ಗೋವಾದಲ್ಲಿ 'ಕಬಾಲಿ' ತೆಲುಗು ಸಿನಿಮಾ ನಿರ್ಮಾಪಕ ಕೆಪಿ ಚೌಧರಿ ಆತ್ಮಹತ್ಯೆ!
ಸೂಪರ್ ಸ್ಟಾರ್ ರಜನಿ ಕಾಂತ್ ನಟನೆಯ ಕಬಾಲಿ ತೆಲುಗು ಸಿನಿಮಾಗೆ ನಿರ್ಮಾಪಕರಾಗಿ ಹೆಸರು ಮಾಡಿದ್ದ ಕೆಪಿ ಚೌಧರಿ ಅವರು ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

K P Choudhary

ನವದೆಹಲಿ: 'ಕಬಾಲಿ' ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಿರ್ಮಾಪಕ ಕೆಪಿ ಚೌಧರಿ ಅಲಿಯಾಸ್ ಕೃಷ್ಣ ಪ್ರಸಾದ್ ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆಲ ದಿನಗಳಿಂದ ಗೋವಾದಲ್ಲಿ ನೆಲೆಸಿದ್ದರು. ಇದೀಗ ಅವರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಉತ್ತರ ಗೋವಾದ ಸಿಯೋಲಿಮ್ ಗ್ರಾಮದ ಬಾಡಿಗೆ ಮನೆಯಲ್ಲಿ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತ ದೇಹ ಕಂಡು ಬಂದಿತ್ತು ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಮಾಹಿತಿ ನೀಡಿದ್ದಾರೆ.
ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಹೊರಠಾಣೆಯಿಂದ ಬಂದ ವರದಿಯ ನಂತರ ಈ ಘಟನೆ ಪತ್ತೆಯಾಗಿದೆ. "ಬಾಡಿಗೆ ಮನೆಯ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಸೂಕ್ತ ಸಮಯದಲ್ಲಿ ವಿವರಗಳನ್ನು ಹಂಚಿಕೊಳ್ಳಲಾಗುವುದು," ಎಂದು ಎಸ್‌ಪಿ ಕೌಶಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Kerala Horror: ವರದಕ್ಷಿಣೆ ಕಿರುಕುಳ-ವೈವಾಹಿಕ ದೌರ್ಜನ್ಯ; ಯುವತಿ ಆತ್ಮಹತ್ಯೆ!
ಕೆಪಿ ಚೌಧರಿ ಈ ಹಿಂದೆ ಕಾನೂನು ತೂಗುಗತ್ತಿಯನ್ನು ಎದುರಿಸಿದ್ದರು. ಅದರಲ್ಲಿಯೂ ವಿಶೇಷವಾಗಿ 2023ರಲ್ಲಿ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡದಿಂದ ಬಂಧನಕ್ಕೆ ಒಳಗಾಗಿದ್ದರು. ಅವರ ಸಾವು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಈ ಪ್ರಕರಣದ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರವನ್ನು ತೆಲುಗಿನಲ್ಲಿ ಇವರು ಬಿಡುಗಡೆ ಮಾಡಿದ್ದರು. ಇದಾದ ನಂತರ, ಪವನ್ ಕಲ್ಯಾಣ್ ನಟನೆಯ ಸರ್ದಾರ್ ಗಬ್ಬರ್ ಸಿಂಗ್, ಸೀತಮ್ಮ ವಕಿಟ್ಲೋ, ಸಿರಿಮಲ್ಲೆ ಚೆಟ್ಟು ಮತ್ತು ಇತರ ಚಲನಚಿತ್ರಗಳಿಗೆ ವಿತರಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
Telugu Film "Kabali" Producer KP Choudhary Found Hanging In Goa: Police https://t.co/SdhhQSzHez pic.twitter.com/nZ994lmfCx
— NDTV (@ndtv) February 3, 2025
ನಿರ್ಮಾಣದ ಸಮಯದಲ್ಲಿ ಬಹಳಷ್ಟು ನಷ್ಟಗಳನ್ನು ಅನುಭವಿಸಿದ ನಂತರ, ಅವರು ಗೋವಾಕ್ಕೆ ತೆರಳಿ ಅಲ್ಲಿ ಪಬ್ ಅನ್ನು ಸ್ಥಾಪಿಸಿದ್ದರು. ಆದರೆ ಅಕ್ರಮವಾಗಿ ಪಬ್ ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ಗೋವಾ ಸರ್ಕಾರ ಅದನ್ನು ಕೆಡವಿತ್ತು. ಇದಲ್ಲದೆ ಗೋವಾಕ್ಕೆ ಬಂದ ಸೆಲೆಬ್ರಿಟಿಗಳಿಗೆ ಅವರು ರಹಸ್ಯವಾಗಿ ಡ್ರಗ್ಸ್ ಪೂರೈಸುತ್ತಿದ್ದರು ಎನ್ನಲಾಗಿದೆ.