ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs SRH: ಭರ್ಜರಿ ಸಿಕ್ಸರ್‌ ಮೂಲಕ ಕಾರಿನ ಗ್ಲಾಸ್‌ ಒಡೆದ ಅಭಿಷೇಕ್‌ ಶರ್ಮಾ! ವಿಡಿಯೊ

ಲಖನೌದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು 17 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 34 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಅವರು ಸಿಕ್ಸರ್ ಹೊಡೆದು ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದರು.

ಭರ್ಜರಿ ಸಿಕ್ಸರ್‌ ಮೂಲಕ ಕಾರಿನ ಗ್ಲಾಸ್‌ ಒಡೆದ ಅಭಿಷೇಕ್‌ ಶರ್ಮಾ!

ಟಾಟಾ ಕಾರಿನ ಗಾಜು ಒಡೆದ ಅಭಿಷೇಕ್‌ ಶರ್ಮಾ.

Profile Ramesh Kote May 23, 2025 9:31 PM

ಲಖನೌ: ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 ಟೂರ್ನಿಯಲ್ಲಿ ವಿಭಿನ್ನವಾಗಿ ಕಾಣಿಸುತ್ತಾರೆ. ಅವರು ಪಂದ್ಯದ ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡುತ್ತಾರೆ. ಅವರು ಕ್ರೀಸ್‌ಗೆ ಬಂದ ತಕ್ಷಣ ಬೌಲರ್‌ಗಳಿಗೆ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಾರೆ. 2025ರ ಐಪಿಎಲ್ ಟೂರ್ನಿಯಲ್ಲಿಯೂ ಅವರು ಅದೇ ಆಟವನ್ನು ಮುಂದುವರಿಸಿದ್ದಾರೆ. ಶುಕ್ರವಾರ ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿಯೂ ಅವರು ಅದೇ ಆಟವನ್ನು ತೋರಿದರು.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಎಂದಿನಂತೆ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ, ಪವರ್‌ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 17 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 34 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ನಾಲ್ಕನೇ ಓವರ್‌ನಲ್ಲಿ ಲುಂಗಿ ಎನ್ಗಿಡಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಫಿಲ್‌ ಸಾಲ್ಟ್‌ಗೆ ಕ್ಯಾಚ್‌ ಕೊಟ್ಟರು.

RCB vs SRH: ರಜತ್‌ ಪಾಟಿದಾರ್‌ ಬದಲು ಆರ್‌ಸಿಬಿಯನ್ನು ಜಿತೇಶ್‌ ಶರ್ಮಾ ಮುನ್ನಡೆಸುತ್ತಿರುವುದು ಏಕೆ?

ಕಾರಿನ ಗಾಜು ಒಡೆದ ಅಭಿಷೇಕ್‌ ಶರ್ಮಾ

ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ವೇಳೆ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ ಟಾಟಾ ಕಾರಿನ ಗಾಜನ್ನು ಒಡೆದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಆರ್‌ಸಿಬಿ ತಂಡದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್‌ನಲ್ಲಿ ಈ ಘಟನೆ ನಡೆಯಿತು. ಎರಡನೇ ಓವರ್‌ನ 5ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಮಿಡ್‌ವಿಕೆಟ್ ಕಡೆಗೆ ದೊಡ್ಡ ಸಿಕ್ಸರ್ ಬಾರಿಸಿದರು. ಅವರ ಶಾಟ್‌ಗೆ ಚೆಂಡು ಗಾಳಿಯಲ್ಲಿ ಸಾಕಷ್ಟು ಎತ್ತರಕ್ಕೆ ಹಾರಿತ್ತು. ನಂತರ ಚೆಂಡು ನೇರವಾಗಿ ಲೀಗ್‌ನ ಪ್ರಾಯೋಜಕರಾದ ಟಾಟಾ ಕಾರಿಗೆ ಬಡಿಯಿತು. ಇದರಿಂದಾಗಿ ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ.



5 ಲಕ್ಷ ರೂ ದೇಣಿಗೆ ನೀಡಲಿರುವ ಟಾಟಾ

2025ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಹೊಡೆದ ಚೆಂಡು ಕಾರಿನ ಮೇಲೆ ನೇರವಾಗಿ ತಗುಲಿದರೆ ಹಣವನ್ನು ದೇಣಿಗೆ ನೀಡುವುದಾಗಿ ಟಾಟಾ ಘೋಷಿಸಿತ್ತು. ಒಂದು ವೇಳೆ ಚೆಂಡು ಕಾರಿಗೆ ತಗುಲಿದರೆ, ಟಾಟಾ ಸಂಸ್ಥೆಯು 5 ಲಕ್ಷ ರೂ ಗಳನ್ನು ದೇಣಿಗೆ ನೀಡುತ್ತದೆ. ಈ ಮೊತ್ತವನ್ನು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗಾಗಿ ಟಾಟಾ ಕಾರ್ ದೇಣಿಗೆ ನೀಡಲಿದೆ. ಅಭಿಷೇಕ್ ಶರ್ಮಾ ಅವರಿಗಿಂತ ಮೊದಲು ಅದೇ ಮೈದಾನದಲ್ಲಿ ಲಖನೌ ಸೂಪರ್ ಜಯಂಟ್ಸ್‌ನ ಮಿಚೆಲ್ ಮಾರ್ಷ್ ಸಿಕ್ಸರ್‌ ಮೂಲಕ ಕಾರಿನ ಗಾಜನ್ನು ಒಡೆದಿದ್ದರು.

RCB vs SRH: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಪ್ಲೇಆಫ್ಸ್‌ನಿಂದ ಎಸ್‌ಆರ್‌ಎಚ್‌ ಔಟ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದದ ಪಂದ್ಯದ ಫಲಿತಾಂಶವು ಸನ್‌ರೈಸರ್ಸ್ ಹೈದರಾಬಾದ್ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಪ್ಯಾಟ್ ಕಮಿನ್ಸ್ ತಂಡ ಈಗಾಗಲೇ ಪ್ಲೇಆಫ್ಸ್‌ ರೇಸ್ ನಿಂದ ಹೊರಬಿದ್ದಿದೆ. ಮತ್ತೊಂದೆಡೆ, ಆರ್‌ಸಿಬಿ ಪ್ಲೇಆಫ್ಸ್‌ಗೆ ತಲುಪಿದೆ. ಇದರ ಹೊರತಾಗಿಯೂ ಈ ಪಂದ್ಯವನ್ನು ಗೆಲ್ಲಲು ಬಯಸುತ್ತಿದೆ. ಐಪಿಎಲ್ ಅಂಕ ಪಟ್ಟಿಯಲ್ಲಿ ಅಗ್ರ-2 ಸ್ಥಾನದಲ್ಲಿರುವ ತಂಡಕ್ಕೆ ಫೈನಲ್ ತಲುಪಲು ಎರಡು ಅವಕಾಶಗಳು ಸಿಗುತ್ತವೆ. ಈ ಪಂದ್ಯ ಗೆದ್ದರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.