Tahir Hussain: ಡೆಲ್ಲಿ ಗಲಭೆ ಕೇಸ್- ಆಪ್‌ನ ತಾಹಿರ್ ಹುಸೇನ್‌ಗೆ ಕಸ್ಟಡಿ ಪೆರೋಲ್ ನೀಡಿದ ಸುಪ್ರೀಂ ಕೋರ್ಟ್
ಕಳೆದ ವರ್ಷ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಹುಸೇನ್ ಅವರಿಗೆ ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಕಸ್ಟಡಿ ಪೆರೋಲ್ ನೀಡಿದೆ. ಹುಸೇನ್‌ಗೆ ಸುಪ್ರೀಂ ಕೋರ್ಟ್‌ಷರತ್ತು ಬದ್ಧ ಕಸ್ಟಡಿ ಪೆರೋಲ್ ನೀಡಿದ್ದು, ಅವರ ಜೊತೆ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಬೆಂಗಾವಲು ವಾಹನವನ್ನು ನಿಯೋಜನೆ ಮಾಡಲಾಗಿದೆ. ಅದರ ವೆಚ್ಚ ಅಂದರೆ ದಿನಕ್ಕೆ 2 ಲಕ್ಷ ರೂ ಅನ್ನು ತಾಹಿರ್ ಹುಸೇನ್‌ಗೆ ಭರಿಸುವಂತೆ ಸೂಚನೆ ನೀಡಿದೆ.

Tahir Hussain

ನವದೆಹಲಿ: ಕಳೆದ ವರ್ಷದ ಫೆಬ್ರವರಿಯಲ್ಲಿ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರ ಪ್ರಕರಣ(Delhi Roit) ಸಂಬಂಧ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷ (AAP)ದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್(Tahir Hussain) ಅವರಿಗೆ ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್(Supreme Court) ಮಂಗಳವಾರ ಕಸ್ಟಡಿ ಪೆರೋಲ್ ನೀಡಿದೆ. ಜನವರಿ 29 ರಿಂದ ಫೆಬ್ರವರಿ 3 ರವರೆಗೆ ಚುನಾವಣಾ ಪ್ರಚಾರಕ್ಕಾಗಿ ಜೈಲಿನಿಂದ ಹೊರಬರಲು ಕೋರ್ಟ್ ಅನುಮತಿ ಸೂಚಿಸಿದೆ.
ಕಸ್ಟಡಿ ಪೆರೋಲ್‌ಗಾಗಿ ನ್ಯಾಯಾಲಯವು ಹುಸೇನ್‌ಗೆ ಷರತ್ತುಗಳನ್ನು ವಿಧಿಸಿದೆ. ಅವರ ಜೊತೆ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಬೆಂಗಾವಲು ವಾಹನವನ್ನು ನಿಯೋಜನೆ ಮಾಡಲಾಗಿದ್ದು, ಅದರ ವೆಚ್ಚ ಅಂದರೆ ದಿನಕ್ಕೆ 2 ಲಕ್ಷ ರೂ ಅನ್ನು ತಾಹಿರ್ ಹುಸೇನ್‌ಗೆ ಭರಿಸುವಂತೆ ಸೂಚಿಸಲಾಗಿದೆ. ಹುಸೇನ್‌ಗೆ ಪಕ್ಷದ ಕಚೇರಿ ಹಾಗೂ ಕ್ಷೇತ್ರದ ಮತದಾರರೊಂದಿಗೆ ಸಭೆ ನಡೆಸಲು ಅನುಮತಿ ನೀಡಲಾಗಿದ್ದರೂ, ಕರವಾಲ್ ನಗರದಲ್ಲಿರುವ ಅವರ ಮನೆಗೆ ಭೇಟಿ ನ್ಯಾಯಾಲಯ ಅವಕಾಶವನ್ನು ಕಲ್ಪಿಸಿಲ್ಲ.
ಈ ಸುದ್ದಿಯನ್ನೂ ಓದಿ : Arvind Kejriwal : ದೆಹಲಿ ಚುನಾವಣೆ ಪ್ರಚಾರ; ಬೀದಿ ಬದಿಯಲ್ಲಿ ವೆಜಿಟೇಬಲ್ ಮೊಮೊ ಸೇವಿಸಿದ ಕೇಜ್ರಿವಾಲ್
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಅನುಮತಿ ಕೋರಿ ತಾಹಿರ್ ಹುಸೇನ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಹುಸೇನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ಮನವಿ ಸಲ್ಲಿಸಿದ್ದರು. ಪ್ರಚಾರಕ್ಕೆ ಕೇವಲ ನಾಲ್ಕೈದು ದಿನಗಳು ಮಾತ್ರ ಉಳಿದಿವೆ, ಆದ್ದರಿಂದ ಹುಸೇನ್ ಅವರಿಗೆ ಹೊರಗೆ ತೆರಳಿ ಪ್ರಚಾರ ಮಾಡಲು ಅವಕಾಶ ಕೊಡಬೇಕೆಂದು ಕೋರಿದ್ದರು. ಇದೀಗ ಸುಪ್ರೀಂ ಕೋರ್ಟ್ ಅನುಮತಿಯನ್ನು ನೀಡಿದೆ.
ಏನಿದು ಪ್ರಕರಣ?
2020 ರ ಫೆಬ್ರವರಿ 24, ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಷಯವಾಗಿ ಪರ ಮತ್ತು ವಿರೋಧಿ ಗುಂಪುಗಳ ನಡುವೆ ಈಶಾನ್ಯ ದೆಹಲಿಯಲ್ಲಿ ಭಾರೀ ಗಲಭೆ ಏರ್ಪಟ್ಟಿತ್ತು. ಹಿಂಸಾಚಾರದಲ್ಲಿ 53 ಜನ ಮೃತಪಟ್ಟಿದ್ದರು. ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮಾರ ಕೊಲೆ ಆರೋಪದಡಿ ಆಮ್ ಆದ್ಮಿ ಮುಖಂಡ ತಾಹೀರ್ ಹುಸೇನ್ರನ್ನು ಅರೆಸ್ಟ್ ಮಾಡಲಾಗಿತ್ತು. ಪಕ್ಷದಿಂದ ಕೂಡ ಅಮಾನತು ಮಾಡಲಾಗಿತ್ತು. ನಂತರ ಹುಸೇನ್ ದೆಹಲಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ದೆಹಲಿ ನ್ಯಾಯಾಲಯ ವಜಾ ಮಾಡಿತ್ತು. ಬಳಿಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಜಾಮೀನನ್ನು ನಿರಾಕರಿಸಿತ್ತು.