ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raj B Shetty Interview: ಸು ಫ್ರಮ್‌ ಸೋ ಗೆಲ್ಲೋ ಬಗ್ಗೆ ಅನುಮಾನವೇ ಇರಲಿಲ್ಲ

ಬೆಳಗಾವಿಯಂಥ ಪ್ರದೇಶದಲ್ಲೂ ಈ ದಕ್ಷಿಣ ಕನ್ನಡ ಸೊಗಡಿನ ಚಿತ್ರ ಹೌಸ್ ಫುಲ್ ಆಗುತ್ತಿದೆ. ಇದೀಗ ಕತಾರ್, ಯುಎಸ್‌ಎ, ಕೆನಡಾ, ಜರ್ಮನಿ. ಯುಎಇ, ಓಮಾನ್, ಬಹರೈನ್‌ಗಳಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳಿಗೆ ಆನ್ ಡಿಮ್ಯಾಂಡ್ ವೇದಿಕೆ ಸಿದ್ಧವಾಗಿದೆ. ಮಲಯಾಳಂ ಆವೃತ್ತಿ ಕೇರಳಾದ್ಯಂತ ಆಗ ಒಂದಕ್ಕೆ ತೆರೆ ಕಾಣಲಿದ್ದು, ಅದರ ಪೇಯ್ಡ ಪ್ರೀಮಿಯರ್ ಕೂಡ ಯಶಸ್ವಿಯಾಗಿದೆ.

ಸು ಫ್ರಮ್‌ ಸೋ ಗೆಲ್ಲೋ ಬಗ್ಗೆ ಅನುಮಾನವೇ ಇರಲಿಲ್ಲ

ವಿಶ್ವವಾಣಿ ಸಂದರ್ಶನ : ನವೀನ್‌ ಸಾಗರ್

ನೀರಸ ವಾತಾವರಣದಲ್ಲಿ ಸೊರಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಅಚ್ಚರಿಯ ರೀತಿಯಲ್ಲಿ ಸಂಜೀವಿನಿ ಸಿಕ್ಕಿದೆ. ಸೊ ಫ್ರಮ್ ಸೋ ಎಂಬ ವಿಚಿತ್ರ ಹೆಸರಿನ ಚಿತ್ರ ಸದ್ದಿಲ್ಲದೇ ಬಂದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿ ಹಣ ಬಾಚುತ್ತಿದೆ.

ರಾಜ್ ಬಿ ಶೆಟ್ಟಿ ಸಹನಿರ್ಮಾಣದ ಜೆ.ಪಿ. ತುಮಿನಾಡು ನಿರ್ದೇಶನದ ಸು ಫ್ರಮ್ ಸೋ ಇದೀಗ ಕನ್ನಡ ಚಿತ್ರರಂಗದ ಆಲ್ ಟೈಮ್ ಬಿಗ್ ಹಿಟ್‌ಗಳ ಪಟ್ಟಿಗೆ ಸೇರುವ ಹಾದಿಯಲ್ಲಿ ಭರದಿಂದ ಸಾಗುತ್ತಿದೆ. ಕರ್ನಾಟಕದ ಕಲೆಕ್ಷನ್ ಭರಾಟೆ ನೋಡಿದರೆ ಕಾಂತಾರದ ದಾಖಲೆಯನ್ನೂ ಸರಿಗಟ್ಟುವಂತೆ ಕಾಣುತ್ತಿದೆ.

ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಗ್ರಾಫ್ ಮತ್ತು ಶೋಗಳ ಸಂಖ್ಯೆ ಎತ್ತರೆತ್ತರಕ್ಕೆ ಜಿಗಿಯುತ್ತಿದೆ. ಬುಕ್ ಮೈ ಶೋದಲ್ಲಿ ಪ್ರತಿ ಗಂಟೆಗೆ ಸರಾಸರಿ ಐದೂವರೆ ಸಾವಿರ ಟಿಕೆಟ್‌ಗಳು ಬಿಕರಿಯಾಗುತ್ತಿವೆ. ಬಿಡುಗಡೆ ದಿನ ಕೇವಲ ಮೂವತ್ತೈದು, ನಲವತ್ತು ಶೋಗಳಿದ್ದ ಸಿನಿಮಾ ಇಂದು ನಾಲ್ಕು ನೂರಕ್ಕೂ ಹೆಚ್ಚು ಪ್ರದರ್ಶನ ನೀಡುತ್ತಿದೆ. ಪ್ರೇಕ್ಷಕರ ಡಿಮ್ಯಾಂಡ್ ಪೂರೈಸಲು ಸ್ಕ್ರೀನ್‌ಗಳ ಸಂಖ್ಯೆ ಸಾಲದಾಗಿದೆ. ಪ್ರತಿ ಮಾಲ್ ಗಳಲ್ಲೂ ಸು ಫ್ರಮ್ ಸೋ ಚಿತ್ರಕ್ಕೋಸ್ಕರ ನೂಕು ನುಗ್ಗಲಾಗುತ್ತಿದೆ.

ಬೆಳಗಾವಿಯಂಥ ಪ್ರದೇಶದಲ್ಲೂ ಈ ದಕ್ಷಿಣ ಕನ್ನಡ ಸೊಗಡಿನ ಚಿತ್ರ ಹೌಸ್ ಫುಲ್ ಆಗುತ್ತಿದೆ. ಇದೀಗ ಕತಾರ್, ಯುಎಸ್‌ಎ, ಕೆನಡಾ, ಜರ್ಮನಿ. ಯುಎಇ, ಓಮಾನ್, ಬಹರೈನ್‌ಗಳಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳಿಗೆ ಆನ್ ಡಿಮ್ಯಾಂಡ್ ವೇದಿಕೆ ಸಿದ್ಧವಾಗಿದೆ. ಮಲಯಾಳಂ ಆವೃತ್ತಿ ಕೇರಳಾ ದ್ಯಂತ ಆಗ ಒಂದಕ್ಕೆ ತೆರೆ ಕಾಣಲಿದ್ದು, ಅದರ ಪೇಯ್ಡ ಪ್ರೀಮಿಯರ್ ಕೂಡ ಯಶಸ್ವಿಯಾಗಿದೆ.

ಇದನ್ನೂ ಓದಿ: Naveen Sagar Column: ದಂಡಕ್ಕೆ ದಾಳಿಗೆ ಹೆದರದ ರಣತುಂಗ ಎಂಬ ರಣಧೀರ !

ಇತ್ತ ಸಿನಿಮಾ ಅಬ್ಬರಿಸ್ತಾ ಇದ್ದರೆ, ರಾಜ್ ಬಿ. ಶೆಟ್ಟಿ ಮಾತ್ರ ಎಂದಿನಂತೆ ಸ್ಥಿತಪ್ರಜ್ಞರಂತೆ ಕೂತಿದ್ದರು. ಈ ಸಂಭ್ರಮವನ್ನು ಮುಂಬೈಯಲ್ಲಿ ಒಬ್ಬರೇ ಕೂತು ನಿರಾಳತೆಯಿಂದ ಗಮನಿಸುತ್ತಿದ್ದರು. ತಮ್ಮೊಂದಿಗೆ ಬಿಡುಗಡೆಯಾದ ಇನ್ನೊಂದು ಕನ್ನಡ ಚಿತ್ರಕ್ಕೆ ಸಪೋರ್ಟ್ ಬೇಡುತ್ತಿದ್ದರು. ಇದು ರಾಜ್ ಶೆಟ್ಟಿ! ವಿಶ್ವವಾಣಿಯೊಂದಿಗೆ ರಾಜ್ ಮಾತಿಗಿಳಿದಿದ್ದು ಹೀಗೆ.

ವಿಶ್ವವಾಣಿ: ಚಿತ್ರ ಅದ್ಭುತವಾದ ಯಶಸ್ಸು ಕಂಡಿದೆ. ಅಭಿನಂದನೆಗಳು.

ರಾಜ್ ಬಿ.ಶೆಟ್ಟಿ: ಥ್ಯಾಂಕ್ಯೂ. ಈ ಚಿತ್ರ ಬಂಡವಾಳ ವಾಪಸ್ ತಂದು ಕೊಡುತ್ತೆ. ಮೇಲೆ ನಿರ್ಮಾಪಕರಿಗೆ ಒಂದಷ್ಟು ಹಣವಾಗುತ್ತೆ ಅಂತ ಖಾತ್ರಿ ಇತ್ತು. ನಮಗೆ ಯಾವ ಅನುಮಾನವೂ ಇರಲಿಲ್ಲ. ಆದರೆ ಈ ತರದ ಕ್ರೇಜ್ ಸೃಷ್ಟಿಯಾಗಬಹುದು ಅನ್ನೋ ಊಹೆ ಕೂಡ ಇರಲಿಲ್ಲ. ಜನಪ್ರವಾಹ ಅಂದರೂ ತಪ್ಪಿಲ್ಲ. ಎಷ್ಟು ಥಿಯೇಟರ್ ಸಿಕ್ಕರೂ ಸಾಕಾಗ್ತಾ ಇಲ್ಲ. ಸಮಾಧಾನದ ಸಂಗತಿ ಏನೆಂದರೆ, ನಾವು ಕೇಳಿದಂತೆಲ್ಲ ಸ್ಕ್ರೀನ್ ಹೆಚ್ಚಳ ಆಗ್ತಾ ಇದೆ.

ವಿಶ್ವವಾಣಿ: ಕನ್ನಡ ಚಿತ್ರಗಳಿಗೆ ಪ್ರೇಕ್ಷಕರೇ ಇಲ್ಲ, ಜನ ಥಿಯೇಟರಿಗೆ ಬರೋದಿಲ್ಲ ಅನ್ನೋ ಮಾತಿಗೆ ಈ ಯಶಸ್ಸು ಅಪವಾದವಾಯಿತಲ್ಲ?

ರಾಜ್ ಬಿ ಶೆಟ್ಟಿ: ನಾವು ಜನ ಥಿಯೇಟರ್‌ಗೆ ಬಂದು ಸಂಭ್ರಮಿಸುವಂಥ ಸಿನಿಮಾ ಕೊಡುವುದರಲ್ಲಿ ಸೋತಿದ್ದೇವೆ. ಅಂಥ ಸಿನಿಮಾ ಬಂದಾಗಲೆಲ್ಲ ಪ್ರೇಕ್ಷಕ ಥಿಯೇಟರ್‌ಗೆ ಬಂದು ಗೆಲ್ಲಿಸಿದ್ದಾನೆ. ಅವನನ್ನು ದೂರುವುದರಲ್ಲಿ ಅರ್ಥವೇ ಇಲ್ಲ.

ವಿಶ್ವವಾಣಿ: ನಿಮಗೆ ಈ ಗೆಲುವು ಎಷ್ಟು ಮುಖ್ಯವಾಗಿತ್ತು?

ರಾಜ್ ಬಿ ಶೆಟ್ಟಿ: ವೈಯಕ್ತಿಕವಾಗಿ ನನ್ನ ಹಿಂದಿನ ಎರಡು ಚಿತ್ರಗಳು ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿದ್ದರೂ, ಸಾರ್ವತ್ರಿಕವಾಗಿ ಗೆದ್ದಿರಲಿಲ್ಲ. ನಿರ್ಮಾಪಕರಿಗೂ ದೊಡ್ಡ ಲಾಭ ತಂದುಕೊಟ್ಟಿ ರಲಿಲ್ಲ. ಈ ಚಿತ್ರ ಎಲ್ಲ ರೀತಿಯಲ್ಲಿ ಪ್ರೇಕ್ಷಕರನ್ನು ಸಂತುಷ್ಟಗೊ ಳಿಸಿದೆ. ನಿರ್ಮಾಪಕರೂ ಖುಷಿಯಾಗಿದ್ದಾರೆ. ಇದು ನನ್ನ ಗೆಲುವು ಕೂಡ ಎಂದು ಭಾವಿಸುತ್ತೇನೆ.

ವಿಶ್ವವಾಣಿ: ಇಂದಿನ ಸಂಪ್ರದಾಯವಾಗಿ ಹೋಗಿರೋ ಸೆಲೆಬ್ರಿಟಿ ಶೋ, ಬೈಟ್‌ಗಳು, ಟ್ರೋಲ್ ಪೇಜ್ ಪ್ರೊಮೋಷನ್‌ಗಳು ಇದ್ಯಾವುದೂ ಇಲ್ಲದೇ ಸಿನಿಮಾ ಗೆದ್ದಿದೆಯಲ್ಲ?

ರಾಜ್ ಬಿ ಶೆಟ್ಟಿ: ಜನಕ್ಕೆ ಇಷ್ಟ ಆಗುವಂಥ ಸಿನಿಮಾ ಮಾಡಿದರೆ ಅದ್ಯಾವುದೂ ಬೇಕಾಗುವುದಿಲ್ಲ. ರಾಜ್ಯದ ಆಯ್ದ ಊರುಗಳಲ್ಲಿ ಮಾಡಿದ ಪೇಡ್ ಪ್ರೀಮಿಯರ್ ಶೋಗಳನ್ನು ಮಾಡಿದೆವು. ಹಣ ಕೊಟ್ಟು ಚಿತ್ರ ನೋಡಿದ ಪ್ರೇಕ್ಷಕರೇ ಸಿನಿಮಾಗೆ ಪ್ರಚಾರ ಕೊಟ್ಟು ಗೆಲ್ಲಿಸಿ ಬಿಟ್ಟರು. ನಮ್ಮ ಸಿನಿಮಾದ ಪ್ರಚಾರಕರ್ತರು ಪ್ರೇಕ್ಷಕರೇ.

ವಿಶ್ವವಾಣಿ: ಈ ಚಿತ್ರ ಇಂಡಸ್ಟ್ರಿಯ ದಾಖಲೆಗಳನ್ನು ಮುರಿಯುವಂತೆ ಕಾಣುತ್ತಿದೆ. ಕಾಂತಾರದ ಕಲೆಕ್ಷನ್ ಬೀಟ್ ಮಾಡುತ್ತಿದೆಯೆಂಬ ಮಾತು ಕೇಳಿ ಬರುತ್ತಿದೆಯಲ್ಲ?

ರಾಜ್ ಬಿ ಶೆಟ್ಟಿ: ಇದು ಆ ಮಾದರಿಯ ಸ್ಪರ್ಧೆ ಅಲ್ಲವೇ ಅಲ್ಲ. ನಮ್ಮದೇ ಚಿತ್ರಗಳೊಂದಿಗೆ ನಾವು ಸ್ಪರ್ಧೆ ಮಾಡುವುದ್ಯಾಕೆ? ಇದನ್ನು ಒಳ್ಳೆಯ ಚಿತ್ರವೊಂದರ ಗೆಲುವು ಅಂತಷ್ಟೇ ನೋಡಬೇಕು. ಇಂಡಸ್ಟ್ರಿಗೆ ಒಂದು ತಾಜಾತನ ಸಿಕ್ಕಿರುವುದಕ್ಕೆ ಸಂತಸ ಪಡಬೇಕು. ಸರಳ ಕಂಟೆಂಟ್ ಮತ್ತು ಜನರಿಗೆ ಕನೆP ಆಗುವ ಚಿತ್ರಗಳಿಗೆ ಇಲ್ಲಿ ಜಾಗವಿದೆ ಎಂಬುದು ಅರ್ಥವಾಗಬೇಕು. ಅಷ್ಟೆ.

ವಿಶ್ವವಾಣಿ: ಈ ಚಿತ್ರದಲ್ಲಿ ನಿಮ್ಮ ಪಾತ್ರವಿರುವುದು ಗೋಪ್ಯವಾಗಿತ್ತು. ಈಗ ಬಹಿರಂಗವಾಗಿದೆ. ಹೇಗೆ ಒಪ್ಪಿದಿರಿ ಇಂಥ ಪಾತ್ರವನ್ನು?

ರಾಜ್ ಬಿ ಶೆಟ್ಟಿ: ಚಿತ್ರ ಗೆಲ್ಲಬೇಕು ಅಂದರೆ ಅದಕ್ಕೆ ಬಲ ಕೊಡುವ ಯಾವ ಪಾತ್ರ ಮಾಡಲೂ ನಾನು ಸಿದ್ಧ. ನಾನು ಮೊದಲ ಚಿತ್ರದಿಂದ ಇಂದಿನ ತನಕ ಇಮೇಜಿನ ಹಂಗಿಗೆ ಬಿದ್ದಿಲ್ಲ. ಮುಂದೆಯೂ ಬೀಳುವುದಿಲ್ಲ. ನಿಜ, ಈ ಥರ ಕ್ಯಾರಿಕೇಚರ್ ಥರ ಪಾತ್ರ ಮಾಡಲು ಸುಮಾರಾಗಿ ಯಾರೂ ಒಪ್ಪುವು ದಿಲ್ಲ. ಆದರೆ ನನ್ನನ್ನು ಅದೇ ವಿಶೇಷವಾಗಿ ಸೆಳೆಯುತ್ತದೆ. ಆ ಪಾತ್ರವನ್ನು ಜನ ಅಪಾರವಾಗಿ ಮೆಚ್ಚಿದ್ದಾರೆ. ಇನ್ನೇನು ಬೇಕು?

ವಿಶ್ವವಾಣಿ: ಸು ಫ್ರಮ್ ಸೋ ಗೆಲುವಿನಿಂದ ಇಂಥ ಚಿತ್ರಗಳ ಟ್ರೆಂಡ್ ಶುರುವಾಗಬಹುದಾ?

ರಾಜ್ ಬಿ ಶೆಟ್ಟಿ: ಇದು ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಅಂತ ನಾನು ಹೇಳುವುದಿಲ್ಲ. ಆದರೆ ಗೆದ್ದಾಗ ಟ್ರೆಂಡ್ ಆಗುವುದು, ಅದನ್ನು ಫಾಲೋ ಮಾಡುವುದು ಸರ್ವೇಸಾಮಾನ್ಯ. ನಾನು ವೈಯಕ್ತಿಕವಾಗಿ ಮತ್ತೆ ಹೊಸತನ, ಹೊಸ ಪ್ರಯೋಗಕ್ಕೆ ಮುಂದಾಗುತ್ತೇನೆ.

ವಿಶ್ವವಾಣಿ: ಈ ಸಿನಿಮಾದ ಗೆಲುವಿಗೆ ಕಾರಣ ಏನು?

ರಾಜ್ ಬಿ ಶೆಟ್ಟಿ: ಪ್ರತಿ ಪಾತ್ರಗಳೂ ಪ್ರೇಕ್ಷಕನ ದೈನದಿಂದ ಬದುಕಿನಲ್ಲಿ ಇರುವ ಒಬ್ಬ ವ್ಯಕ್ತಿಯನ್ನು ಹೋಲುತ್ತದೆ. ಮಾತುಗಳು, ಹಾಸ್ಯ ಎಲ್ಲವೂ ಸಹಜವಾಗಿವೆ. ತೂರಿಕೆ ಹೇರಿಕೆಯ ಹಾಸ್ಯವಿಲ್ಲ. ಪ್ರೇಕ್ಷಕ ಸೀಟಿನಿಂದ ಸೀದಾ ಸಿನಿಮಾದೊಳಗೆ ಬಂದು ಸೇರಿಕೊಳ್ಳುತ್ತಾನೆ. ಮೊಬೈಲ್ ಎಂಬ ಮಾಯಾಂಗನೆ ಇರೋದನ್ನೂ ಮರೆತು ಸಿನಿಮಾದಲ್ಲಿ ಮುಳುಗುತ್ತಾನೆ. ಇದು ಸಿನಿಮಾದ ಗೆಲುವು.

ವಿಶ್ವವಾಣಿ: ಇಂಥ ಸರಳ ಕಥೆ ಹಿಂದೆ ಬಂದೇ ಇಲ್ಲವಾ?

ರಾಜ್ ಬಿ ಶೆಟ್ಟಿ: ಖಂಡಿತ ಬಂದಿದೆ. ಆದರೆ ಇದು ಕೇವಲ ಹಾಸ್ಯ ಚಿತ್ರವಲ್ಲ, ಹಾರರ್ ಚಿತ್ರವೂ ಅಲ್ಲ. ಕಥೆಯಲ್ಲಿ ಹಲವು ಲೇಯರ್‌ಗಳಿವೆ. ಭಾವುಕತೆ ಇದೆ. ಸರಳವಾಗಿ ಕಾಣುವ ಪಾತ್ರಗಳಲ್ಲಿ ಸಂಕೀರ್ಣತೆ ಇದೆ. ಎಲ್ಲವನ್ನೂ ಪ್ರೇಕ್ಷಕ ತನ್ನದೇ ರೀತಿಯಲ್ಲಿ ಗ್ರಹಿಸಿ ಅನುಭವಿಸುತ್ತಿದ್ದಾನೆ.

ವಿಶ್ವವಾಣಿ: ಈ ಯಶಸ್ಸು ಎಲ್ಲಿ ಹೋಗಿ ಮುಟ್ಟಲಿದೆ?

ಗೊತ್ತಿಲ್ಲ. ಈಗಾಗಲೇ ಮಲಯಾಳಂಗೆ ಡಬ್ ಆಗಿ ತೆರೆ ಕಾಣುತ್ತಿದೆ. ಕನ್ನಡ ಆವೃತ್ತಿ ದೇಶಾದ್ಯಂತ ಬೇಡಿಕೆ ಸೃಷ್ಟಿಸಿಕೊಂಡಿದೆ. ನಮ್ಮ ಕೆಲಸ ಮುಗಿದಿದೆ. ನಾವು ಈ ಯಶಸ್ಸಿಂದ ಮೈ ಮರೆಯೋ ಬದಲು, ಯಶಸ್ಸನ್ನು ಮರೆತು ಮತ್ತೆ ಶೂನ್ಯದಿಂದ ಎಂಬಂತೆ ಹೊಸ ಚಿತ್ರದ ಕಡೆ, ಹೊಸ ಕಥೆಯ ಕಡೆ ಹೊರಳಬೇಕಿದೆ.

ವಿಶ್ವವಾಣಿ: ಸ್ವಾತಿ ಮುತ್ತಿನ ಮಳೆಹನಿ, ರೂಪಾಂತರ ಈ ಚಿತ್ರಗಳನ್ನು ನೀವು ಸೆಲೆಕ್ಟಿವ್ ಆಡಿಯೆನ್ಸ್ ಗೆ ಮಾಡಿದ್ದಿರಿ. ಓಟಿಟಿ ಗಮನದಲ್ಲಿಟ್ಟುಕೊಂಡು ಮಾಡಿದ್ದಿರಿ. ಇದು ಕೂಡ ಅದೇ ಲೆಕ್ಕಾಚಾರ ದಲ್ಲಿತ್ತಾ?

ರಾಜ್ ಬಿ ಶೆಟ್ಟಿ: ನಮಗೆ ನಮ್ಮ ಚಿತ್ರದ ಪ್ರೇಕ್ಷಕ ವರ್ಗ ಯಾವುದು ಎಂಬ ಕ್ಲಾರಿಟಿ ಇರಬೇಕು. ಆಗ ಮಾತ್ರವೇ ನಮಗೆ ಗೆಲುವು ಮತ್ತು ಸೋಲುಗಳ ಹಿಂದಿನ ಕಾರಣ ಗೊತ್ತಾಗುತ್ತದೆ. ಪ್ರೇಕ್ಷಕರನ್ನು ಮಿಸ್ ಲೀಡ್ ಮಾಡಿ ನಂಬಿಕೆ ಕಳೆದುಕೊಂಡರೆ, ಮತ್ತೊಮ್ಮೆ ಆತ ಒಳ್ಳೆಯ ಚಿತ್ರ ಕೊಟ್ಟರೂ ನಂಬಿ ಬರುವುದಿಲ್ಲ. ಈ ಚಿತ್ರ ಪ್ರತಿ ಪ್ರೇಕ್ಷಕನಿಗೂ ಕನೆಕ್ಟ್ ಆಗುವುದು ಖಚಿತವಿತ್ತು. ನಂಬಿಕೆ ನಿಜವಾಗಿದೆ.