T20I Rankings: ಜೀವನಶ್ರೇಷ್ಠ ಶ್ರೇಯಾಂಕ ಪಡೆದ ತಿಲಕ್ ವರ್ಮಾ, ವರುಣ್ ಚಕ್ರವರ್ತಿ
ಸದ್ಯ 832 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ತಿಲಕ್ ವರ್ಮಾ(Tilak Varma) ಅಗ್ರಸ್ಥಾನಿ ಟ್ರಾವಿಸ್ ಹೆಡ್(855) ಅವರಿಗಿಂತ ಕೇವಲ 23 ಅಂಕ ಹಿಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಉಳಿದಿರುವ ಎರಡು ಪಂದ್ಯಗಳಲ್ಲಿ ಉತ್ತಮ ರನ್ ಕಲೆ ಹಾಕಿದರೆ ಅಗ್ರಸ್ಥಾನಕ್ಕೇರುವ ಸುವರ್ಣ ಅವಕಾಶವಿದೆ.

Varun Chakaravarthy

ದುಬೈ: ಟೀಮ್ ಇಂಡಿಯಾದ ಯುವ ಸ್ಫೋಟಕ ಬ್ಯಾಟರ್ ತಿಲಕ್ ವರ್ಮಾ(832) ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ನೂತನ ಟಿ20 ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ(T20I Rankings) ಜೀವನಶ್ರೇಷ್ಠ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಿಲಕ್ ವರ್ಮಾ(Tilak Varma) 2ನೇ ಸ್ಥಾನ ಪಡೆದರೆ, ಬೌಲಿಂಗ್ ಶ್ರೇಯಾಂಕದಲ್ಲಿ ವರುಣ್ ಚಕ್ರವರ್ತಿ(Varun chakaravarthy) ಬರೋಬ್ಬರಿ 25 ಸ್ಥಾನಗಳ ಜಿಗಿತದೊಂದಿಗೆ 5ನೇ ಸ್ಥಾನಕ್ಕೇರಿದ್ದಾರೆ.
ಈ ಹಿಂದೆ 3ನೇ ಶ್ರೇಯಾಂಕವನ್ನು ಅಲಂಕರಿಸಿದ್ದ ತಿಲಕ್, ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಯಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದರು. 55 ಎಸೆತಗಳಲ್ಲಿ ಅಜೇಯ 72 ರನ್ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದು ಅವರ ಶ್ರೇಯಾಂಕದಲ್ಲಿ ಪ್ರಗತಿಗೆ ಪ್ರಮುಖ ಕಾರಣ.
ಸದ್ಯ 832 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ತಿಲಕ್ ವರ್ಮಾ ಅಗ್ರಸ್ಥಾನಿ ಟ್ರಾವಿಸ್ ಹೆಡ್(855) ಅವರಿಗಿಂತ ಕೇವಲ 23 ಅಂಕ ಹಿಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಉಳಿದಿರುವ ಎರಡು ಪಂದ್ಯಗಳಲ್ಲಿ ಉತ್ತಮ ರನ್ ಕಲೆ ಹಾಕಿದರೆ ಅಗ್ರಸ್ಥಾನಕ್ಕೇರುವ ಸುವರ್ಣ ಅವಕಾಶವಿದೆ.
ಸರಿ ಸುಮಾರು 2 ವರ್ಷಗಳ ತನಕ ಅಗ್ರಸ್ಥಾನ ಕಾಯ್ದುಕೊಂಡಿದ್ದ ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿದ್ದಾರೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ 9 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು ಮೂವರು ಬ್ಯಾಟರ್‌ಗಳು ಟಾಪ್-10 ನಲ್ಲಿದ್ದಾರೆ.
England veteran re-claims the top spot in the Men's T20I Bowling Rankings following his exploits in India 👌
— ICC (@ICC) January 29, 2025
More ⬇https://t.co/dPrG1rTQ7R
ಬೌಲಿಂಗ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಆದೀಲ್ ರಶೀದ್ ಒಂದು ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಈ ಹಿಂದೆ ಮೊದಲ ಸ್ಥಾನಿಯಾಗಿದ್ದ ವೆಸ್ಟ್ ಇಂಡೀಸ್‌ನ ಅಕೀಲ್ ಹೊಸೈನ್ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ.
ಟಾಪ್-10 ಬ್ಯಾಟರ್‌ಗಳು
ಟ್ರಾವಿಸ್ ಹೆಡ್
ತಿಲಕ್ ವರ್ಮಾ
ಫಿಲ್ ಸಾಲ್ಟ್
ಸೂರ್ಯಕುಮಾರ್ ಯಾದವ್
ಜಾಸ್ ಬಟ್ಲರ್
ಬಾಬರ್ ಅಜಂ
ಪಾಥುಮ್ ನಿಸ್ಸಂಕ
ಮೊಹಮ್ಮದ್ ರಿಜ್ವಾನ್
ಯಶಸ್ವಿ ಜೈಸ್ವಾಲ್
ಕುಸಲ್ ಪೆರೆರಾ