ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kerala Horror: ವರದಕ್ಷಿಣೆ ಕಿರುಕುಳ-ವೈವಾಹಿಕ ದೌರ್ಜನ್ಯ; ಯುವತಿ ಆತ್ಮಹತ್ಯೆ!

ವರದಕ್ಷಿಣೆ ಕಿರುಕುಳ ಮತ್ತು ವೈವಾಹಿಕ ದೌರ್ಜನಕ್ಕೆ ಒಳಗಾಗಿದ್ದ ಕೇರಳ ಮೂಲದ ಯುವತಿಯೊಬ್ಬರು ಮಾನಸಿಕವಾಗಿ ನೊಂದು ಗುರುವಾರ(ಜ.30) ಆತ್ಮಹತ್ಯೆಗೆ(Self Harming) ಶರಣಾಗಿದ್ದಾರೆ. ಮಲಪ್ಪುರಂನ ಎಲಂಕೂರಿನಲ್ಲಿ ಈ ದಾರುಣ ಘಟನೆ ನಡೆದಿದೆ. ವಿಷ್ಣುಜಾ 2023ರ ಮೇ ತಿಂಗಳಿನಲ್ಲಿ ಏಲಂಕೂರಿನ ನಿವಾಸಿ ಪ್ರಭಿನ್ ಅವರನ್ನು ವಿವಾಹವಾಗಿದ್ದರು. ಆತ್ಮಹತ್ಯೆಯ ಪ್ರಕರಣವು ಮಂಜೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ವರದಕ್ಷಿಣೆ ಕಿರುಕುಳದಿಂದ ಯುವತಿ ಆತ್ಮಹತ್ಯೆ!

Kerala Horror

Profile Deekshith Nair Feb 3, 2025 5:47 PM

ತಿರುವನಂತಪುರಂ: ವರದಕ್ಷಿಣೆ ಕಿರುಕುಳ ಮತ್ತು ವೈವಾಹಿಕ ದೌರ್ಜನಕ್ಕೆ(Dowry and Marital Abuse) ಒಳಗಾಗಿದ್ದ ಕೇರಳ ಮೂಲದ ಯುವತಿಯೊಬ್ಬರು(Kerala Horror) ಮಾನಸಿಕವಾಗಿ ನೊಂದು ಗುರುವಾರ(ಜ.30) ಆತ್ಮಹತ್ಯೆಗೆ(Self Harming) ಶರಣಾಗಿದ್ದಾರೆ. ಮಲಪ್ಪುರಂನ(Mallapuram) ಎಲಂಕೂರಿನಲ್ಲಿ ಈ ದಾರುಣ ಘಟನೆ ನಡೆದಿದೆ. ವಿಷ್ಣುಜಾ 2023ರ ಮೇ ತಿಂಗಳಿನಲ್ಲಿ ಏಲಂಕೂರಿನ ನಿವಾಸಿ ಪ್ರಭಿನ್ ಅವರನ್ನು ವಿವಾಹವಾಗಿದ್ದರು.

ಆತ್ಮಹತ್ಯೆಯ ಪ್ರಕರಣವು ಮಂಜೇರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಯುವತಿಯ ಗಂಡ ಆಕೆಯ ಸೌಂದರ್ಯವನ್ನು ಹಂಗಿಸಿದ್ದು, ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾನೆ. ವೈವಾಹಿಕ ದೌರ್ಜನ್ಯವನ್ನು ಎಸಗಿದ್ದಾನೆ ಎಂದು ತಿಳಿದು ಬಂದಿದೆ. ದೌರ್ಜನ್ಯದಲ್ಲಿ ಗಂಡನ ಕುಟುಂಬದವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪತಿ ಹಾಗೂ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.



ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಯುವತಿಯ ಮೈಮೇಲೆ ಗಾಯಗಳಿದ್ದವು ಎಂದು ಮನೆಯವರು ಹೇಳಿದ್ದಾರೆ. ಯುವತಿಯ ತಂದೆ ಮಗಳ ಸಾವಿನ ಕುರಿತು ಮಾತನಾಡಿದ್ದು,

"ನಮ್ಮ ಮೂವರು ಹೆಣ್ಣು ಮಕ್ಕಳಲ್ಲಿ ಇವಳು ಕಿರಿಯವಳು. ಮನೆಯಲ್ಲಿ ಏನಾದರೂ ಸಮಸ್ಯೆ ಎದುರಾದಾಗ ಅವಳು ನಿಭಾಯಿಸುತ್ತಿದ್ದಳು. ಧೈರ್ಯಶಾಲಿಯಾಗಿದ್ದಳು. ಕೆಲವು ದಿನಗಳ ಹಿಂದೆ ಅವಳು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ತಿಳಿಯಿತು. ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುತ್ತೇನೆ ಎಂದೆ. ಬೇಡ ನಾನೇ ಬಗೆಹರಿಸಿಕೊಳ್ಳುತ್ತೇನೆ ಎಂದಳು. ಎಷ್ಟೋ ಬಾರಿ ಫೋನ್‌ ಮಾಡಿ ಆಕೆಯ ಗಂಡನಿಗೆ ಬುದ್ಧಿ ಕಲಿಸುವುದಾಗಿ ಹೇಳಿದೆ ಅವಳು ಒಪ್ಪಲಿಲ್ಲ. ಅವನು ತುಂಬಾ ಹಿಂಸೆ ನೀಡಿದ್ದಾನೆ. ನನ್ನ ಮಗಳನ್ನು ಬೈಕ್‌ ಮೇಲೂ ಕೂರಿಸುತ್ತಿರಲಿಲ್ಲ. ಹೊಡೆಯುವುದು,ಸುಡುವುದು ಹೀಗೆ ಸಾಕಷ್ಟು ಚಿತ್ರ ಹಿಂಸೆ ಕೊಟ್ಟಿದ್ದಾನೆ. ಅವನು ಮತ್ತು ಅವನ ಕುಟುಂಬದವರನ್ನು ಪೊಲೀಸರು ಈ ಕೂಡಲೇ ಬಂಧಿಸಬೇಕು" ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Sharon Raj Murder Case: ಕೇರಳದ ಶರೋನ್‌ ರಾಜ್‌ ಕೊಲೆ ಪ್ರಕರಣ; ಪ್ರೇಯಸಿ ಗ್ರೀಷ್ಮಾಗೆ ಗಲ್ಲುಶಿಕ್ಷೆ!

ಪೊಲೀಸರು ಪ್ರಬಿನ್‌ನನ್ನು ವಶಕ್ಕೆ ಪಡೆದಿದ್ದಾರೆ. ದಂಪತಿ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು ಎಂದು ಪ್ರಬಿನ್ ಕುಟುಂಬ ಹೇಳಿದೆ. ಅವರು ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ ಎಂದಿದ್ದು, ವರದಕ್ಷಿಣೆ ಕಿರುಕುಳ ಮತ್ತು ವೈವಾಹಿಕ ದೌರ್ಜನ್ಯದ ಆರೋಪವನ್ನು ತಳ್ಳಿ ಹಾಕಿದ್ದಾರೆ.