ದುಲೀಪ್ ಟ್ರೋಫಿ: ದಕ್ಷಿಣ ವಲಯ ತಂಡಕ್ಕೆ ತಿಲಕ್ ವರ್ಮಾ ನಾಯಕ
ಭಾರತ ಮತ್ತು ಕರ್ನಾಟಕದ ವೇಗಿ ವೈಶಾಕ್ ವಿಜಯ್‌ಕುಮಾರ್ ದಕ್ಷಿಣ ವಲಯದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಏತನ್ಮಧ್ಯೆ, ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ 516 ರನ್‌ಗಳೊಂದಿಗೆ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ ಆರ್. ಸ್ಮರನ್ ಅವರನ್ನು ಸ್ಟ್ಯಾಂಡ್‌ಬೈ ಆಗಿ ಸೇರಿಸಿಕೊಳ್ಳಲಾಗಿದೆ.


ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ದೇಶೀಯ ಕ್ರಿಕೆಟ್ ಟೂರ್ನಿಯಾದ ದುಲೀಪ್ ಟ್ರೋಫಿ(Duleep Trophy)ಯಲ್ಲಿ ಭಾರತದ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ(Tilak Varma) ಅವರು ದಕ್ಷಿಣ ವಲಯ(South Zone) ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಪರ ನಾಲ್ಕು ಏಕದಿನ ಮತ್ತು 25 ಟಿ20ಗಳನ್ನು ಆಡಿರುವ 22 ವರ್ಷದ ತಿಲಕ್ ಇತ್ತೀಚೆಗೆ ಹ್ಯಾಂಪ್‌ಶೈರ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 100, 56, 47 ಮತ್ತು 112 ರನ್ ಗಳಿಸಿದ್ದರು.
ದಕ್ಷಿಣ ವಲಯ ತಂಡದಲ್ಲಿ ಪಡಿಕ್ಕಲ್, ಸಾಯಿ ಕಿಶೋರ್ ಸೇರಿದಂತೆ ರಣಜಿ ಟ್ರೋಫಿ ಫೈನಲ್ ಪ್ರದರ್ಶನದ ಆಧಾರದಲ್ಲಿ ನಾಲ್ವರು ಕೇರಳ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಭಾರತ ಮತ್ತು ಕರ್ನಾಟಕದ ವೇಗಿ ವೈಶಾಕ್ ವಿಜಯ್‌ಕುಮಾರ್ ದಕ್ಷಿಣ ವಲಯದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಏತನ್ಮಧ್ಯೆ, ಕಳೆದ ಋತುವಿನ ರಣಜಿ ಟ್ರೋಫಿಯಲ್ಲಿ 516 ರನ್‌ಗಳೊಂದಿಗೆ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ ಆರ್. ಸ್ಮರನ್ ಅವರನ್ನು ಸ್ಟ್ಯಾಂಡ್‌ಬೈ ಆಗಿ ಸೇರಿಸಿಕೊಳ್ಳಲಾಗಿದೆ.
ಈ ವರ್ಷ, ದುಲೀಪ್ ಟ್ರೋಫಿ ಆರು ತಂಡಗಳ ನಡುವೆ ವಲಯ ಸ್ವರೂಪಕ್ಕೆ ಮರಳಲಿದೆ. ಈ ಹಿಂದೆ ನಡೆಯುತ್ತಿದ್ದ ಭಾರತ ಎ, ಬಿ, ಸಿ ಮತ್ತು ಡಿ ಸ್ವರೂಪದಿಂದ ಭಿನ್ನವಾಗಿದೆ. ಎ, ಬಿ, ಸಿ ಮತ್ತು ಡಿ ಸ್ವರೂಪದಲ್ಲಿ ಪಂದ್ಯಾವಳಿ ನಡೆದಾಗ ಹಿರಿಯ ರಾಷ್ಟ್ರೀಯ ಆಯ್ಕೆದಾರರು ತಂಡಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈ ಬಾರಿ ತಂಡಗಳನ್ನು ಆಯಾ ವಲಯ ಆಯ್ಕೆದಾರರು ಆಯ್ಕೆ ಮಾಡುತ್ತಾರೆ. ನಾಲ್ಕು ದಿನಗಳ ಪಂದ್ಯಾವಳಿ ಆಗಸ್ಟ್ 28 ರಿಂದ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಉತ್ತರ ವಲಯವು ಪೂರ್ವ ವಲಯವನ್ನು ಎದುರಿಸಿದರೆ, ಮಧ್ಯ ವಲಯವು ಈಶಾನ್ಯ ವಲಯವನ್ನು ಎದುರಿಸಲಿದೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯಗಳು ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದಿವೆ.
ದಕ್ಷಿಣ ವಲಯ ತಂಡ
ತಿಲಕ್ ವರ್ಮ (ನಾಯಕ), ಮೊಹಮ್ಮದ್ ಅಜರುದ್ದೀನ್ (ಉಪನಾಯಕ), ತನ್ಮಯ್ ಅಗರ್ವಾಲ್, ದೇವದತ್ತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣ ಜಗದೀಸನ್, ಟಿ. ವಿಜಯ್, ಆರ್ ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವೈಶಾಕ್ ನಿಧೆ ವಿಜಯ್, ಆರ್‌ಎಂಡಿ ಸಿಂಗ್, ಸ್ನೇಹಲ್ ಕೌತಾಂಕರ್.
ಇದನ್ನೂ ಓದಿ Shubman Gill: ಗಿಲ್ ಶತಕದ ಆರ್ಭಟಕ್ಕೆ ಹಲವು ದಿಗ್ಗಜರ ದಾಖಲೆ ಪತನ