ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunil Chhetri: ನಿವೃತ್ತಿ ನಿರ್ಧಾರ ಹಿಂಪಡೆದ ಫುಟ್ಬಾಲ್‌ ದಿಗ್ಗಜ ಸುನಿಲ್ ಚೆಟ್ರಿ!

Sunil Chhetri comes out of retirement: ಕಳೆದ ವರ್ಷ ಜೂನ್ 6ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ದ ನಡೆದಿದ್ದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವನ್ನಾಡಿ ಚೆಟ್ರಿ ವಿದಾಯ ಹೇಳಿದ್ದರು. ಕ್ರಿಸ್ಟಿಯಾನೋ ರೊನಾಲ್ಡೊ(135) ಮತ್ತು ಲಿಯೊನೆಲ್‌ ಮೆಸ್ಸಿಯ(112) ಬಳಿಕ ಸಕ್ರೀಯ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳಿಸಿದರ ಪಟ್ಟಿಯಲ್ಲಿ ಛೇಟ್ರಿ(94) ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಿವೃತ್ತಿ ನಿರ್ಧಾರ ಹಿಂಪಡೆದ ಫುಟ್ಬಾಲ್‌ ದಿಗ್ಗಜ ಸುನಿಲ್ ಚೆಟ್ರಿ!

Profile Abhilash BC Mar 7, 2025 3:39 PM

ನವದೆಹಲಿ: ಭಾರತದ ಫುಟ್ಬಾಲ್ ದಂತಕಥೆ ಸರ್ವಶ್ರೇಷ್ಠ ಆಟಗಾರ, ಸುನಿಲ್‌ ಚೆಟ್ರಿ(Sunil Chhetri) ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದಾರೆ. ಮುಂಬರುವ ಎಎಫ್‌ಸಿ ಏಶ್ಯನ್ ಕಪ್ 2027ರ ಅರ್ಹತಾ ಸುತ್ತಿನಲ್ಲಿ ಭಾರತೀಯ ಫುಟ್‌ಬಾಲ್(Indian football team) ತಂಡ ಅರ್ಹತೆ ಗಿಟ್ಟಿಸುವುದನ್ನು ಖಾತರಿ ಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಜೂನ್ 6ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ದ ನಡೆದಿದ್ದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯವನ್ನಾಡಿ ಚೆಟ್ರಿ ವಿದಾಯ ಹೇಳಿದ್ದರು. ಭಾರತ ತಂಡ ಬಾಂಗ್ಲಾದೇಶ, ಹಾಂಗ್ ಕಾಂಗ್ ಹಾಗೂ ಸಿಂಗಪೂರ ತಂಡಗಳ ಜೊತೆ ಸೇರ್ಪಡೆ ಮಾಡಲಾಗಿದ್ದು, ಈ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಏಶ್ಯ ಕಪ್ ಗೆ ಅರ್ಹತೆ ಗಿಟ್ಟಿಸಲಿದೆ.

ಮಾರ್ಚ್ 19ರಂದು ಮಾಲ್ಡೀವ್ಸ್ ವಿರುದ್ಧ ನಡೆಯಲಿರುವ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಹಾಗೂ ಮಾರ್ಚ್ 25ರಂದು ಶಿಲ್ಲಾಂಗ್ ನಲ್ಲಿ ಏಶ್ಯ ಕಪ್ ಅರ್ಹತಾ ಸುತ್ತಿನ 'ಸಿ' ಗುಂಪಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ಭಾರತೀಯ ಫುಟ್ ಬಾಲ್ ತಂಡದ ಸಂಭವನೀಯ 26 ಆಟಗಾರರ ಪಟ್ಟಿಯಲ್ಲಿ ಸುನೀಲ್ ಚೆಟ್ರಿ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ.

ಕ್ರಿಸ್ಟಿಯಾನೋ ರೊನಾಲ್ಡೊ(135) ಮತ್ತು ಲಿಯೊನೆಲ್‌ ಮೆಸ್ಸಿಯ(112) ಬಳಿಕ ಸಕ್ರೀಯ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳಿಸಿದರ ಪಟ್ಟಿಯಲ್ಲಿ ಛೇಟ್ರಿ(94) ನಾಲ್ಕನೇ ಸ್ಥಾನದಲ್ಲಿದ್ದಾರೆ.



ಶರತ್‌ ಕಮಾಲ್‌ ನಿವೃತ್ತಿ

ಚೆನ್ನೈ: ವೃತ್ತಿಪರ ಟೇಬಲ್‌ ಟೆನಿಸ್‌ನಿಂದ ಭಾರತದ ದಿಗ್ಗಜ ಆಟಗಾರ ಶರತ್‌ ಕಮಾಲ್‌ ನಿವೃತ್ತಿ ಪ್ರಕಟಿಸಿದ್ದಾರೆ. ಮಾ.25ರಿಂದ 30ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ಡಬ್ಲ್ಯುಟಿಟಿ ಕಂಟೆಂಡರ್‌ನಲ್ಲಿ ಕೊನೆ ಬಾರಿ ಭಾರತ ಪರ ಕಣಕ್ಕಿಳಿಯುವುದಾಗಿ ಶರತ್‌ ತಿಳಿಸಿದ್ದಾರೆ.

‘ನಾನು ಮೊದಲ ಪಂದ್ಯ ಆಡಿದ್ದು ಚೆನ್ನೈನಲ್ಲಿ. ವೃತ್ತಿಪರ ಆಟಗಾರನಾಗಿ ಕೊನೆ ಪಂದ್ಯ ಕೂಡಾ ಚೆನ್ನೈನಲ್ಲೇ ಆಡುತ್ತೇನೆ’ ಎಂದು ಶರತ್‌ ಹೇಳಿದ್ದಾರೆ. ಕಳೆದೆರಡು ದಶಕಗಳಿಂದಲೂ ಟೇಬಲ್‌ ಟೆನಿಸ್ ಆಡುತ್ತಿರುವ 42 ವರ್ಷದ ಶರತ್‌, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 7 ಚಿನ್ನ ಸೇರಿ 13 ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ 2 ಹಾಗೂ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 4 ಮೆಡಲ್‌ ಗೆದ್ದಿದ್ದಾರೆ.