ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs SRH: ಸನ್‌ರೈಸರ್ಸ್‌ ವಿರುದ್ದ ಸೋತು ಮೂರನೇ ಸ್ಥಾನಕ್ಕೆ ಕುಸಿದ ರಾಯಲ್‌ ಚಾಲೆಂಜರ್ಸ್‌!

RCB vs SRH Match Highlights: ಲಖನೌದ ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 65ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 42 ರನ್‌ಗಳ ಸೋಲು ಅನುಭವಿಸಿತು.

ಎಸ್‌ಆರ್‌ಎಚ್‌ ವಿರುದ್ದ ಸೋತು ಮೂರನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೋಲು.

Profile Ramesh Kote May 23, 2025 11:40 PM

ಲಖನೌ: ಇಶಾನ್‌ ಕಿಶನ್‌ (94*) ಅವರ ಸ್ಪೋಟಕ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 65ನೇ ಪಂದ್ಯದಲ್ಲಿ (RCB vs SRH) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ 42 ರನ್‌ಗಳ ಗೆಲುವು ಪಡೆಯಿತು. ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಎಸ್‌ಆರ್‌ಎಚ್‌ಗೆ ಐದನೇ ಗೆಲುವು ಇದಾಗಿದೆ. ಇನ್ನು ಈಗಾಗಲೇ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿರುವ ಆರ್‌ಸಿಬಿ ತಂಡ, ಎಸ್‌ಆರ್‌ಎಚ್‌ ಎದುರು ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಕನಸು ಭಗ್ನವಾಯಿತು. ಇದೀಗ ಸೋಲಿನಿಂದ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಸ್ಪೋಟಕ ಬ್ಯಾಟ್‌ ಮಾಡಿ ಎಸ್‌ಆರ್‌ಎಚ್‌ ಗೆಲುವಿಗೆ ನೆರವು ನೀಡಿದ್ದ ಇಶಾನ್‌ ಕಿಶನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಹೈದರಾಬಾದ್‌ ನೀಡಿದ್ದ 232 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿಯ ಸ್ಪೋಟಕ ಬ್ಯಾಟಿಂಗ್‌ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸೋಲು ಅನುಭವಿಸಿತು. ಪ್ಯಾಟ್‌ ಕಮಿನ್ಸ್‌ ಹಾಗೂ ಇಶಾನ್‌ ಮಾಲಿಂಗ್‌ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿದ ಆರ್‌ಸಿಬಿ 19.5 ಓವರ್‌ಗಳಿಗೆ 189 ರನ್‌ಗಳಿಗೆ ಆಲ್‌ಔಟ್‌ ಆಯಿತು.

RCB vs SRH: ಭರ್ಜರಿ ಸಿಕ್ಸರ್‌ ಮೂಲಕ ಕಾರಿನ ಗ್ಲಾಸ್‌ ಒಡೆದ ಅಭಿಷೇಕ್‌ ಶರ್ಮಾ! ವಿಡಿಯೊ

ಫಿಲ್‌ ಸಾಲ್ಟ್‌ ಅರ್ಧಶತಕ ವ್ಯರ್ಥ

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಮೊದಲನೇ ವಿಕೆಟ್‌ಗೆ 80 ರನ್‌ ಜೊತೆಯಾಡವನ್ನು ಆಡಿ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ವಿರಾಟ್‌ ಕೊಹ್ಲಿ 24 ಎಸೆತಗಳಲ್ಲಿ 43 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮಯಾಂಕ್‌ ಅಗರ್ವಾಲ್‌ ನಿರಾಶೆ ಮೂಡಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಫಿಲ್‌ ಸಾಲ್ಟ್‌, 32 ಎಸೆತಗಳಲ್ಲಿ 62 ರನ್‌ ಗಳಿಸಿ ಆರ್‌ಸಿಬಿಗೆ ಭದ್ರ ಅಡಿಪಾಯ ಹಾಕಿ ವಿಕೆಟ್‌ ಒಪ್ಪಿಸಿದರು. ರಜತ್‌ ಪಾಟಿದಾರ್‌ (18) ಹಾಗೂ ಜಿತೇಶ್‌ ಶರ್ಮಾ (24) ಅವರ ಅಲ್ಪ ಜೊತೆಯಾಟದ ಮೂಲಕ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು.



16ನೇ ಓವರ್‌ವರೆಗೂ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ರಜತ್‌ ಪಾಟಿದಾರ್‌ ರನ್‌ಔಟ್‌ ಆದರು. ಇದು ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಯಿತು. ನಂತರ ಬಂದ ರೊಮ್ಯಾರಿಯೊ ಶೆಫರ್ಡ್‌ ಗೋಲ್ಡನ್‌ ಡಕ್‌ಔಟ್‌ ಆದರು. ಜಿತೇಶ್‌ ಶರ್ಮಾ ಕೂಡ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಗಾಯಾಳು ಟಿಮ್‌ ಡೇವಿಡ್‌ ಆಡಿದರೂ ಪ್ರಯೋಜನವಾಗಲಿಲ್ಲ. ಕೊನೆಯ 16 ರನ್‌ಗಳ ಅಂತರದಲ್ಲಿ ಆರ್‌ಸಿಬಿ 7 ವಿಕೆಟ್‌ ಕಳೆದುಕೊಂಡು ಸೋಲು ಒಪ್ಪಿಕೊಂಡಿತು.



231 ರನ್‌ ಕಲೆ ಹಾಕಿದ್ದ ಹೈದರಾಬಾದ್‌

ಇದಕ್ಕೂ ಮುನ್ನ ಟಾಸ್‌ ಗೆದ್ದು ಎದುರಾಳಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮೊದಲ ಬ್ಯಾಟಿಂಗ್‌ ಆಹ್ವಾನ ನೀಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಂಗಾಮಿ ನಾಯಕ ಜಿತೇಶ್‌ ಶರ್ಮಾ ಅವರ ಯೋಜನೆ ಸಂಪೂರ್ಣ ಉಲ್ಟಾ ಆಯಿತು. ಇಶಾನ್‌ ಕಿಶನ್‌ (94* ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 232 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

IPL 2025: ಆರ್‌ಸಿಬಿ ಎದುರು ಅಜೇಯ 94 ರನ್‌ ಸಿಡಿಸಿ ಫಾರ್ಮ್‌ಗೆ ಮರಳಿದ ಇಶಾನ್‌ ಕಿಶನ್‌!

ಭರ್ಜರಿ ಆರಂಭ ಪಡೆದಿದ್ದ ಎಸ್‌ಆರ್‌ಎಚ್‌

ಎಸ್‌ಆರ್‌ಆರ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಟಿಮ್‌ ಡೇವಿಡ್‌ ಹಾಗೂ ಅಭಿಷೇಕ್‌ ಶರ್ಮಾ ಜೋಡಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಸನ ತೋರಿತು. ಅಭಿಷೇಕ್‌ ಶರ್ಮಾ ಕೇವಲ 17 ಎಸೆತಗಳಲ್ಲಿ 34 ರನ್‌ ಗಳಿಸಿದ್ದರು. ಆ ಮೂಲಕ ತಂಡಕ್ಕೆ ಸ್ಪೋಟಕ ಆರಂಭ ನೀಡಿದ್ದರು. ಆದರೆ, ಲುಂಗಿ ಇನ್ಗಿಡಿ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಅವರು ಮೊದಲನೇ ವಿಕೆಟ್‌ಗೆ ಟಿಮ್‌ ಡೇವಿಡ್‌ ಜೊತೆ 54 ರನ್‌ ಆಡಿದ್ದರು. ಇವರ ಬೆನ್ನಲ್ಲೆ 10 ಎಸೆತಗಳಲ್ಲಿ 17 ರನ್‌ ಗಳಿಸಿದ್ದ ಟಿಮ್‌ ಡೇವಿಡ್‌ ಕೂಡ ಔಟ್‌ ಆದರು. ಆ ಮೂಲಕ ಎಸ್‌ಆರ್‌ಎಚ್‌ 4.2 ಎಸೆತಗಳಲ್ಲಿ 54 ರನ್‌ ಗಳಿಸಿತ್ತು.



ಇಶಾನ್‌ ಕಿಶನ್‌ ಅಬ್ಬರದ ಬ್ಯಾಟಿಂಗ್‌

ಪವರ್‌ಪ್ಲೇನಲ್ಲಿ ಓಪನರ್ಸ್‌ ಅನ್ನು ಔಟ್‌ ಮಾಡಿದ ಬಳಿಕ ಆರ್‌ಸಿಬಿ ಬೌಲರ್‌ಗಳು, ಹೆನ್ರಿಚ್‌ ಕ್ಲಾಸೆನ್‌ (24), ಅನಿಕೇತ್‌ ವರ್ಮಾ (26) ಹಾಗೂ ನಿತೀಶ್‌ ರೆಡ್ಡಿ (4) ಅವರನ್ನು ಬೇಗ ಔಟ್‌ ಮಾಡಿದರು.ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಇಶಾನ್‌ ಕಿಶನ್‌ ಅವರನ್ನು ಔಟ್‌ ಮಾಡುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾದರು. ಕೊನೆಯವರೆಗೂ ಸ್ಪೋಟಕ ಬ್ಯಾಟ್‌ ಮಾಡಿದ ಇಶಾನ್‌ ಕಿಶನ್‌, 48 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 7 ಬೌಂಡರಿಗಳ ಮೂಲಕ ಅಜೇಯ 94 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಹೈದರಾಬಾದ್‌ ತಂಡದ ಮೊತ್ತವನ್ನು 230ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.