Chikkaballapur News: ಕೃಷ್ಣಾ ನದಿ ನೀರು ಯೋಜನೆ ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆ
ಜಿಲ್ಲೆಯಲ್ಲಿ ಬಾಗೇಪಲ್ಲಿ ದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆ ಯುತ್ತಿರುವ ಪಟ್ಟಣ. ಆದರೆ ಚಿಕ್ಕಬಳ್ಳಾಪುರ ಹಾಗೂ ಪುಟ್ಟಪರ್ತಿ ರೈಲ್ವೆ ಹಾಗೂ ನಿರು ದ್ಯೋಗಿಗಳ ಕನಸಾಗಿರುವ ಕೈಗಾರಿಕೆ ಸ್ಥಾಪನೆ, ಕೃಷ್ಣಾ ನದಿ ನೀರು ಯೋಜನೆ ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ


ಬಾಗೇಪಲ್ಲಿ: ಆಂಧ್ರಪ್ರದೇಶದ ಗಡಿಭಾಗದಲ್ಲಿದೆ. ನಂಜುಂಡಪ್ಪ ವರದಿ ಅನ್ವಯ ಹಿಂದು ಳಿದ ತಾಲ್ಲೂಕು ಹಣೆಪಟ್ಟಿಯಲ್ಲಿರುವ ಬಾಗೇಪಲ್ಲಿ ತಾಲ್ಲೂಕಿನ ಜನರು ಯಾವ ಯೋಜನೆ ಗಳು ಬಜೆಟ್‌ನಲ್ಲಿ ಸೇರ್ಪಡೆಯಾಗಬಹುದು, ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಬಾಗೇಪಲ್ಲಿ ದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆ ಯುತ್ತಿರುವ ಪಟ್ಟಣ. ಆದರೆ ಚಿಕ್ಕಬಳ್ಳಾಪುರ ಹಾಗೂ ಪುಟ್ಟಪರ್ತಿ ರೈಲ್ವೆ ಹಾಗೂ ನಿರು ದ್ಯೋಗಿಗಳ ಕನಸಾಗಿರುವ ಕೈಗಾರಿಕೆ ಸ್ಥಾಪನೆ, ಕೃಷ್ಣಾ ನದಿ ನೀರು ಯೋಜನೆ ಈ ಬಾರಿ ಬಜೆಟ್‌ನಲ್ಲಾದರೂ ಪರಿಹಾರ ಸಿಗುವುದೇ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಜನರಿಗೆ ಉದ್ಯೋಗ ಒದಗಿಸುವ ಕೈಗಾರಿಕಾ ವಲಯಗಳ ಸ್ಥಾಪನೆಯ ಬಹುವರ್ಷಗಳ ಬೇಡಿಕೆಗಳಿಗೆ ಸ್ಪಂದನೆ ಸಿಗುವುದೇ ಎಂಬ ಕಾತುರದಲ್ಲಿ ಜನರು ಇದ್ದಾರೆ.
ಇದನ್ನೂ ಓದಿ: Chief Election Commissioner: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ
ಬಯಲು ಸೀಮೆ ಕೆರೆಗಳಿಗೆ ನೀರು ಹರಿಸುವ ಕೃಷ್ಣಾ ನದಿ ನೀರು ಯೋಜನೆ, ಕೆ.ಸಿ ಹಾಗೂ ಎಚ್.ಎನ್ ವ್ಯಾಲಿ ಯೋಜನೆಗಳಲ್ಲಿ ತಾಲ್ಲೂಕು ವಂಚಿತವಾಗಿದೆ. ತಾರತಮ್ಯಕ್ಕೆ ಒಳಗಾಗಿ ರುವ ತಾಲ್ಲೂಕಿಗೆ ಯೋಜನೆಗಳನ್ನು ಸಾಕಾರಗೊಳಿಸಿ ಕೆರೆಗಳನ್ನು ತುಂಬಿಸಬೇಕು ಎಂಬುದು ರೈತರ ಬೇಡಿಕೆ ಆಗಿದೆ.
ಈ ಭಾಗದಲ್ಲಿ ಟೊಮೆಟೊ, ಮಾವು ಹೆಚ್ಚಾಗಿ ಬೆಳೆಯುತ್ತಾರೆ. ಬೆಲೆ ಕುಸಿತದಿಂದ ರೈತರು ಫಸಲನ್ನು ರಸ್ತೆಗೆ ಸುರಿದು ಪ್ರತಿಭಟಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಜ್ಯೂಸ್, ಉಪ್ಪಿಕಾಯಿ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬಂದಿದೆ. ಇದು ಕೂಡ ಸಾಕಾರಗೊಂಡಿಲ್ಲ.

ಬಾಗೇಪಲ್ಲಿ ತಾಲ್ಲೂಕು ನನೆಗುದಿಗೆ ಬಿದ್ದಿರುವ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿ ಯುವಜನರಿಗೆ ಉದ್ಯೋಗ ಸೃಷ್ಟಿಸಬೇಕಿದೆ. ಪಾತಪಾಳ್ಯ ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಸಲು ಘಂಟ್ಲಮಲ್ಲಮ್ಮ ಡ್ಯಾಮ್ ನಿರ್ಮಾಣಕ್ಕೆ ಶಾಸಕರು ಹಾಗೂ ಸಚಿವರು ಹೆಚ್ಚಿನ ಅನುದಾನದ ಬೇಡಿಕೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಅಂಗನವಾಡಿ ಮತ್ತು ಶೈಕ್ಷಣಿಕ ವಲಯದ ಶಾಲಾ ಕಟ್ಟಡಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿ ತಾಲ್ಲೂಕಿನ ಜನರು ಇದ್ದಾರೆ.
ಕೈಗಾರಿಕಾ ಪ್ರಾಂಗಣಗಳು ಅಭಿವೃದ್ಧಿಯಾದರೆ ಯುವಜನರಿಗೆ ಅನುಕೂಲವಾಗಲಿದೆ ಕೆ.ಸಿ ಮತ್ತು ಎಚ್.ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ತಾಲ್ಲೂ ಕಿಗೆ ತಾರತಮ್ಯವಾಗಿದೆ. ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಬೇಕು. ಅಂಗನವಾಡಿ ನೌಕರರ ಸಂಘ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಗಾರ್ಮೆಮೆಂಟ್ ಉದ್ಯಮ ಪ್ರಾರಂಭಿಸಬೇಕು. ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ನೀಡಬೇಕು,ಬಯಲುಸೀಮೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ದುಡಿಯುವ ಯುವ ಜನರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಆರಂಭಿಸಬೇಕು ಇಲ್ಲಿನ ಜನರ ಆಶಯವಾಗಿದೆ.