BBK 12: ಬಿಗ್ ಬಾಸ್ಗೋಸ್ಕರ ಕಲರ್ಸ್ನಲ್ಲಿ ಮುಕ್ತಾಯವಾಗುತ್ತಿದೆ ಒಂದಲ್ಲ.. ಎರಡಲ್ಲ 3 ಧಾರಾವಾಹಿಗಳು
ಬಿಗ್ ಬಾಸ್ಗೆ ದಾರಿ ಮಾಡಿಕೊಡಲು ಮೊದಲು ರಾಮಾಚಾರಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನಲಾಗಿದೆ. ಸಾಕಷ್ಟು ಕಲಾವಿದರಿಗೆ ರಾಮಾಚಾರಿ ಬ್ರೇಕ್ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಸ್ಟೋರಿ ಕೊಂಚ ಡಲ್ ಹೊಡಿತಿದೆ. ಈ ಧಾರಾವಾಹಿ 1000 ಸಂಚಿಕೆಗಳು ಮುಟ್ಟುತ್ತಿದ್ದ ಹಾಗೆ ಎಂಡ್ ಆಗೋದು ಖಚಿತ.

Kannada Serial -

ಬಿಗ್ ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್ 28 ರಿಂದ ಬಿಬಿಕೆ 12 ಆರಂಭವಾಗಲಿದೆ. ಈಗಾಗಲೇ ಎರಡು ಪ್ರೋಮೋ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸೆಪ್ಟೆಂಬರ್ 28 ಭಾನುವಾರದಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಇದಾದ ಬಳಿಕ ಸೆ. 29 ರಿಂದ ಪ್ರತಿ ರಾತ್ರಿ 9:30ಕ್ಕೆ ಡೊಡ್ಮನೆ ಆಟ ಪ್ರಸಾರ ಕಾಣಲಿದೆ. 1:30 ಗಂಟೆಗಳ ಕಾಲ ಬಿಗ್ ಬಾಸ್ ಶೋ ಟೆಲಿಕಾಸ್ಟ್ ಆಗಲಿದೆ. ಹೀಗಾಗಿ ಬಿಗ್ ಬಾಸ್ಗೋಸ್ಕರ ಮೂರು ಧಾರಾವಾಹಿಗಳು ಮುಕ್ತಾಯ ಕಾಣಲಿದೆ.
ರಾಮಾಚಾರಿ:
ಬಿಗ್ ಬಾಸ್ಗೆ ದಾರಿ ಮಾಡಿಕೊಡಲು ಮೊದಲು ರಾಮಾಚಾರಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನಲಾಗಿದೆ. ಸಾಕಷ್ಟು ಕಲಾವಿದರಿಗೆ ರಾಮಾಚಾರಿ ಬ್ರೇಕ್ ನೀಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದರ ಸ್ಟೋರಿ ಕೊಂಚ ಡಲ್ ಹೊಡಿತಿದೆ. ರೇಟಿಂಗ್ ಕೂಡ ಡೌನ್ ಆಗಿದ್ದು, ಟಾಪ್ ಸ್ಥಾನದಲ್ಲಿ ಧಾರಾವಾಹಿ ಟಿಆರ್ಪಿನಲ್ಲಿ ಕೊನೆ ಸ್ಥಾನ ತಲುಪಿದೆ. ಹೀಗಾಗಿ ರಾಮಾಚಾರಿಯನ್ನ ಮುಕ್ತಾಯ ಮಾಡೋ ಪ್ಲ್ಯಾನ್ನಲ್ಲಿದೆ ತಂಡ ಎನ್ನಲಾಗಿದೆ. ಈ ಧಾರಾವಾಹಿ 1000 ಸಂಚಿಕೆಗಳು ಮುಟ್ಟುತ್ತಿದ್ದ ಹಾಗೆ ಎಂಡ್ ಆಗೋದು ಖಚಿತ.
ನಿನಗಾಗಿ:
ಮುಕ್ತಾಯವಾಗುತ್ತಿರುವ ಎರಡನೇ ಧಾರಾವಾಹಿ ನಿನಗಾಗಿ. ಸಮ್ಪೃಥ್ವಿ ನಿರ್ದೇಶನದ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯಭೂಮಿಕೆಯಲ್ಲಿರುವ ನಿನಗಾಗಿ ಕಳೆದ ವರ್ಷ ಅದ್ಧೂರಿಯಾಗಿಯೇ ಲಾಂಚ್ ಆಗಿತ್ತು. ಹಲವು ತಿರುವುಗಳ ಜೊತೆ ವೀಕ್ಷಕರನ್ನ ರಂಜಿಸಿತ್ತು. ಸದ್ಯ ಮುಕ್ತಾಯದ ಸೂಚನೆ ಸಿಗುತ್ತಿದೆ. ಈ ಧಾರಾವಾಹಿ ಕಥೆ ವೇಗ ಪಡೆದುಕೊಂಡಿದ್ದು, ದೇವಿ ಸತ್ಯ ಬಯಲು ಮಾಡಿದ್ದಾಳೆ ರಚನಾ. ಅತ್ತ ಬ್ಯುಸಿನೆಸ್ನಲ್ಲಿ ನಡೆಯುತ್ತಿರುವ ಅನ್ಯಾಯದ ಸುಳಿವು ಜೀವಾಗೆ ಸಿಕ್ಕಿದೆ. ಈ ನಡುವೆ ದುಷ್ಟ ಕಪಿಲ್ ಹಂತಹಂತವಾಗಿ ಬದಲಾಗುತ್ತಿದ್ದಾನೆ. ಈ ಎಲ್ಲಾ ಬೆಳವಣಿಗೆಗಳು ಸೀರಿಯಲ್ ವಿದಾಯ ಹೇಳುತ್ತಿರುವುದು ಪಕ್ಕಾ ಎನ್ನುವಂತಿದೆ.
ದೃಷ್ಟಿಬೊಟ್ಟು:
ದೃಷ್ಟಿಬೊಟ್ಟು ಇದೇ ಸೆಪ್ಟಂಬರ್ 21 ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಆಗಲಿದೆ. ಇನ್ನು ಸೀರಿಯಲ್ನಿಂದ ಹೊರಬಂದ ವಿಜಯ್ ಸೂರ್ಯ ಬಿಗ್ ಬಾಸ್ಗೆ ಕಾಲಿಡಲಿದ್ದಾರೆ ಎಂಬ ಮಾತು ಜೋರಾಗಿದೆ. ಈಗಾಗಲೇ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ಕಥಾನಾಯಕ ದತ್ತ ಭಾಯ್ ಕ್ಯಾರೆಕ್ಟರ್‌ನ ಸಾಯಿಸಲಾಗಿದೆ. ಅಂತಿಮ ಸಂಚಿಕೆಗಳ ಶೂಟಿಂಗ್ ಸಹ ಮುಗಿದಿದೆ ಎನ್ನಲಾಗಿದೆ. ಈ ಮೂಲಕ ವಿಜಯ್ ಸೂರ್ಯ - ಅರ್ಪಿತಾ ಮೋಹಿತೆ ನಟನೆಯ ದೃಷ್ಟಿಬೊಟ್ಟು ಧಾರಾವಾಹಿಗೆ ಶುಭಂ ಬೋರ್ಡ್ ಬೀಳುವುದು ಪಕ್ಕಾ.
Amruthadhare Serial: ರೋಚಕ ಘಟ್ಟದತ್ತ ಅಮೃತಧಾರೆ: ಕೊನೆಗೂ ಗೌತಮ್ಗೆ ಸಿಕ್ಕೇ ಬಿಟ್ಟಳು ಭೂಮಿಕಾ