ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಸೀಮೆ ಮೀರದಿರಲಿ ಸೀಮಾಸುಂಕ ಸಮರ

“ಕಡಿಮೆ ಆಮದು ಸುಂಕ ವಿಧಿಸಿ ಇತರ ದೇಶಗಳಿಗೆ ಲಾಭ ಮಾಡಿಕೊಡುವ ಬದಲು, ಹೆಚ್ಚಿನ ಸುಂಕ ವಿಧಿಸಿ ತನ್ನ ತೆರಿಗೆದಾರರಿಗೆ ಲಾಭ ಸಿಗುವಂತೆ ಮಾಡುತ್ತೇನೆ" ಎಂದು ನೇರವಾಗಿ ಹೇಳಿದ್ದಾರೆ ಟ್ರಂಪ್. ನಾಯಕನೊಬ್ಬ ತನ್ನ ದೇಶದ ಒಳಿತಿಗಾಗಿ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ಅಥವಾ ದೇಶ ಪ್ರೇಮ ದ ಪ್ರತೀಕವಿದು ಎಂದುಕೊಂಡರೆ ಅದು ಪೂರ್ತಿ ಸುಳ್ಳಲ್ಲ. ಆದರೆ ಟ್ರಂಪ್‌ರ ಈ ನೀತಿಯು, ದೇಶಗಳ ನಡುವಿನ ‘ಸೀಮಾಸುಂಕ ಸಮರ’ (Tariff war) ಅಥವಾ ‘ವ್ಯಾಪಾರಿ ಸಮರ’ಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ಕಾಡುತ್ತಿದೆ.

ಸೀಮೆ ಮೀರದಿರಲಿ ಸೀಮಾಸುಂಕ ಸಮರ

ಅಂಕಣಕಾರ ತಿಮ್ಮಣ್ಣ ಭಾಗ್ವತ್

Profile Ashok Nayak Apr 4, 2025 6:34 AM

ಕಟ್ಟೆ ಪಂಚಾಯ್ತಿ

ತಿಮ್ಮಣ್ಣ ಭಾಗ್ವತ್

If war is what the US wants, be it a tariff war, a trade war or any other type of war, we're ready to fight till the end''-ಇದು ಅಮೆರಿಕದ ‘ಸುಂಕ ಸಮರ’ದ ಬೆದರಿಕೆಗೆ ಜಗ್ಗದ ಚೀನಾದ ಪ್ರತ್ಯುತ್ತರ. ‘ಅಮೆರಿಕ ಫಸ್ಟ್’ ಎಂಬ ತಮ್ಮ ಚುನಾವಣಾ ಪ್ರಚಾರದ ಘೋಷವಾಕ್ಯಕ್ಕೆ ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ದಿನದಿಂದಲೇ ಚಾಲನೆ ನೀಡುವ ಅತ್ಯುತ್ಸಾಹ ತೋರಿಸಿದ ಟ್ರಂಪ್, ಅನೇಕ ಆಡಳಿತಾತ್ಮಕ ಆದೇಶಗಳಿಗೆ ಮುದ್ರೆಯೊತ್ತಿದರು. ಈಗ ‘ಪರಸ್ಪರ ಸುಂಕ’ ( reciprocal tarif)ಎಂಬ ಸಮರ್ಥನೆಯೊಂದಿಗೆ ವಿವಿಧ ದೇಶಗಳ ಸರಕುಗಳಿಗೆ ಹೆಚ್ಚಿನ ಆಮದು ಸುಂಕವನ್ನು ಜಾರಿಗೊಳಿಸಲು ಅವರು ಮುಂದಾಗಿದ್ದಾರೆ.

“ಕಡಿಮೆ ಆಮದು ಸುಂಕ ವಿಧಿಸಿ ಇತರ ದೇಶಗಳಿಗೆ ಲಾಭ ಮಾಡಿಕೊಡುವ ಬದಲು, ಹೆಚ್ಚಿನ ಸುಂಕ ವಿಧಿಸಿ ತನ್ನ ತೆರಿಗೆದಾರರಿಗೆ ಲಾಭ ಸಿಗುವಂತೆ ಮಾಡುತ್ತೇನೆ" ಎಂದು ನೇರವಾಗಿ ಹೇಳಿದ್ದಾರೆ ಟ್ರಂಪ್. ನಾಯಕನೊಬ್ಬ ತನ್ನ ದೇಶದ ಒಳಿತಿಗಾಗಿ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ಅಥವಾ ದೇಶ ಪ್ರೇಮದ ಪ್ರತೀಕವಿದು ಎಂದುಕೊಂಡರೆ ಅದು ಪೂರ್ತಿ ಸುಳ್ಳಲ್ಲ. ಆದರೆ ಟ್ರಂಪ್‌ರ ಈ ನೀತಿಯು, ದೇಶಗಳ ನಡುವಿನ ‘ಸೀಮಾಸುಂಕ ಸಮರ’ (Tariff war) ಅಥವಾ ‘ವ್ಯಾಪಾರಿ ಸಮರ’ಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ಕಾಡುತ್ತಿದೆ.

ಏನಿದು ಸೀಮಾಸುಂಕ ಸಮರ?

ಯಾವುದೇ ದೇಶ ತನ್ನ ಆಮದಿನ ಮೇಲೆ (ಕೆಲವು ಸಲ ರಫ್ತಿನ ಮೇಲೆ ಕೂಡ) ವಿಧಿಸುವ ಸುಂಕವನ್ನು ‘ಸೀಮಾಸುಂಕ’ ( Customs Duty) ಎನ್ನಲಾಗುತ್ತದೆ. ಇದು ಎರಡು ದೇಶಗಳ ನಡುವಿನ ಆರ್ಥಿಕ ಸಂಘರ್ಷ. ಜನಾಂಗೀಯ, ಭೌಗೋಳಿಕ ಅಥವಾ ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ, ತನಗೆ ‘ಕಂಡ ರಾಗದ’ ದೇಶದ ಸರಕುಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಮೂಲಕ ಆ ದೇಶಕ್ಕೆ ಹಾನಿ ಉಂಟುಮಾಡಲಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಆ ದೇಶ ಕೂಡ ಸುಂಕದ ದರವನ್ನು ಹೆಚ್ಚಿಸು ತ್ತದೆ. ಬಲಾಢ್ಯ ದೇಶವೊಂದು ತನ್ನ ಹಿತಾಸಕ್ತಿಗೋಸ್ಕರ ಅಥವಾ ನಿಲುವು/ ವರ್ತನೆ ಯನ್ನು ಬದಲಿಸಿಕೊಳ್ಳುವಂತೆ ಮತ್ತೊಂದು ದೇಶದ ಮೇಲೆ ಒತ್ತಡ ಹೇರುವ ಸಲುವಾಗಿ ಇಂಥ ಕ್ರಮಕ್ಕೆ ಮುಂದಾಗ ಬಹುದು. ಹಾಗಂತ ಸುಂಕ ಹೆಚ್ಚಳದ ಎಲ್ಲಾ ನಿದರ್ಶನಗಳೂ ಸಮರವಾಗ ಬೇಕಿಲ್ಲ; ಅದು ಆಯಾ ದೇಶದ ಆರ್ಥಿಕ ನೀತಿಯ ಸಾಮಾನ್ಯ ಅಂಶವಾಗಿರಬಹುದು.

ಇದನ್ನೂ ಓದಿ: Thimmanna Bhagwat Column: ಏಕರೂಪದ ನಾಗರಿಕ ಸಂಹಿತೆ: ಹಿಂದೂಗಳಿಗೇನು ಪರಿಣಾಮ ?

ಅಮೆರಿಕ ಎಬ್ಬಿಸಿದ ಗದ್ದಲವೇನು?

ಆಮದು ಗಳ ಮೇಲೆ ಅಮೆರಿಕ ವಿಧಿಸುವ ಸೀಮಾಸುಂಕದ ದರವು, ಇತರ ಅನೇಕ ದೇಶಗಳ ದರಕ್ಕೆ ಹೋಲಿಸಿ ದರೆ ಅತಿಕಡಿಮೆ. ಈ ಪರಿಸ್ಥಿತಿಯ ಲಾಭ ಪಡೆದು ಕೆನಡಾ, ಮೆಕ್ಸಿಕೋ, ಚೀನಾದಂಥ ಅನೇಕ ರಾಷ್ಟ್ರ ಗಳು ತಮ್ಮ ದೇಶದ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುವ ಮೂಲಕ ತಮ್ಮ ವ್ಯಾಪಾರಿ ಲಾಭವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ.

ಇದಕ್ಕಿಂತ ಹೆಚ್ಚಾಗಿ ಅಂಥ ದೇಶಗಳು ಅಮೆರಿಕದ ಸರಕುಗಳಿಗೆ ಹೆಚ್ಚಿನ ಆಮದು ಸುಂಕ ವಿಧಿಸುತ್ತವೆ ಎನ್ನಲಾಗಿದೆ. ‘ಅಮೆರಿಕದ ತೆರಿಗೆದಾರರ ಹಣದಲ್ಲಿ ಇತರ ದೇಶಗಳು ಲಾಭ ಮಾಡಿಕೊಳ್ಳುತ್ತಿವೆ’ ಎಂಬುದು ‘ಪಕ್ಕಾ ಮಾರವಾಡಿ’ ಟ್ರಂಪ್ ರವರ ಅಭಿಪ್ರಾಯ!

2024ರ ಚುನಾವಣಾ ಪ್ರಚಾರದಲ್ಲಿ, ‘ಅಕ್ರಮ ವಲಸೆ’ ಮತ್ತು ‘ಪರಸ್ಪರ ತೆರಿಗೆ’ ( Reciprocal Tarrif) ಡೊನಾಲ್ಡ್ ಟ್ರಂಪ್‌ರ ಮುಖ್ಯ ವಿಷಯಗಳಾಗಿದ್ದವು. ಮುಖ್ಯವಾಗಿ ಮೆಕ್ಸಿಕೋ ಮತ್ತು ಕೆನಡಾ ದೇಶಗಳಿಂದ ಅಮೆರಿಕಕ್ಕೆ ಅಕ್ರಮ ವಲಸೆ, ‘ಫೆಂಟಾನಿಲ್’ನಂಥ ಡ್ರಗ್‌ಗಳ ಅಕ್ರಮ ಸಾಗಣೆ ಮತ್ತು ಆ ದೇಶಗಳು ಇಂಥ ಅಕ್ರಮಗಳನ್ನು ನಿಯಂತ್ರಿಸುವ ಬದಲು ಸಕ್ರಿಯ ಪ್ರೋತ್ಸಾಹ ನೀಡುತ್ತಿವೆ ಎಂಬ ವರದಿ ಇವೆಲ್ಲವೂ ಟ್ರಂಪ್‌ರ ಕೆಂಗಣ್ಣಿಗೆ ಕಾರಣವಾಗಿದ್ದವು.

ಈ ಹಿಂದಿನ ‘ಉತ್ತರ ಅಟ್ಲಾಂಟಿಕ್ ಮುಕ್ತ ವ್ಯಾಪಾರ ಒಪ್ಪಂದ’ದ (NAFTA) ಬದಲಿಗೆ 2020ರಲ್ಲಿ ಸಹಿ ಹಾಕಿದ ‘ಅಮೆರಿಕ-ಮೆಕ್ಸಿಕೋ-ಕೆನಡಾ ಒಪ್ಪಂದ’ದ (USMCA) ಅಡಿಯಲ್ಲಿ ಅಮೆರಿಕಕ್ಕೆ ಕೆನಡಾ ಮತ್ತು ಮೆಕ್ಸಿಕೋದಿಂದ ಅಗಾಧ ಪ್ರಮಾಣದ ಸರಕು ರಫ್ತಾಗುತ್ತಿದೆ. ತಮ್ಮ ರಫ್ತುಗಳ ಮೇಲೆ ಹೆಚ್ಚು ವರಿ ಸುಂಕ ವಿಧಿಸುವ ನಿರ್ಧಾರಕ್ಕೆ ಪ್ರತೀಕಾರದ ಕ್ರಮವಾಗಿ ಈ ಎರಡೂ ರಾಷ್ಟ್ರಗಳು ಹೆಚ್ಚುವರಿ ಸುಂಕವನ್ನು ಪ್ರಕಟಿಸಿವೆ.

ಖಿಖIಇಅಯನ್ನು ಮುಂದುವರಿಸುವ ಸಾಧ್ಯತೆ ಕಂಡುಬರುತ್ತಿದೆಯಾದರೂ, ಈ ಕುರಿತು ಟ್ರಂಪ್ ಆಡಳಿತ ಕಠಿಣ ನಿಲುವು ತಳೆದಿದೆ. ಕೆನಡಾ ವಿಷಯದಲ್ಲಂತೂ ಟ್ರಂಪ್ ಕೊಂಚ ಭಿನ್ನ ನಿಲುವು ತಳೆದಿದ್ದಾರೆ, ಅದು ಅಮೆರಿಕದ 51ನೇ ರಾಜ್ಯವಾಗಬೇಕೆಂದು ಅವರು ಆರಂಭದಿಂದಲೂ ಹೇಳು ತ್ತಿದ್ದಾರೆ. ಇನ್ನು ಚೀನಾ ದೇಶದ ವಿರುದ್ಧದ ‘ಪೇಟೆಂಟ್ ಹಕ್ಕುಗಳ ಚೌರ್ಯ’ ಮತ್ತು ‘ಅಕ್ರಮ ವ್ಯಾಪಾರ ಪದ್ಧತಿ’ ಆರೋಪಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಸುಂಕ ವಿಧಿಸಲು ಟ್ರಂಪ್ ಮುಂದಾ ಗಿದ್ದಾರೆ. ಈ ನಿರ್ಧಾರವನ್ನು ವಿರೋಧಿಸಿದ ಚೀನಾ ಪ್ರತೀಕಾರದ ಕ್ರಮಗಳಿಗೆ ಮುಂದಾಗಿದ್ದು, ವ್ಯಾಪಾರ ಸಮರ ಸೇರಿದಂತೆ ಎಲ್ಲ ತೆರನಾದ ಸಂಘರ್ಷಗಳಿಗೂ ಸಿದ್ಧವೆಂಬ ಸ್ಪಷ್ಟ ಸಂದೇಶವನ್ನು ಅದು ನೀಡಿದೆ.

ಸುಂಕ ಸಮರದ ಪರಿಣಾಮವೇನು?

GATT ಬದಲಿಗೆ ಅಸ್ತಿತ್ವಕ್ಕೆ ಬಂದ WTOದ ‘ಮುಕ್ತ ವ್ಯಾಪಾರ ಒಪ್ಪಂದ’ದ ( FTA) ಷರತ್ತು ಗಳಿ ಗೊಳಪಟ್ಟು, ವಿದೇಶಿ ವ್ಯಾಪಾರಗಳ ಮೇಲೆ ಸುಂಕ ವಿಧಿಸಲು ರಾಷ್ಟ್ರಗಳು ಸ್ವತಂತ್ರವಾಗಿವೆ. ಹಾಗೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ಬಿಲಿಯನ್‌ಗಟ್ಟಲೆ ಸುಂಕದ ಆದಾಯವನ್ನು ಗಳಿಸಬಹುದು. ಆದರೆ ಇದು ಅಷ್ಟು ಸರಳ ವಿಷಯವಲ್ಲ. ಯಾವುದೇ ಸರಕಿನ ಮೇಲೆ ಆಮದು ಸುಂಕದ ಹೆಚ್ಚಳ ವಾದರೆ, ಆಮದು ಮಾಡಿಕೊಳ್ಳುವ ದೇಶದಲ್ಲಿ ಅದರ ಬೆಲೆ ಹೆಚ್ಚಾಗುತ್ತದೆ.

ಅದು ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಗಬಹುದು ಅಥವಾ ಕಚ್ಚಾವಸ್ತುಗಳ ಬೆಲೆಯೇರಿಕೆ ಆಗುವ ಮೂಲಕ ಕೈಗಾರಿಕಾ ಅಭಿವೃದ್ಧಿ ಕುಂಠಿತವಾಗಬಹುದು. ಇದು ಉದ್ಯೋಗ ಕಡಿತ ಮತ್ತು ನಿರುದ್ಯೋಗ ಸಮಸ್ಯೆಗೆ ಕಾರಣವಾಗಬಹುದು. ಕಂಪನಿಗಳು ಕಡಿಮೆ ದರದಲ್ಲಿ ಕಚ್ಚಾವಸ್ತು ಸಿಗುವ ದೇಶಕ್ಕೆ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸಬಹುದು ಅಥವಾ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬಹುದು.

1930ರ ಆರ್ಥಿಕ ಕುಸಿತದ ವೇಳೆ Smoot-Hawley Tarriff Act 1930ರ ಮೂಲಕ ತಾನು ಅಳವಡಿಸಿ ಕೊಂಡ ರಕ್ಷಣಾತ್ಮಕ ಆರ್ಥಿಕ ನೀತಿಯಿಂದಾಗಿ ಅಮೆರಿಕ ಅತಿಯಾದ ಆರ್ಥಿಕ ಹಿಂಜರಿತವನ್ನು ಅನುಭವಿಸಿತು. ನಂತರ ಅಧ್ಯಕ್ಷರಾದ ರೂಸ್‌ವೆಲ್ಟ್ ಪರಸ್ಪರ ಸುಂಕದ ಒಪ್ಪಂದ ಗಳನ್ನು ಮಾಡಿ ಕೊಂಡ ಪರಿಣಾಮ ಸೀಮಾಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಲಾಯಿತು.

2018ರ ಟ್ರಂಪ್ ಆಡಳಿತದಲ್ಲಿ ಚೀನಾದ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ಅಮೆರಿಕದ ಸೋಯಾಬೀನ್ ಆಮದನ್ನು ಚೀನಾ ನಿಲ್ಲಿಸಿತು. ಪರಿಣಾಮವಾಗಿ, ಅಗಾಧ ಪ್ರಮಾಣದ ಸೋಯಾಬೀನ್ ರಫ್ತಾಗದೇ ಉಳಿದು ಅಮೆರಿಕದ ರೈತರಿಗೆ ಉಂಟಾದ ಹಾನಿಯನ್ನು ತಡೆಯಲು ಸರಕಾರವು ಪರಿಹಾರವನ್ನು ಕೊಡಬೇಕಾಗಿ ಬಂತು.

ಮತ್ತೊಂದೆಡೆ, ಅಮೆರಿಕದ ಬದಲು ಬ್ರೆಜಿಲ್‌ನಿಂದ ಹೆಚ್ಚಿನ ದರದಲ್ಲಿ ಸೋಯಾಬೀನ್ ಖರೀದಿ ಮಾಡಬೇಕಾಗಿ ಬಂದು ಚೀನಾ ಕೂಡ ಹಾನಿ ಅನುಭವಿಸಿತು. ಹೀಗಾಗಿ, ಸುಂಕ ಸಮರ ಯಾವಾ ಗಲೂ ಪರಸ್ಪರ ವಿನಾಶಕಾರಿ. ಆದ್ದರಿಂದ ಟ್ರಂಪ್ ಎಬ್ಬಿಸಿರುವ ಗದ್ದಲ ಅತಿರೇಕಕ್ಕೆ ಹೋಗದಂತೆ ಕಾಳಜಿ ವಹಿಸುವುದು ಅಗತ್ಯ.

ಭಾರತಕ್ಕೇನು ಪರಿಣಾಮ?

ಸ್ಟೀಲ್ ಮತ್ತು ಅಲ್ಯುಮೀನಿಯಂನಂಥ ಕೆಲವು ಸರಕುಗಳ ವಿಷಯದಲ್ಲಿ ಪಾರಸ್ಪರಿಕ ಸುಂಕದಿಂದ ಭಾರತಕ್ಕೆ ಲಾಭವೆಂದೇ ಪರಿಗಣಿಸಲಾಗುತ್ತಿದೆ. ಆದರೆ ಜನರಿಕ್ ಔಷಧ ಮತ್ತು ಕೃಷಿ ಉತ್ಪನ್ನಗಳ ವಿಷಯದಲ್ಲಿ ನಿಜವಾದ ಆತಂಕವಿದೆ. ಆದರೆ ಜೆನೆರಿಕ್ ಔಷಧ ಮತ್ತು ಕೃಷಿ ಉತ್ಪನ್ನಗಳ ವಿಷಯ ದಲ್ಲಿ ನಿಜವಾದ ಆತಂಕವಿದೆ. ಭಾರತದ ರೈತರ ಮತ್ತು ಕೈಗಾರಿಕೆಗಳ ಹಿತಕಾಯಲು ಸರಕಾರ ಬದ್ಧವಾಗಿದೆ. ಬದಲಾದ ಸನ್ನಿವೇಶದಲ್ಲಿ ಅಮೆರಿಕ ಮತ್ತು ಚೀನಾದ ನಡುವೆ ಇರುವ ಪ್ರತಿಕೂಲ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದು ಭಾರತದ ರಾಜತಾಂತ್ರಿಕ ಸಾಮರ್ಥ್ಯಕ್ಕೆ ದೊಡ್ಡ ಸವಾಲು.

ಅದು ಸಾಧ್ಯವಾದರೆ ಭಾರತಕ್ಕೆ ಸುಂಕಸಮರದಿಂದ ಲಾಭವೇ ಆಗಬಹುದು. ಆದರೆ ಇದು ಬಲಾಢ್ಯ ರ ನಡುವಿನ ವ್ಯವಹಾರ. ಭಾರತ ಒಂದು ಹೆಜ್ಜೆಯಿಟ್ಟರೆ, ಚೀನಾ ಯಾವುದೇ ಗದ್ದಲವಿಲ್ಲದೆ ಕೈಗಾ ರಿಕಾ ಚದುರಂಗದಲ್ಲಿ 3 ನಡೆ ಮುಂದಿದೆ. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾದಂಥ ರಾಷ್ಟ್ರ ಗಳಂತೂ ಈಗಾಗಲೇ ಚೀನಾದ ನಿಯಂತ್ರಣದಲ್ಲಿವೆ. ಇತರ ರಾಷ್ಟ್ರಗಳು ಚೀನಾದ ತೆಕ್ಕೆಗೆ ಹೋದರೆ ಅಂತಾ ರಾಷ್ಟ್ರೀಯ ವ್ಯಾಪಾರದ ನಕ್ಷೆಯಲ್ಲಿ ಗಣನೀಯ ಬದಲಾವಣೆ ಆಗಬಹುದು.

ಕೈಗಾರಿಕಾ ಕಚ್ಚಾವಸ್ತುಗಳಂಥ ಸರಕುಗಳ ಆಮದು ವಿಷಯದಲ್ಲಿ ಚೀನಾದ ಮೇಲಿನ ಭಾರತದ ಅವಲಂಬನೆ ಅತಿಯಾಗಿದೆ. ಸುಂಕ ಸಮರದ ಹಿನ್ನೆಲೆಯಲ್ಲಿ ಉಂಟಾದ ತಲ್ಲಣದಿಂದ ಭಾರತದ ಷೇರುಪೇಟೆಯಲ್ಲಿ ಒಂದೇ ದಿನ 180 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗಿದೆ. ತಲ್ಲಣ ಇನ್ನೂ ಮುಂದುವರಿದಿದೆ.

ವಿವಿಧ ದೇಶಗಳು ಜಾರಿ ಮಾಡಿದ ಪ್ರತೀಕಾರ ಕ್ರಮಗಳು ಮತ್ತು ರಾಜತಾಂತ್ರಿಕ ನಡೆಗಳಿಂದಾಗಿ ಏಪ್ರಿಲ್ 2ರಿಂದ ಅನ್ವಯವಾದ ಪಾರಸ್ಪರಿಕ ಸುಂಕದ ವಿಷಯದಲ್ಲಿ ಅಮೆರಿಕ ಸ್ವಲ್ಪ ಮೆತ್ತಗಾಗುವ ಲಕ್ಷಣಗಳು ಕಂಡುಬರುತ್ತಿವೆ. ಬಲಾಢ್ಯರ ಜತೆಗಿನ ವ್ಯವಹಾರ ತುಂಬಾ ಸೂಕ್ಷ್ಮ ವಿಷಯ- ನಿಂತರೂ ತಪ್ಪು, ಕುಳಿತರೂ ತಪ್ಪು ಎಂಬಂತೆ.

ಉದಾಹರಣೆಗೆ, ಟ್ರಂಪ್‌ರೊಂದಿಗಿನ ಮಾತುಕತೆ ವೇಳೆ ಉದ್ವೇಗದಲ್ಲಿ ಬಾಯ್ತಪ್ಪಿ ಗೊಣಗಿದ ಒಂದು ಮಾತಿನಿಂದಾಗಿ ಉಕ್ರೇನ್ ರಾಷ್ಟ್ರಪತಿ ಹೊರಹೋಗಬೇಕಾಯಿತು. ಮಾತುಕತೆಗೆ ಬರುವಾಗ ಅವರು ಸೂಟ್ ಧರಿಸದಿದ್ದುದು ಕೂಡ ಚರ್ಚೆಗೆ ಗ್ರಾಸವಾಯಿತು. ಸುಂಕ ಹೆಚ್ಚಳದ ಪ್ರತೀಕಾರದ ವಿಷಯ ದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಬಿರುಸಿನ ಮಾತನಾಡಿದರೆ, ಮೆಕ್ಸಿಕೋದ ಅಧ್ಯಕ್ಷೆ ಕ್ಲಾಡಿಯಾ ಶಿನ್ ಬಾಮ್ ಜಾಣತನದಿಂದ ವ್ಯವಹರಿಸಿ ಟ್ರಂಪ್‌ರ ಮೆಚ್ಚುಗೆಗೆ ಪಾತ್ರರಾದರು.

ಅವರ ವಿನಯ ಮತ್ತು ಕ್ಷಿಪ್ರ ಕ್ರಮಗಳಿಂದಾಗಿ ‘ಮೊಗ್ಯಾಂಬೋ ಖುಷ್ ಹುವಾ’! ಸುಂಕದ ಹೆಚ್ಚಳ ವನ್ನು ಹೊಸ ಆರ್ಥಿಕ ವರ್ಷಕ್ಕೆ ಮುಂದೂಡಲಾಯಿತು. ಫಲಪ್ರದವಾಗಿದೆ ಎನ್ನಲಾದ ಮಾತುಕತೆ ಯ ಬಳಿಕವೂ ಟ್ರಂಪ್ ಮೋದಿಯವರನ್ನು Tough Negotiator ಎಂದಿರುವುದು ಹೊಗಳಿಕೆ ಯಾಗಿರಲಿಕ್ಕಿಲ್ಲ.

ಮೋದಿಯವರ ಭೇಟಿಯ ನಂತರ ಭಾರತದ ವಿದೇಶಾಂಗ ಮತ್ತು ವಾಣಿಜ್ಯ ಖಾತೆ ಸಚಿವರುಗಳು ಅಮೆರಿಕದ ಜತೆಗೆ ಮಾತುಕತೆ ನಡೆಸಿ ನಿರಂತರ ಸಂಪರ್ಕದಲ್ಲಿದ್ದಾರೆ. ಹೆಚ್ಚಿನ ಸುಂಕದ ಅಸಮಾ ಧಾನ ತಗ್ಗಿಸಲು ಕೆಲವು ವಸ್ತುಗಳ ಮೇಲಿನ ಸುಂಕ ಕಡಿತದ ಪ್ರಸ್ತಾಪವನ್ನು ಮುಂದಿಡಲಾಗಿದೆ.

‘ಅಮೆರಿಕ ಫಸ್ಟ್’ ಎನ್ನುವ ಟ್ರಂಪ್‌ರ ಮೇಲೆ ‘ಶ್ರೇಷ್ಠ ಭಾರತ್’ ಎನ್ನುತ್ತ ಬಂದಿರುವ ಮೋದಿಯವರ ಮೋಡಿ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ಮೋದಿಯವರ ಭೇಟಿಯ ವೇಳೆ ಅವರ ಕುರ್ಚಿಯನ್ನು ಸರಿಪಡಿಸಿದ ಟ್ರಂಪ್ ನಿಜಕ್ಕೂ ಮೋದಿಯ ಅಂದರೆ ಭಾರತದ ಮಿತ್ರರೇ? ಎಂಬುದು ಮಿಲಿಯನ್ ಅಲ್ಲ ಟ್ರಿಲಿಯನ್ ಡಾಲರ್ ಪ್ರಶ್ನೆ!

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)