ತೀರ್ಣರಾಗುವ ಮೂಲಕ 96.35 ಶೇಕಡವಾರು ಫಲಿತಾಂಶ ದಾಖಲಿಸಿದ್ದಾರೆ.

ತಾಲೂಕುವಾರು ಫಲಿತಾಂಶ
ಬಾಗೇಪಲ್ಲಿ ತಾಲೂಕು 2025-26 ಸಾಲಿನಲ್ಲಿ 2202 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 1983 ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇಕಡ 90.9 ಫಲಿತಾಂಶ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 2714 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2587 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.32 ಫಲಿತಾಂಶ ಪಡೆದಿದ್ದಾರೆ.

ಚಿಂತಾಮಣಿ ತಾಲೂಕಿನಲ್ಲಿ 3356 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 3123 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು ಶೇಕಡವಾರು 93.05 ಫಲಿತಾಂಶ ಪಡೆದಿದ್ದಾರೆ.

ಗೌರಿಬಿದನೂರು ತಾಲೂಕಿನಲ್ಲಿ 3040 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 2454 ವಿದ್ಯಾರ್ಥಿ ಗಳು ಪಾಸಾಗಿದ್ದಾರೆ. ಆ ಮೂಲಕ ಶೇಕಡವಾರು 80.72 ಫಲಿತಾಂಶ ದಾಖಲಿಸಿದ್ದಾರೆ.

ಗುಡಿಬಂಡೆ ತಾಲೂಕಿನಲ್ಲಿ 593 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 569 ವಿದ್ಯಾರ್ಥಿಗಳು ಮೂಲಕ 92.39 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

yamini 622,sri ssvn eng med high school

ಶಿಡ್ಲಘಟ್ಟ ತಾಲೂಕಿನಲ್ಲಿ 2471 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 2283 ವಿದ್ಯಾರ್ಥಿಗಳು ಪಾಸಾಗಿ 92.39 ಫಲಿತಾಂಶ ಪಡೆದಿದ್ದಾರೆ.

ಹೀಗೆ ಜಿಲ್ಲೆಯ ತಾಲೂಕುವಾರು ಫಲಿತಾಂಶದಲ್ಲಿ ಆಯ್ತಾ ಗುಡಿಬಂಡೆ ಪ್ರಥಮ ಸ್ಥಾನ ಚಿಕ್ಕಬಳ್ಳಾ ಪುರ ಎರಡನೇ ಸ್ಥಾನ , ಚಿಂತಾಮಣಿ ಮೂರನೇ ಸ್ಥಾನ, ಶಿಡ್ಲಘಟ್ಟ 4ನೇ ಸ್ಥಾನ ಬಾಗೇಪಲ್ಲಿ 5ನೇ ಸ್ಥಾನ ಗೌರಿಬಿದನೂರು ಕೊನೆಯ ಸ್ಥಾನ ಪಡೆದಿದೆ.

ಮಾಧ್ಯಮವಾರು ಮಾಹಿತಿ
2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು 5666 ವಿದ್ಯಾರ್ಥಿ ಗಳು ತೆಗೆದುಕೊಂಡಿದ್ದು 4749 ವಿದ್ಯಾರ್ಥಿಗಳು ಉತ್ತೀರ್ಣರಾಗಿ 8381 ಶೇಕಡವಾರು ಫಲಿತಾಂಶ ಪಡೆಯುವ ಮೂಲಕ ಕಳೆದ ಬಾರಿಗಿಂತ 37% ಹೆಚ್ಚಿನ ಫಲಿತಾಂಶದ ಸಾಧನೆ ಮಾಡಿದ್ದಾರೆ.

ಇಂಗ್ಲೀಷ್ ವಿಷಯದಲ್ಲಿ 8663 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆಪೈಕಿ 8211 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 94.78 ಶೇಕಡವಾರು ಫಲಿತಾಂಶ ಪಡೆದಿದ್ದಾರೆ.

ಉರ್ದು 46 ವಿದ್ಯಾರ್ಥಿಗಳು ಬರೆದಿದ್ದು 39 ವಿದ್ಯಾರ್ಥಿಗಳು ಪಾಸಾಗಿ ಶೇಕಡವಾರು 84.78 ಫಲಿತಾಂಶದ ದಾಖಲಿಸಿದ್ದಾರೆ.

*
ಈ ಬಾರಿಯ ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಿಂದ 9051 ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು 8232 ಮಂದಿ ಉತ್ತೀರ್ಣರಾಗಿ ಶೇಕಡವಾರು 90.35 ಫಲಿತಾಂಶ ಪಡೆದಿದ್ದಾರೆ.

ನಗರ ಪ್ರದೇಶದಲ್ಲಿ 5324 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು 4767 ವಿದ್ಯಾರ್ಥಿಗಳು ಉತ್ತೀರ್ಣ ರಾಗುವ ಮೂಲಕ 89.53 ಫಲಿತಾಂಶ ಪಡೆದು ಗ್ರಾಮೀಣರಿಗಿಂತ 1.02 ಫಲಿತಾಂಶ ಕಡಿಮೆ ಪಡೆದಿ ದ್ದಾರೆ. ಅಂದರೆ ಪರೀಕ್ಷೆಗೆ ಹಾಜರಾದವರ ಸಂಖ್ಯೆ 14375 ಉತ್ತೀರ್ಣರಾದವರು 12999 ಶೇಕಡಾವಾರು ಫಲಿತಾಂಶ 90.88 ಬಂದಿದೆ.

ವಿಷಯವಾರು ಫಲಿತಾಂಶ
ಪ್ರಥಮಭಾಷೆಯ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು 14288, ಉತ್ತೀರ್ಣ-13773, ಶೇ. 96.39
ದ್ವಿತೀಯ ಭಾಷೆಯ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು 14279, ಉತ್ತೀರ್ಣ-13999, ಶೇ. 98.03
ತೃತೀಯ ಭಾಷೆ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು 14263, ಉತ್ತೀರ್ಣ-13898, ಶೇ. 97.44
ಗಣಿತ-14296,ಉತ್ತೀರ್ಣ-13729, ಶೇ.96.03 ವಿಜ್ಞಾನ-14298, ಉತ್ತೀರ್ಣ-13842, ಶೇ.96.81, ಸಮಾಜ ವಿಜ್ಞಾನ-14293, 13659, ಶೇ,.95.96.

image

ಕಳೆದ ಬಾರಿಯ ಫಲಿತಾಂಶದಲ್ಲಿ ಜಿಲ್ಲೆ ಶೇ.63ರಷ್ಟು ಫಲಿತಾಂಶ ಪಡೆದು 22ನೇ ಸ್ಥಾನದಲ್ಲಿತ್ತು. ಈ ಬಾರಿ ಶೇಕಡವಾರು 90.88 ಸಾಧನೆ ಮೂಲಕ 33ನೇ ಸ್ಥಾನ ಪಡೆದಿದೆ. ವಿಶೇಷವಾಗಿ 111 ಶಾಲೆಗಳ ಪೈಕಿ 32 ಸರಕಾರಿ ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಿವೆ. ಕ್ಯಾಲಿಟಿಯಲ್ಲಿ ಸುಧಾರಣೆ ಆಗಿದೆ. ಕಳೆದ ಬಾರಿ ನಮ್ಮ ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿ ದ್ದರು. ಆದರೆ ಈ ಬಾರಿ 1376 ವಿದ್ಯಾರ್ಥಿಗಳು ಫೇಲಾಗಿದ್ದು ಬಹುತೇಕರು ಒಂದು ಎರಡು ವಿಷಯಗಳಲ್ಲಿ ನಫಾಸಾಗಿದ್ದಾರೆ. ಎರಡನೇ ಪರೀಕ್ಷೆಯಲ್ಲಿ ಎಲ್ಲರೂ ಕೂಡ ಉತ್ತೀರ್ಣರಾಗುತ್ತಾರೆ. ಸ್ಥಾನ ಕಡಿಮೆ ಆಗಿರಬಹುದು, ಕಳೆದ ಬಾರಿಗಿಂತ ಶೇಕಡವಾರು ಉತ್ತಮ ಫಲಿತಾಂಶ ಬಂದಿದೆ.

ವಿ.ರಮೇಶ್ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ಚಿಕ್ಕಬಳ್ಳಾಪುರ.
image

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ  ಎಸ್ ಎಸ್ ಎಲ್ ಸಿ ಫಲಿತಾಂಶ ಶೇ63.2ರಷ್ಟು ಇದ್ದದ್ದು,ಈ ಬಾರಿ ಶೇಕಡ 90.82 ಕ್ಕೆ  ಉತ್ತಮಗೊಂಡಿದೆ ಆದರೂ ರಾಂಕಿಂಗ್ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. 2026-27 ಸಾಲಿನಲ್ಲಿ ಪರಿಣಾಮಕಾರಿ ಯುಕ್ತ ಕ್ರಮಗಳನ್ನು ಕೈಗೊಂಡು ರಾಂಕಿಂಗ್ ಪಟ್ಟಿಯಲ್ಲಿಯೂ ಉತ್ತಮ ಸಾಧನೆ ಗಳಿಸುವಂತೆ ಮಾಡಲಾಗುವುದು.

-ಜಿಲ್ಲಾಧಿಕಾರಿ ಜಿ ಪ್ರಭು ಚಿಕ್ಕಬಳ್ಳಾಪುರ.