ಏಕದಿನ ವಿಶ್ವಕಪ್ ಸೆಮಿ ಫೈನಲ್ ಬಳಿಕ ಟಾಸ್ ಗೆಲ್ಲದ ಭಾರತ; ಇದು ಕೂಡ ದಾಖಲೆ!
ನವೆಂಬರ್ 19, 2023 ರಂದು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ರೋಹಿತ್ ಶರ್ಮಾ ವಿರುದ್ಧ ಟಾಸ್ ಗೆದ್ದಾಗ ಭಾರತದ ಟಾಸ್ ಸೋಲಿನ ಸರಣಿ ಆರಂಭವಾಯಿತು. ಸುಮಾರು ಎರಡು ವರ್ಷಗಳ ನಂತರವೂ ಭಾರತ ಇನ್ನೂ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಟಾಸ್ ಗೆದ್ದಿಲ್ಲ.
-
Abhilash BC
Oct 25, 2025 11:08 AM
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಏಕದಿನ ಪಂದ್ಯದಲ್ಲಿ(IND vs AUS 3rd ODI) ಭಾರತ ತಂಡದ ನೂತನ ನಾಯಕ ಶುಭಮನ್ ಗಿಲ್ ಟಾಸ್ ಸೋತ ನಂತರ, ಭಾರತ ತಂಡ ಏಕದಿನ ಪಂದ್ಯಗಳಲ್ಲಿ ಸತತ ಅತಿ ಹೆಚ್ಚು ಟಾಸ್ ಸೋಲುಗಳ ಅನಗತ್ಯ ದಾಖಲೆಯನ್ನು18 ಕ್ಕೆ(India Lose 18th Toss) ಹೆಚ್ಚಿಸಿಕೊಂಡಿದೆ. ಪರ್ತ್ ಮತ್ತು ಅಡಿಲೇಡ್‌ನಲ್ಲಿ ಭಾತರ ಟಾಸ್ ಸೋತಿತ್ತು.
ಶುಭಮನ್ ಗಿಲ್‌ಗೂ ಮುನ್ನ ನಾಯಕನಾಗಿದ್ದ ರೋಹಿತ್ ಶರ್ಮ, 15 ಟಾಸ್ ಸೋಲಿನ ಸರಣಿಯನ್ನು ಹೊಂದಿದ್ದರು. ಅದು 2025 ರ ಯುಎಇಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನವರೆಗೂ ಮುಂದುವರೆದಿತ್ತು. ಇದೀಗ ಈ ಅನಗತ್ಯ ದಾಖಲೆಯನ್ನು ಗಿಲ್ ಮುಂದುವರಿಸಿದ್ದಾರೆ. ಭಾರತ ತಂಡದ ನಂತರದಲ್ಲಿ ನೆದರ್ಲ್ಯಾಂಡ್ಸ್ ಎರಡನೇ ಸ್ಥಾನದಲ್ಲಿದೆ. ಅದು ಸತತ 11 ಟಾಸ್ ಸೋಲು ಕಂಡಿದೆ.
ನವೆಂಬರ್ 19, 2023 ರಂದು ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ರೋಹಿತ್ ಶರ್ಮಾ ವಿರುದ್ಧ ಟಾಸ್ ಗೆದ್ದಾಗ ಭಾರತದ ಟಾಸ್ ಸೋಲಿನ ಸರಣಿ ಆರಂಭವಾಯಿತು. ಸುಮಾರು ಎರಡು ವರ್ಷಗಳ ನಂತರವೂ ಭಾರತ ಇನ್ನೂ ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಟಾಸ್ ಗೆದ್ದಿಲ್ಲ.
ಇದನ್ನೂ ಓದಿ Mohsin Naqvi: ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ
ಅತ್ಯಧಿಕ ಏಕದಿನ ಟಾಸ್ ಸೋತ ನಾಯಕ ಎಂಬ ಕೆಟ್ಟ ದಾಖಲೆ ಪಟ್ಟಿಯಲ್ಲಿ ರೋಹಿತ್ ಶರ್ಮ(15)ಗೆ ಅಗ್ರಸ್ಥಾನ. ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರ(12) ದ್ವಿತೀಯ ಸ್ಥಾನದಲ್ಲಿದ್ದಾರೆ. ಪೀಟರ್ ಬೊರೆನ್(11) ಮತ್ತು ಜಾಸ್ ಬಟ್ಲರ್(9) ಆ ನಂತರದ ಸ್ಥಾನದಲ್ಲಿದ್ದಾರೆ.