ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲೆಯಲ್ಲಿಲ್ಲ ವಾಣಿಜ್ಯ ಬೆಳೆಗಳ ಕಾಪಾಡುವ ಸರಕಾರಿ ಶೈತ್ಯಾಗಾರ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಯನ್ನು ರೈತರು ಸುಮಾರು ೪ ಸಾವಿರ ಹೆಕ್ಟೇರ್‌ ನಲ್ಲಿ ಬೆಳೆಯಲಾಗಿದೆ.ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಆಲೂಗಡ್ಡೆಗೆ ಬೆಂಗಳೂರು ಸೇರಿದಂತೆ ಆಂಧ್ರ, ಮಹಾರಾಷ್ಟ್ರ ,ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಈ ಬಾರಿ ಎಲ್ಲೆಡೆ ಉತ್ತಮ ಬೆಳೆಯಾಗಿರುವ ಕಾರಣ ರಾಜ್ಯದ ಆಲೂಗಡ್ಡೆಗೆ ಬೇಡಿಕೆ ಇಲ್ಲವಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

ಬೆಲೆಯಿಳಿಕೆಯಿಂದ ಪಾರಾಗಲು ರೈತರ ಪರದಾಟ

ನಗರ ಹೊರವಲಯದಲ್ಲಿರುವ ನಂದಿ ಕೋಲ್ಡ್ ಸ್ಟೋರೇಜ್ ಸಮೀಪ ಆಲೂಗಡ್ಡೆ ಹೊತ್ತ ಟ್ರಾಕ್ಟರ್‌ಗಳು ದಾಸ್ತಾನು ಮಾಡಲಾಗದೆ ಬಿಸಿಲಿನಲ್ಲಿ ಕಾದು ನಿಂತಿರುವ ದೃಶ್ಯ...

Profile Ashok Nayak Apr 2, 2025 9:23 AM

ಮುನಿರಾಜು ಎಂ ಅರಿಕೆರೆ

ಖಾಸಗಿ ಶೈತ್ಯಾಗಾರದಲ್ಲಿ ದುಬಾರಿ ಬೆಲೆತೆತ್ತರೂ ಸ್ಥಳವಿಲ್ಲದ ರಸ್ತೆಯಲ್ಲೇ ನಿಂತ ಆಲೂಗಡ್ಡೆ ಹೊತ್ತ ವಾಹನಗಳು

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಆಲೂಗಡ್ಡೆ ಸೇರಿದಂತೆ ದ್ರಾಕ್ಷಿ, ಟೊಮೆಟೋ ಇತ್ಯಾದಿ ವಾಣಿಜ್ಯ ಬೆಳೆಗಳ ಬೆಲೆ ಪಾತಾಳ ಮುಟ್ಟಿದಾಗ ಶೈತ್ಯಾಗಾರದಲ್ಲಿ ದಾಸ್ತಾನು ಮಾಡಿ ಬೆಲೆಯೇರಿಕೆಯಾದಾಗ ಮಾರಾಟ ಮಾಡಲು ಅನುಕೂಲವಾಗುವಂತೆ ಸರಕಾರಿ ಉಸ್ತುವಾರಿಯ ಒಂದೇ ಒಂದು ಶೈತ್ಯಾಗಾರವಿಲ್ಲದಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ.

ಹೌದು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಯನ್ನು ರೈತರು ಸುಮಾರು ೪ ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ.ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಆಲೂಗಡ್ಡೆಗೆ ಬೆಂಗಳೂರು ಸೇರಿದಂತೆ ಆಂಧ್ರ, ಮಹಾರಾಷ್ಟ್ರ ,ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಈ ಬಾರಿ ಎಲ್ಲೆಡೆ ಉತ್ತಮ ಬೆಳೆಯಾಗಿರುವ ಕಾರಣ ರಾಜ್ಯದ ಆಲೂಗಡ್ಡೆಗೆ ಬೇಡಿಕೆ ಇಲ್ಲವಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

ಸದ್ಯ ೫೦ ಕೆ.ಜಿ ಆಲೂಗಡ್ಡೆ ಚೀಲಕ್ಕೆ 400 ರಿಂದ 600 ರೂ ಬೆಲೆಯಿದ್ದು ಹಾಕಿದ ಬಂಡವಾಳವೂ ಕೈಗೆ ಬರದಂತೆ ಆಗಿರುವುದೇ ಖಾಸಗಿ ಶೈತ್ಯಾಗಾರದತ್ತ ರೈತರು ಮುಖಮಾಡುವಂತೆ  ಮಾಡಿದ್ದು ದುಬಾರಿ ಬೆಲೆ ತೆತ್ತಾದರೂ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದು ಸ್ಥಳಾವಕಾಶದ ಕೊರತೆಯಿಂದ ನರಳುತ್ತಿದ್ದಾರೆ.ಬೇಸಿಗೆಯ ಬಿಸಿಲಿಗೆ ಆಲೂಗಡ್ಡೆ ಹಾಳಾಗುವ ಸಂದರ್ಭವಿದೆ. ಆದರೂ ವಿಧಿಯಿಲ್ಲದೆ ಖಾಸಗಿ ಶೈತ್ಯಾಗಾರದಲ್ಲಿ ಸ್ಥಳಾವಕಾಶ ದೊರೆಯುವುದೋ ಏನೋ ಎಂಬ ಆಸೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಾರಗಟ್ಟಲೆ ಟ್ರಾಕ್ಟರ್‌ಗಳಲ್ಲಿ ಆಲೂಗಡ್ಡೆ ತುಂಬಿಕೊಂಡು ಬಂದು ಶೈತ್ಯಾಗಾರದ ಪಕ್ಕದಲ್ಲಿ ನಿಲ್ಲಿಸಿಕೊಂಡು ಕಾಯುವಂತಾಗಿದ್ದು ವಾಹನದಲ್ಲಿಯೇ ಕೊಳಯುವಂತಾಗಿರುವುದು ರೈತರನ್ನು ಕಂಗಾಲಾಗುವAತೆ ಮಾಡಿದೆ.

ಪ್ರಗತಿಪರ ರೈತ ಬಸವರಾಜು ಮಾತನಾಡಿ, ಒಂದು ಎಕೆರೆಯಲ್ಲಿ ಆಲೂಗಡ್ಡೆ ಬೆಳೆಯಬೇಕಾದರೆ ಬಿತ್ತನೆ ಬೀಜ ಗೊಬ್ಬರ ಔಷಧಿ ಸೇರಿ ಕನಿಷ್ಠ ೮೦ ರಿಂದ ೧ ಲಕ್ಷ ಖರ್ಚಾಗಲಿದೆ. ಉತ್ತಮ ಇಳುವರಿ ಬಂದರೆ ೧೫೦ ರಿಂದ ೨೦೦ ತುಂಡು ಆಗಲಿದೆ ಅಂದರೆ ೧೦೦ ಕ್ವಿಂಟಾಲ್ ಬೆಳೆ ಬರಲಿದೆ. ಒಂದು ತಿಂಗಳ ಹಿಂದೆ ೫೦ ಕೆ.ಜಿಗೆ ೨ಸಾವಿರ ಸಮೀಪದವರೆಗೆ ಇದ್ದ ಬೆಲೆ ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.೧೦ ರೂಪಾಯಿ ಇದೆ.ರೈತ ಲಾಭ ನೋಡಬೇಕಾದರೆ ೫೦ ಕೆ.ಜಿ.ಮೂಟೆಗೆ 1200 ರೂಪಾಯಿಂದ ೧೮೦೦ಕ್ಕೆ ಮೇಲೆ ಮಾರಾಟವಾಗಲೇ ಬೇಕಿದೆ. ಸದ್ಯ ಜಿಲ್ಲೆಯ ಮಾರುಕಟ್ಟೆಯಿರಲಿ ಬೆಂಗಳೂರಿನಲ್ಲಿ ಕೂಡ ಆಲೂಗಡ್ಡೆಯನ್ನು  ಕೇಳುವವರೇ ಇಲ್ಲದಂತಾಗಿದ್ದು ಉತ್ತಮ ಇಳುವರಿ ಬಂದಿರುವ ಹೊತ್ತಿನಲ್ಲಿ ಬೆಲೆಯಿಲ್ಲವಾಗಿರುವುದು ರೈತರ ಬದುಕು ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಬೆಲೆ ಬರುವವರೆಗೆ ಕಾಪಾಡಿಕೊಳ್ಳೋಣ ಎಂದರೆ ಶೈತ್ಯಾಗಾರಗಳ ಕೊರತೆ ಭೂತದಂತೆ ಕಾಡಿದೆ.

*
ಜಿಲ್ಲೆಯಲ್ಲಿ ಆಲೂಗಡ್ಡೆಯನ್ನು ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಉತ್ತಮ ಬೆಲೆಯಿದ್ದಾಗ ತೋಟದಲ್ಲಿಯೇ ಮಾರುತ್ತಾರೆ. ಕಡಿಮೆಯಿದ್ದಾಗ ಅವರೇ ತಂಪಾದ ವಾತಾವಣದಲ್ಲಿ ಸಂಗ್ರಹಿಸಿಟ್ಟುಕೊAಡು ಬೆಲೆ ಏರಿಕೆಯಾದಾಗ ಮಾರಾಟ ಮಾಡುತ್ತಾರೆ. ಜಿಲ್ಲೆಯಲ್ಲಿ ಸರಕಾರಿ ಶೈತ್ಯಾಗಾರಗಳು ಇಲ್ಲದ ಕಾರಣ ಚಿಕ್ಕಬಳ್ಳಾಪುರದ ಖಾಸಗಿ ನಂದಿ ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡುತ್ತಾರೆ. ಈ ಬಾರಿ ರೋಗಬಾದೆಯಿಲ್ಲದೆ ಉತ್ತಮವಾಗಿ ಇಳುವರಿ ಬಂದಿರುವ ಕಾರಣ ಬೆಲೆಯಿಳಿಕೆಯಾಗಿದೆ.ಇದು ಒಂದೆರಡು ತಿಂಗಳ ಸಮಸ್ಯೆಯಷ್ಟೇ.ಏಪ್ರಿಲ್ ಮೇ ತಿಂಗಳಲ್ಲಿ ಬೆಲೆಯೇರಿಕೆ ಆದಾಗ ಮಾರಾಟ ಮಾಡುತ್ತಾರೆ.ಅಲ್ಲಿಯವರೆಗೆ ಶೈತ್ಯಾಗಾರಗಳಲ್ಲಿ ಕಾಪಾಡಿಕೊಳ್ಳು ವುದು ಅನಿವಾರ್ಯ ಎನ್ನುವುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯಿತ್ರಿ ಅವರ ಮಾತು.

ಚಿಕ್ಕಬಳ್ಳಾಪುರ ಹೊರವಲಯದ ಖಾಸಗಿ ನಂದಿ ಕೋಲ್ಡ್ ಸ್ಟೋರೇಜ್ ಇದ್ದು ಅದರಲ್ಲಿ ಮೂರು ತಿಂಗಳ ದಾಸ್ತಾನು ಮಡಲು ಒಂದು ಮೂಟೆಗೆ ೧೧೦ ರೂಪಾಯಿಯಂತೆ ಬಾಡಿಗೆ ನಿಗದಿ ಮಾಡಿ ದ್ದಾರೆ. ದುಬಾರಿ ಬೆಲೆ ತೆರಲು ರೈತರು ಸಿದ್ಧವಿದ್ದರೂ ಅದರಲ್ಲೂ ಜಾಗವಿಲ್ಲದೆ ಈ ಸುಡು ಬಿಸಿಲಿ ನಲ್ಲಿ ಜಿಲ್ಲೆದಾದ್ಯಂತ ಆಲೂಗಡ್ಡೆ ಬೆಳೆದಿರುವ ರೈತರು ಟ್ರ‍್ಯಾಕ್ಟರ್, ಕ್ಯಾಂಟರ್ ಇತರ ಲಾರಿಗಳಲ್ಲಿ ಯೂ ಆಲೂಗಡ್ಡೆ ಮುಟೆಗಳನ್ನು ತುಂಬಿಸಿ ತಂದಿದ್ದಾರೆ. ಸುಮಾರು ಹದಿನೈದು ಇಪ್ಪತ್ತು ದಿನಗಳಾದರೂ ಜಾಗ ಸಿಕ್ಕಿಲ್ಲ, ಬಿಸಿಲಿನ ತಾಪಕ್ಕೆ ಮೂಟೆಯಲ್ಲೇ ಆಲೂಗಡ್ಡೆ ಕೊಳೆಯುವ ಸ್ಥಿತಿಗೆ ಬಂದಿದ್ದು ರೈತನ ಬೆವರಿಗೆ ಬೆಲೆಯಿಲ್ಲದಂತಾಗಿದೆ.

ಒಂದು ಕಾಲದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆಯಿಂದ ಬಿತ್ತನೆ ಆಲೂಗಡ್ಡೆ ಖರೀದಿ ಮಾಡಿ ಹಾಸನದಲ್ಲಿ ಆಲೂಗಡ್ಡೆ ಬೆಳೆಯು ತ್ತಿದ್ದರು. ಅಂತಹ ಹಿರಿಮೆಯಿರುವ ಜಿಲ್ಲೆಯಲ್ಲಿ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಒಂದೆರೆಡು ತಿಂಗಳು ಮಟ್ಟಿಗೆ ದರ ಏರುವವರೆಗೂ ನಗರ ಹೊರವಲಯದ ಕೋಲ್ಡ್ ಸ್ಟೋರೇಜ್‌ನಲ್ಲಿ ಆಲೂ ಗಡ್ಡೆ ದಾಸ್ತಾನು ಮಾಡಲು ರೈತರು ಮುಗಿಬಿದ್ದಿದ್ದು, ವಾರಗಟ್ಟಲೇ ಬಿರು ಬಿಸಲಿನಲ್ಲೇ ಕಾಯು ವಂತಾಗಿರುವುದು ಕೋಲ್ಡ್ ಸ್ಟೋರೇಜ್‌ಗೆ ಕೊರತೆಯನ್ನು ಎತ್ತಿತೋರಿಸುತ್ತಿದೆ.

ಆಧುನಿಕ ಬೇಸಾಯ ಪದ್ಧತಿಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯ ರೈತರು ಕೋಲ್ಡ್ ಸ್ಟೋರೇಜ್‌ಗಳನ್ನು ಬಳಕೊಂಡು ತಾವು ಬೆಳಸಿದ ಉತ್ಪನ್ನಗಳನ್ನು ಬೆಲೆ ಬರುವ ತನಕ ಸಂರಕ್ಷಿಸಿ ನಂತರ ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ಮಾರೋಣ ಅಂದರು ಅದಕ್ಕೂ ಈ ಭಾಗದಲ್ಲಿ ಯಾವುದೇ ಸರ್ಕಾರಿ ಕೋಲ್ಡ್ ಸ್ಟೋರೇಜ್ ಇಲ್ಲದಂತಾಗಿದ್ದು ರೈತನ ಗೋಳು ಅರಣ್ಯರೋಧನ ವಾಗಿದೆ.

ಈ ಹಿಂದೆ ನಗರದ ಎಪಿಎಂಸಿಯಲ್ಲಿ ಲಕ್ಷಂತರ ರೂಗಳನ್ನು ವ್ಯೆಯಿಸಿ ಸರ್ಕಾರ ಕೋಲ್ಡ್ ಸ್ಟೋರೇಜ್ ನಿರ್ಮಿಸಿದ್ದರು. ಅದು ಬಳಕೆಯಾಗದೇ ಮತ್ತು ನಿರ್ವಹಣೆ ಕೊರತೆಯಿಂದ ಕಳೆದ ೧೫ ವರ್ಷಗಳ ಹಿಂದೆ ಸ್ಕ್ರಾಪ್ ಮಾಡಿದರು. ಈಗಲಾದರೂ ಸರ್ಕಾರ ಎಚ್ಚೆತ್ತು ಕೋಲ್ಡ್ ಸ್ಟೋರೇಜ್ ಆರಂಭಿಸುತ್ತಾ ಎಂದು ಕಾದು ನೋಡಬೇಕಿದೆ.

ಏನೇ ಆಗಲಿ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಳ್ಳಲು ಮುಂದಾಗುವ ರೈತರಿಗೆ ನೆರವಾಗುವಂತಹ ಸುಧಾರಿತ ಶೈತ್ಯಾಗಾರಗಳ ನಿರ್ಮಾಣ ಮಾಡಿ, ಕಡಿಮೆ ಬೆಲೆಯ ಬಾಡಿಗೆಗೆ ನೀಡಿದರೆ ನಷ್ಟದಿಂದ ರೈತರು ಪಾರಾಗಬಹುದು. ಇನ್ನಾದರೂ ಸರಿಯೆ ಜಿಲ್ಲಾಡಳಿತ ಸರಕಾರ ತೋಟಗಾರಿಕೆ ಇಲಾಖೆ ಇತ್ತ ಗಮನ ಹರಿಸಿ ರೈತರ ನೆರವಿಗೆ ಬರುವುದೇ ಕಾದು ನೋಡಬೇಕಿದೆ.