TRAI: ಪ್ರತೀ ತಿಂಗಳು ರಿಚಾರ್ಜ್ ಮಾಡದೇ ನಿಮ್ಮ ಸಿಮ್ ಅನ್ನು ಆಕ್ಟಿವ್ ಆಗಿರಿಸುವುದು ಹೇಗೆ ಗೊತ್ತಾ..?
ಟ್ರಾಯ್ ನೂತನವಾಗಿ ಜಾರಿಗೆ ತಂದಿರುವ ಈ ನಿಯಮಾವಳಿ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ವರದಾನವಾಗಲಿದೆ. ಈ ಯೊಜನೆಯು ಗ್ರಾಹಕರಿಗೆ ತಮ್ಮ ಕನೆಕ್ಷನ್ ನಲ್ಲಿ ಕನಿಷ್ಟ 20 ರೂಪಾಯಿಗಳ ಬ್ಯಾಲೆನ್ಸ್ ಕಾಪಾಡಿಕೊಳ್ಳುವ ಮೂಲಕ ತಮ್ಮ ಸಿಮ್ ನಿಷ್ಕ್ರಿಯಗೊಳ್ಳದಂತೆ ತಡೆಯಬಹುದಾಗಿರುತ್ತದೆ. ಈ ಹಿಂದೆ ತಮ್ಮ ಸಿಮ್ ಅನ್ನು ಆಕ್ಷಿವ್ ಆಗಿರಿಸಿಕೊಳ್ಳಲು ಗ್ರಾಹಕರು ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ರಿಚಾರ್ಜ್ ಮಾಡುವುದು ಕಡ್ಡಾಯವಾಗಿತ್ತು.

ಸಾಂದರ್ಭಿಕ ಚಿತ್ರ

ನವದೆಹಲಿ: ಇದು ಇಂಟರ್ನೆಟ್ (Internet) ಯುಗ, ಡಾಟಾ (Data) ಇಲ್ಲದೆ ಡೈಲಿ ಲೈಫ್ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಮೊಬೈಲ್ ನಲ್ಲಿ (Mobile) ಸಿಮ್ ಕನೆಕ್ಷನ್ (Sim Connection) ಯಾವುದೇ ಇರಲಿ ಅದಕ್ಕೆ ಕಾಲ ಕಾಲಕ್ಕೆ ರಿಚಾರ್ಜ್ (Recharge) ಮಾಡೊದೇ ಒಂದು ದೊಡ್ಡ ತಲೆನೋವು. ಆದರೆ ಇನ್ನು ಕೆಲವರಿಗೆ ತಮ್ಮಲ್ಲಿರುವ ಎರಡಕ್ಕಿಂತ ಜಾಸ್ತಿ ಸಿಮ್‌ಗಳಲ್ಲಿ ಒಂದು ಸಿಮ್ ಫುಲ್ ಆಕ್ಟಿವ್ ಇದ್ರೆ, ಉಳಿದ ಸಿಮ್ ಗಳು ಕೇವಲ ಕಾಲ್ ಗೆ ಅಥವಾ ಮೆಸೇಜ್ ಗಳಿಗೆ ಮಾತ್ರವೇ ಇರುತ್ತದೆ. ಆದರೆ ಇತ್ತೀಚಿನವರಗೆ ನಮ್ಮಲ್ಲಿರುವ ಸಿಮ್ ಗಳು ಜೀವಂತ ಇರ್ಬೇಕಂದಿದ್ರೆ ಅವುಗಳಿಗೆ ರಿಚಾರ್ಜ್ ಮಾಡ್ಸೋದು ಅಗತ್ಯವಾಗಿತ್ತು.
ಆದ್ರೆ ಇದೀಗ ಟ್ರಾಯ್ ನ (TRAI) ಹೊಸ ನಿಯಮವೊಂದು ಕೋಟ್ಯಂತರ ಮೊಬೈಲ್ ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ (TRAI) ಪ್ರಿಪೇಯ್ಡ್ (Pre Paid) ಸಿಮ್ ಕಾರ್ಡ್ ಗಳ ನಿಷ್ಕ್ರಿಯತೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಿರುವ ಮಾರ್ಗದರ್ಶಿ ಸೂತ್ರಗಳೇ ಜಾರಿಯಲ್ಲಿವೆ ಎಂದು ಅದು ಸ್ಪಷ್ಟಪಡಿಸಿದೆ.
ಈ ನಿಯಂತ್ರಕ ಕ್ರಮಗಳು ಕಳೆದ 10 ವರ್ಷಗಳ ಹಿಂದೆ ಜಾರಿಗೆ ಬಂದಿದ್ದು, ಈ ಕ್ರಮಗಳ ಪ್ರಕಾರ ನಿಮ್ಮ ಸಿಮ್ ನಲ್ಲಿ ಕನಿಷ್ಟ ಬ್ಯಾಲೆನ್ಸ್ ಇದ್ದಲ್ಲಿ ಅಂತಹ ಸಿಮ್ ಗಳನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ ಎಂದು ಆ ನಿಯಂತ್ರಕ ಕ್ರಮಗಳು ಹೇಳುತ್ತವೆ.
ಈ ಯೊಜನೆಯು ಗ್ರಾಹಕರಿಗೆ ತಮ್ಮ ಕನೆಕ್ಷನ್ ನಲ್ಲಿ ಕನಿಷ್ಟ 20 ರೂಪಾಯಿಗಳ ಬ್ಯಾಲೆನ್ಸ್ ಕಾಪಾಡಿಕೊಳ್ಳುವ ಮೂಲಕ ತಮ್ಮ ಸಿಮ್ ನಿಷ್ಕ್ರಿಯಗೊಳ್ಳದಂತೆ ತಡೆಯಬಹುದಾಗಿರುತ್ತದೆ. ಈ ಹಿಂದೆ ತಮ್ಮ ಸಿಮ್ ಅನ್ನು ಆಕ್ಷಿವ್ ಆಗಿರಿಸಿಕೊಳ್ಳಲು ಗ್ರಾಹಕರು ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ರಿಚಾರ್ಜ್ ಮಾಡುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಈ ಹೊಸ ನಿಯಮ ಇಂತಹ ನಿಯಮಿತ ರಿಚಾರ್ಜ್ ಗಳನ್ನು ಇಲ್ಲವಾಗಿಸಿದೆ.
ಇದು ಹೇಗೆ ಕೆಲಸ ಮಾಡುತ್ತದೆ..?
- ಒಂದು ವೇಳೆ ನೀವು ನಿಮ್ಮ ಸಿಮ್ ಕಾರ್ಡನ್ನು (ಕರೆ, ಸಂದೇಶ, ಇಂಟರ್ನೆಟ್ ಅಥವಾ ಇತರೇ ಸೇವೆಗಳಿಗೆ ಬಳಸಿಕೊಳ್ಳದಿದ್ದಲ್ಲಿ) 90 ದಿನಗಳವರೆಗೆ ಬಳಸದೇ ಇದ್ದಲ್ಲಿ, ಅಂತಹ ಸಿಮ್ ಗಳು ನಿಷ್ಕ್ರಿಯಗೊಳ್ಳುತ್ತಿತ್ತು.
- ಆದರೆ ಇದೀಗ, ನಿಮ್ಮ ಸಿಮ್ 90 ದಿನಗಳ ಬಳಿಕ ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ನಿಮ್ಮ ಅಕೌಂಟಿನಲ್ಲಿ 20 ರೂಪಾಯಿಗಳಿಗಿಂತ ಹೆಚ್ಚಿದ್ದಲ್ಲಿ 20 ರೂಪಾಯಿ ನಿಮ್ಮ ಅಕೌಂಟಿನಿಂದ ತನ್ನಿಂತಾನೆ ಕಡಿತಗೊಳ್ಳುವ ಮೂಲಕ ನಿಮ್ಮ ನಿಷ್ಕ್ರಿಯಗೊಂಡ ಸಿಮ್ ಮತ್ತೆ 30 ದಿನಗಳವರೆಗೆ ಆಕ್ಟಿವ್ ಆಗಿರುತ್ತದೆ.
- ಈ ವಿಧಾನ ನಿಮ್ಮ ಅಕೌಂಟಿನಲ್ಲಿ ರೂ.20 ಮತ್ತು ಇದಕ್ಕಿಂತ ಹೆಚ್ಚು ಇರುವಲ್ಲಿವರೆಗೆ ಮುಂದುವರಿಯುತ್ತಲೇ ಇರುತ್ತದೆ.
- ಒಂದುವೇಳೆ ನಿಮ್ಮ ಬ್ಯಾಲೆನ್ಸ್ 20 ರೂಪಾಯಿಗಳಿಗಿಂತ ಕಡಿಮೆಯಾದಲ್ಲಿ, ನಿಮ್ಮ ಸಿಮ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.
- ಹೀಗೆ ನಿಷ್ಕ್ರಿಯಗೊಂಡ ನಿಮ್ಮ ಸಿಮ್ ಅನ್ನು ನೀವು 15 ದಿನಗಳೊಳಗೆ 20 ರೂಪಾಯಿಗಳ ರಿಚಾರ್ಜ್ ಮಾಡುವ ಮೂಲಕ ಮತ್ತೆ ಸಕ್ರಿಯಗೊಳಿಸಬಹುದು.
ಇನ್ನೊಂದು ಮುಖ್ಯವಾದ ವಿಷಯವೇನಂದ್ರೆ ಈ ಯೊಜನೆ ಕೇವಲ ಪ್ರಿ ಪೇಯ್ಡ್ ಸಿಮ್ ಗಳಿಗೆ ಮಾತ್ರವೇ ಅನ್ವಯಿಸುತ್ತದೆ.
ಟ್ರಾಯ್ ಜಾರಿಗೆ ತಂದಿರುವ ಈ ಯೋಜನೆ ಬಹಳಷ್ಟು ಜನರಿಗೆ ಪ್ರಯೋಜನಕಾರಿಯಾಗುವ ನಿರಿಕ್ಷೆಯಿದೆ, ಅದರಲ್ಲೂ ತಮ್ಮ ಸಿಮ್ ಅನ್ನು ಆಗಾಗ್ಗೆ ಮತ್ತು ಕೆಲವೊಮ್ಮೆ ಮಾತ್ರವೇ ಕರೆ ಉದ್ದೇಶಕ್ಕಾಗಿ ಬಳಸುವವರಿಗೆ ಈ ಯೊಜನೆ ಪ್ರಯೋಜನಕಾರಿಯಾಗಬಹುದೆಂದು ಆಶಿಸಲಾಗಿದೆ.