ಭಾರತದ ಟೆಕ್-ಚಾಲಿತ ಕ್ರಿಪ್ಟೋ ಪವರ್‌ಹೌಸ್ ಆಗಿ ಹೊರಹೊಮ್ಮಿದ ಬೆಂಗಳೂರು: ಕಾಯಿನ್‌ಸ್ವಿಚ್ Q3 ವರದಿ
ಬೆಂಗಳೂರು 8.9% ಪಾಲು ಹೊಂದಿದ್ದು, ಭಾರತದ ಎರಡನೇ ಅತಿದೊಡ್ಡ ಕ್ರಿಪ್ಟೋ ಹೂಡಿಕೆ ಕೇಂದ್ರ ವಾಗಿ ಹೊರಹೊಮ್ಮಿದೆ. ಇದು ನಗರದ ಡಿಜಿಟಲ್ ಪ್ರಬುದ್ಧತೆ ಮತ್ತು ನಾವೀನ್ಯತೆ ಆಧರಿತ ಹೂಡಿಕೆ ದಾರರ ಸಮೂಹವನ್ನು ಪ್ರತಿಬಿಂಬಿಸುತ್ತದೆ. ಟೆಕ್ ಪರಿಣಿತ ಜನಸಮೂಹವನ್ನು ಹೊಂದಿರುವ ಬೆಂಗಳೂರು, ತನ್ನ "ಭಾರತದ ಸಿಲಿಕಾನ್ ವ್ಯಾಲಿ" ಖ್ಯಾತಿಯನ್ನು ಡಿಜಿಟಲ್ ಅಸೆಟ್‌ಗಳ ಜಗತ್ತಿ ನಲ್ಲೂ ಹೊಂದಿದೆ.
                                -
                                
                                Ashok Nayak
                            
                                Nov 3, 2025 10:50 PM
                            68.3% ಪೋರ್ಟ್‌ಫೋಲಿಯೋಗಳಿಗೆ ಲಾಭ, ಭಾರತದ ಕ್ರಿಪ್ಟೋ ಹೂಡಿಕೆ ವಲಯದಲ್ಲಿ ನಗರಕ್ಕೆ ಎರಡನೇ ಸ್ಥಾನ
ಬೆಂಗಳೂರು: ಭಾರತದ ಅತಿದೊಡ್ಡ ಕ್ರಿಪ್ಟೋ ಟ್ರೇಡಿಂಗ್ ವೇದಿಕೆ ಕಾಯಿನ್‌ಸ್ವಿಚ್ (CoinSwitch) ಇಂದು ತನ್ನ 'ಇಂಡಿಯಾಸ್ ಕ್ರಿಪ್ಟೋ ಪೋರ್ಟ್‌ಫೋಲಿಯೊ: ಹೌ ಇಂಡಿಯಾ ಇನ್ವೆಸ್ಟ್ಸ್' ವರದಿಯ Q3 2025 ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು 2.5 ಕೋಟಿ ಗೂ ಹೆಚ್ಚು ಬಳಕೆ ದಾರರ ಮಾಹಿತಿಯನ್ನು ಪಡೆದುಕೊಂಡಿದ್ದು, ಭಾರತದ ವಿಕಸನ ಗೊಳ್ಳುತ್ತಿರುವ ಕ್ರಿಪ್ಟೋ ಹೂಡಿಕೆ ವಿಧಾನಗಳು, ಟ್ರೇಡಿಂಗ್ ಮಾದರಿಗಳು ಮತ್ತು ಜನರ ಟ್ರೆಂಡ್ ಗಳನ್ನು ವಿಶ್ಲೇಷಣೆ ಮಾಡಿದೆ.
ಕಂಡುಬಂದಿರುವ ಅಂಶಗಳ ಪ್ರಕಾರ, ಇದೇ ಮೊದಲ ಬಾರಿಗೆ ಜನರೇಷನ್ Z (18–25 ವಯಸ್ಸಿ ನವರು) 37.6% ಪಾಲು ಹೊಂದಿದ್ದು, ಭಾರತದ ಕ್ರಿಪ್ಟೋ ಹೂಡಿಕೆದಾರರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಇದು ಮಿಲೇನಿಯಲ್ಸ್‌ಗಿಂತ (26–35 ವಯಸ್ಸಿನವರು 37.3% ಮತ್ತು 36-45 ವಯಸ್ಸಿನವರು 17.8%) ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ: Bangalore News: ಅಪೋಲೊ ಕ್ಯಾನ್ಸರ್ ಸೆಂಟರ್‌ಗಳ ಹೊಸ ಕ್ಯಾಂಪೇನ್ ‘ಚೆಕ್-ಒಲೇಟ್’ ಸಿಹಿಯಾದ ಚಾಕೊಲೇಟ್‌ನಲ್ಲಿ ಆರೋಗ್ಯದ ಸಂದೇಶ
ಬೆಂಗಳೂರು 8.9% ಪಾಲು ಹೊಂದಿದ್ದು, ಭಾರತದ ಎರಡನೇ ಅತಿದೊಡ್ಡ ಕ್ರಿಪ್ಟೋ ಹೂಡಿಕೆ ಕೇಂದ್ರವಾಗಿ ಹೊರಹೊಮ್ಮಿದೆ. ಇದು ನಗರದ ಡಿಜಿಟಲ್ ಪ್ರಬುದ್ಧತೆ ಮತ್ತು ನಾವೀನ್ಯತೆ ಆಧರಿತ ಹೂಡಿಕೆದಾರರ ಸಮೂಹವನ್ನು ಪ್ರತಿಬಿಂಬಿಸುತ್ತದೆ. ಟೆಕ್ ಪರಿಣಿತ ಜನಸಮೂಹವನ್ನು ಹೊಂದಿ ರುವ ಬೆಂಗಳೂರು, ತನ್ನ "ಭಾರತದ ಸಿಲಿಕಾನ್ ವ್ಯಾಲಿ" ಖ್ಯಾತಿಯನ್ನು ಡಿಜಿಟಲ್ ಅಸೆಟ್‌ಗಳ ಜಗತ್ತಿ ನಲ್ಲೂ ಹೊಂದಿದೆ. ಈ ಮೂಲಕ ಹೊಸ-ಯುಗದ ಹಣಕಾಸು ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಭಾರತದ ಹಲವಾರು Web3 ಸ್ಟಾರ್ಟ್‌ಅಪ್‌ಗಳಿಗೂ ಬೆಂಗಳೂರು ನೆಲೆಯಾಗಿದೆ.
ಕಾಯಿನ್‌ಸ್ವಿಚ್‌ನ ಉಪಾಧ್ಯಕ್ಷರಾದ ಬಾಲಾಜಿ ಶ್ರೀಹರಿ ಅವರು, “ನಮ್ಮ ಒಳನೋಟಗಳು ದೇಶದ ಅತಿದೊಡ್ಡ ಚಿಲ್ಲರೆ ಹೂಡಿಕೆದಾರರ ನೆಲೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಕ್ರಿಪ್ಟೋ ಮಾರುಕಟ್ಟೆಯು ಹೆಚ್ಚು ಪ್ರಬುದ್ಧ ಹಂತಕ್ಕೆ ಪ್ರವೇಶಿಸುತ್ತಿದೆ ಎಂಬುದನ್ನು ದತ್ತಾಂಶವು ಸ್ಪಷ್ಟವಾಗಿ ತೋರಿಸುತ್ತದೆ. ದೊಡ್ಡ ನಗರಗಳ ಆಚೆಗೂ ಆರ್ಥಿಕ ಸಬಲೀಕರಣವಾಗುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಮೆಟ್ರೋಗಳು ಮುಂಚೂಣಿಯಲ್ಲಿದ್ದರೂ, ಭಾರತದ ಕ್ರಿಪ್ಟೋ ಕಥೆಯ ಮುಂದಿನ ಹಂತವು 2 ಮತ್ತು 3 ನೇ ಹಂತದ ನಗರಗಳಿಂದ ರೂಪುಗೊಳ್ಳಲಿದೆ,” ಎಂದು ಹೇಳಿದರು.