ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬೆರಗಿನ ಫಾಂಟ್‌ ಲೋಕ

ಹಾಗೆಯೇ ಸ್ಯಾಮ್‌ಸಂಗ್. ನೋಕಿಯಾ ಪಾಂಟ್ ಇದ್ದಂತೆ, ಸ್ಯಾಮ್‌ಸಂಗ್ ಫಾಂಟ್‌ ಇಲ್ಲ. ಹೀಗಾಗಿ ಎಲ್ಲ ಸಂಸ್ಥೆ ಅಥವಾ ಕಂಪನಿಗಳು ತಮಗಾಗಿ ವಿಶೇಷವಾದ ಫಾಂಟ್‌ಗಳನ್ನು ಡಿಸೈನ್ ಮಾಡಿಕೊಳ್ಳುತ್ತವೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ಸುರಿಯುತ್ತವೆ. ಇದು ಅವುಗಳನ್ನು ಗುರುತಿಸಲು ಸಹಾಯಕವಾಗುತ್ತವೆ

ಬೆರಗಿನ ಫಾಂಟ್‌ ಲೋಕ

ಒಂದೊಂದು ಅಕ್ಷರಗಳ (ಫಾಂಟ್‌) ಸ್ವರೂಪ ಒಂದೊಂದು ರೀತಿ. ಇಂಗ್ಲಿಷಿನಲ್ಲಿ ಫಾಂಟ್‌ ಗಳ ಬಹುದೊಡ್ಡ ಆಗರವೇ ಇದೆ. ಪ್ರತಿಯೊಂದರ ಪಾತ್ರ, ಸ್ವರೂಪ, ಉದ್ದೇಶ ಒಂದೊಂದು ರೀತಿ. ಜಗತ್ತಿನೆಡೆ ಇಂಗ್ಲಿಷಿನಲ್ಲಿ ಏನಿಲ್ಲವೆಂದರೂ ಎರಡು ಲಕ್ಷಕ್ಕೂ ಅಧಿಕ ಫಾಂಟ್‌ ಗಳಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎರಡು ಲಕ್ಷ ಫಾಂಟ್‌ಗಳ ಪೈಕಿ ಒಂದು ಇರುವಂತೆ ಮತ್ತೊಂದಿಲ್ಲ. ಎಲ್ಲವೂ ಭಿನ್ನ. ಫಾಂಟ್‌ಗಳ ಮೂಲಕವೇ ಒಂದು ಕಂಪನಿಯ ಹೆಸರನ್ನು ಗುರುತಿಸಬಹುದು. ನೋಕಿಯಾ ಎಂಬುದನ್ನು ಬರೆಯಲು ಯಾವ ಫಾಂಟ್‌ ಬಳಸಿದ್ದಾರೆ ಎಂಬುದನ್ನು ಗಮನಿಸಿ. ಅದನ್ನು ನೋಡುತ್ತಿದ್ದಂತೆ, ಮನಸ್ಸಿನಲ್ಲಿ ನೋಕಿಯಾ ಹೆಸರು ಕಣ್ಮುಂದೆ ಬಂದುಬಿಡುತ್ತದೆ.

ಹಾಗೆಯೇ ಸ್ಯಾಮ್‌ಸಂಗ್. ನೋಕಿಯಾ ಪಾಂಟ್ ಇದ್ದಂತೆ, ಸ್ಯಾಮ್‌ಸಂಗ್ ಫಾಂಟ್‌ ಇಲ್ಲ. ಹೀಗಾಗಿ ಎಲ್ಲ ಸಂಸ್ಥೆ ಅಥವಾ ಕಂಪನಿಗಳು ತಮಗಾಗಿ ವಿಶೇಷವಾದ ಫಾಂಟ್‌ಗಳನ್ನು ಡಿಸೈನ್ ಮಾಡಿಕೊಳ್ಳುತ್ತವೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ಸುರಿಯುತ್ತವೆ. ಇದು ಅವು ಗಳನ್ನು ಗುರುತಿಸಲು ಸಹಾಯಕವಾಗುತ್ತವೆ. ಇಂಗ್ಲಿಷಿನಲ್ಲಿ ಮದುವೆಗೆ nuptial knot ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Vishweshwar Bhat Column : ವಿಮಾನ ನಿಲ್ದಾಣ ಸಿಬ್ಬಂದಿ ನಡತೆ

ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು Nuptial Knot ಎಂಬ ಫಾಂಟ್‌ ಬಳಸಿಯೇ ಮುದ್ರಿಸುತ್ತಾರೆ. ಆ ಫಾಂಟ್‌ ಬಳಸಿ ಏನನ್ನೇ ಮುದ್ರಿಸಿದರೂ, ಅದರ ಬಗ್ಗೆ ಗೊತ್ತಿದ್ದವರು ತಕ್ಷಣ ಇದು ವಿವಾಹ ಆಮಂತ್ರಣ ಪತ್ರಿಕೆ ಎಂಬ ನಿರ್ಧಾರಕ್ಕೆ ಬರುತ್ತಾರೆ. Nuptial Knot ಬದಲು ಬೇರೆ ಫಾಂಟ್‌ ಬಳಸಿದರೆ, ಆಗ ಗೊಂದಲವಾಗುತ್ತದೆ. ಅನೇಕರಿಗೆ ಫಾಂಟ್‌ ಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ.

ಅಂಥವರು Nuptial Knot ಫಾಂಟನ್ನು ಶ್ರದ್ಧಾಂಜಲಿ ಸಭೆಯ ಆಮಂತ್ರಣಕ್ಕೂ ಬಳಸುವುದುಂಟು. ಆಪಲ್ ಕಂಪನಿಯ ಮುಖ್ಯಸ್ಥನಾಗಿದ್ದ ದಿವಂಗತ ಸ್ಟೀವ್ ಜಾಬ್ಸ್‌ ಗೆ ಫಾಂಟ್‌ಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಆತ ಫಾಂಟ್‌ಗಳ ಬಗ್ಗೆ ( Calligraphy) ವಿಶೇಷ ಅಧ್ಯಯನ ಮಾಡಿದ್ದ.

ಅದನ್ನು ಒಂದು ಶಿಸ್ತಾಗಿ, ಅಧ್ಯಯನದ ವಿಷಯವಾಗಿ ಅಭ್ಯಸಿಸಿದ್ದ. ಅಲ್ಲಿಯ ತನಕ ಕಂಪ್ಯೂಟರುಗಳಲ್ಲಿ ಫಾಂಟ್‌ ಬಗ್ಗೆ ಯಾರೂ ವಿಶೇಷ ಗಮನಹರಿಸಿರಲಿಲ್ಲ. ಸ್ಟೀವ್ ಜಾಬ್ಸ್ ಅಭಿವೃದ್ಧಿಪಡಿಸಿದ ಮೆಕಿಂತೋಷ್ ಪರ್ಸನಲ್ ಕಂಪ್ಯೂಟರ್‌ನಲ್ಲಿ ಫಾಂಟುಗಳಿಗೆ ವಿಶೇಷ ಒತ್ತು ನೀಡಲಾಗಿತ್ತು. ಅದಾದ ನಂತರ ಕಂಪ್ಯೂಟರುಗಳು ಫಾಂಟ್‌ಗಳ ಆಯ್ಕೆ ಬಗ್ಗೆ ಗಮನ ಹರಿಸಲಾರಂಭಿಸಿದವು. Fonts can affect people's trust ಎಂಬ ಮಾತಿದೆ.

ಗಹನವಾದ ವಿಷಯವನ್ನು, ಕಾಮಿಕ್ ಫಾಂಟ್‌ (ಕಾಮಿಕ್ ಪುಸ್ತಕಗಳಲ್ಲಿ ಉಪಯೋಗಿಸು ತ್ತಾರಲ್ಲ, ಆ ಫಾಂಟ್‌) ಬಳಸಿದರೆ, ಅದರ ಗಾಂಭೀರ್ಯವೇ ಹೊರಟು ಹೋಗುತ್ತದೆ. ಅಮೆ ರಿಕದ ಸ್ವಾತಂತ್ರ್ಯ ಘೋಷಣೆ ಮತ್ತು ಸಂವಿಧಾನ ಪ್ರಕಟಣೆಗೆ, 1776ರಲ್ಲಿ ಬೆಂಜಾಮಿನ್ ಫ್ರಾಂಕ್ಲಿನ್ ‘ಕ್ಯಾಸ್ಲೋನ್’ ಎಂಬ ಫಾಂಟ್‌ ಬಳಸಿದ.

ಇದು ಮೂಲತಃ ಬ್ರಿಟಿಷ್ ಲಿಪಿಕಾರ ವಿನ್ಯಾಸಗೊಳಿಸಿದ್ದು. ಅಮೆರಿಕದ ಸಿನೆಟ್‌ನಲ್ಲಿ ಇಂದಿಗೂ ಪ್ರಮುಖ ಘೋಷಣೆಗೆ ಬಳಸುವುದು ಈ ಫಾಂಟ್‌ನ್ನೇ. ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಸುವ ಫ್ಯೂಚುರಾ ಎಂಬ ಫಾಂಟ್‌ನ್ನು 1927 ರಲ್ಲಿ ಪಾಲ್ ರೆನ್ನೆರ್ ಎಂಬಾತ ವಿನ್ಯಾಸಗೊಳಿಸಿದ. ಅದಾಗಿ 23 ವರ್ಷಗಳವರೆಗೆ ಆ ಫಾಂಟ್‌ನ್ನು ಯಾರೂ ಬಳಸುತ್ತಿರಲಿಲ್ಲ. ಆದರೆ ನಾಸಾ ಮೊದಲ ಬಾರಿಗೆ ಇದನ್ನು ಬಳಸಲು ನಿರ್ಧರಿಸಿತು.

ಅಪೋಲೋ 11 ಗಗನನೌಕೆಯಲ್ಲಿ ಒಂದು ಅಲ್ಯೂಮಿನಿಯಂ ಸ್ಮರಣಿಕೆಯನ್ನು ಇಡಲಾಗಿ ತ್ತಲ್ಲ, ಅದರ ಮೇಲೆ ಕೆತ್ತಿದ ಅಕ್ಷರಗಳು ‘ಫ್ಯೂಚುರಾ’ ಫಾಂಟ್‌ ನಲ್ಲಿದ್ದವು. ಅದಾದ ಬಳಿಕ ಅದರ ಬಳಕೆ ವೃದ್ಧಿಸಿತು. 2008ರಲ್ಲಿ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ಬರಾಕ್ ಒಬಾಮ ತಮ್ಮ ಪ್ರಚಾರ ಸಾಮಗ್ರಿ, ಪೋಸ್ಟರ್ ಗಳೆಲ್ಲವನ್ನೂ ವಿಶೇಷವಾಗಿ ವಿನ್ಯಾಸಗೊಳಿ ಸಿದ ‘ಗೋಥಮ್’ ಎಂಬ ಫಾಂಟ್‌ ಬಳಸಿದ್ದರು.

ಅದಕ್ಕಾಗಿಯೇ ಅವರು ಇಬ್ಬರು ವಿನ್ಯಾಸಕಾರರ ಸಹಾಯ ಪಡೆದಿದ್ದರು. ಪ್ರತಿ ಫಾಂಟ್‌ಗೂ ತನ್ನದೇ ಆದ ಪರ್ಸನಾಲಿಟಿ ಎಂಬುದಿರುತ್ತದೆ. ಹೀಗಾಗಿ ಅವನ್ನು ಜಾಗರೂಕವಾಗಿ ಬಳಸ‌ ಬೇಕು.