76th Republic Day : 76ನೇ ಗಣರಾಜ್ಯೋತ್ಸವ; ಕರ್ತವ್ಯ ಪಥದಲ್ಲಿ ಸೇನಾ ಪರೇಡ್‌ಗೆ ಕ್ಷಣಗಣನೆ
ಭಾರತ 76 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಿದ್ದಾರೆ. ಬೆಳಗ್ಗೆ ಸುಮಾರು 10.30 ರಿಂದ ಕರ್ತವ್ಯ ಪಥದಲ್ಲಿ ಪರೇಡ್ ಪ್ರಾರಂಭಗೊಳ್ಳಲಿದೆ.

Republic Day

ನವದೆಹಲಿ: ಭಾರತವು 76 ನೇ ಗಣರಾಜ್ಯೋತ್ಸವದ (76th Republic Day) ಸಂಭ್ರಮದಲ್ಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ಕರ್ತವ್ಯ ಪಥದಲ್ಲಿ (Kartavya Path) ಗಣರಾಜ್ಯೋತ್ಸವವನ್ನು ಆಚರಿಸಲಿದ್ದಾರೆ. 90 ನಿಮಿಷಗಳ ಪರೇಡ್ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮನದೊಂದಿಗೆ ರಾಷ್ಟ್ರವನ್ನು ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಸಮಾರಂಭವು ಪ್ರಾರಂಭವಾಗುತ್ತದೆ.
ಈ ಬಾರಿಯ ಗಣರಾಜ್ಯೋತ್ಸವ 2025 ರ ಥೀಮ್ ‘ಸುವರ್ಣ ಭಾರತ - ಪರಂಪರೆ ಮತ್ತು ಅಭಿವೃದ್ಧಿ’ ಎಂದು ಇಡಲಾಗಿದೆ. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ನಿರಂತರ ಪ್ರಗತಿಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಿದ್ದಾರೆ. ಇದು ಭಾರತ ಮತ್ತು ಇಂಡೋನೇಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ ವೃದ್ದಿಸುವಲ್ಲಿ ಸಹಕಾರಿಯಾಗಿದೆ.
ಬೆಳಗ್ಗೆ ಸುಮಾರು 10.30 ರಿಂದ ಪರೇಡ್ ಪ್ರಾರಂಭವಾಗಲಿದ್ದು, 152 ಸದಸ್ಯರನ್ನು ಒಳಗೊಂಡಿರುವ ಇಂಡೋನೇಷಿಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರೊಂದಿಗೆ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಪರೇಡ್‌ನಲ್ಲಿ ಭಾಗವಹಿಸುತ್ತದೆ. ಕನಿಷ್ಠ 5,000 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾರಿ ಶಕ್ತಿ (ಮಹಿಳಾ ಶಕ್ತಿ) ಅನ್ನು ಪ್ರತಿನಿಧಿಸುವ ಎಲ್ಲಾ ಮೂರು ಸೇವೆಗಳ ಅನುಭವಿ ಮಹಿಳಾ ಅಧಿಕಾರಿಗಳು ಪರೇಡ್‌ನ್ನು ಮುನ್ನೆಡೆಸಲಿದ್ದಾರೆ.
Delhi: Preparations are in full swing for the 76th Republic Day Parade at Kartavya Path.#RepublicDayWithAkashvani #RepublicDay2025 | #76thRepublicDay | #RepublicDay | #RepublicDayParade | #Kartavyapath pic.twitter.com/k8EsUJyO2Y
— All India Radio News (@airnewsalerts) January 26, 2025
ಈ ಸುದ್ದಿಯನ್ನೂ ಓದಿ : Narendra Modi: ಐತಿಹಾಸಿಕ ಕುಂಭಮೇಳದಲ್ಲಿ ಫೆ.5 ರಂದು ಪ್ರಧಾನಿ ಮೋದಿ ಭಾಗಿ; ಪುಣ್ಯ ಸ್ನಾನ!
'ದ ಡೇರ್ ಡೆವಿಲ್ಸ್' ಎಂದು ಪ್ರಸಿದ್ಧವಾಗಿರುವ ಕಾರ್ಪ್ಸ್ ಆಫ್ ಸಿಗ್ನಲ್ಸ್ ಮೋಟಾರ್‌ಸೈಕಲ್ ರೈಡರ್ ಡಿಸ್ಪ್ಲೇ ತಂಡವು ಬುಲೆಟ್ ಸೆಲ್ಯೂಟ್, ಟ್ಯಾಂಕ್ ಟಾಪ್, ಡಬಲ್ ಜಿಮ್ಮಿ, ಡೆವಿಲ್ಸ್ ಡೌನ್, ಲ್ಯಾಡರ್ ಸೆಲ್ಯೂಟ್ ಸೇರಿದಂತೆ ಹಲವಾರು ರಚನೆಗಳ ಮೂಲಕ ತಮ್ಮ ಶೌರ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಈತ್ತೀಚೆಗೆ ಇವರ ತಂಡವು ಗಿನ್ನಿಸ್ ದಾಖಲೆಗೆ ಸೇರಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 29 ರಂದು ವಿಜಯ್ ಚೌಕ್‌ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭದೊಂದಿಗೆ ಗಣರಾಜ್ಯೋತ್ಸವ ಆಚರಣೆಗಳು ಮುಕ್ತಾಯಗೊಳ್ಳುತ್ತವೆ.