Vishwavani Editorial: ದೇಶದ್ರೋಹಿಗಳನ್ನು ಜಾಲಾಡಬೇಕಿದೆ
ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ವತಿ ಯಿಂದ ಬೆಂಗಳೂರಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಈತನ ಬಂಧನವಾಗಿದೆ ಎಂಬುದು ವಿಶೇಷ. ಪಾಕಿಸ್ತಾನದಲ್ಲಿನ ಏಜೆಂಟ್‌ಗಳನ್ನು ಸಂಪರ್ಕಿಸಲು ಈತ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಆಪ್ ಗಳು ಸೇರಿದಂತೆ ಇನ್ನೂ ಸಾಕಷ್ಟು ಸಂವಹನಾ ಮಾರ್ಗೋಪಾಯ ಗಳನ್ನು ಬಳಸಿರಬಹುದು ಎಂಬುದು ಗುಪ್ತಚರ ಸಂಸ್ಥೆಗಳ ಶಂಕೆ.


ರಕ್ಷಣಾ ವಲಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ದೀಪ್ ರಾಜ್ ಚಂದ್ರ ಎಂಬಾತನ ಬಂಧನವಾಗಿರುವುದು ಈಗಾಗಲೇ ನಿಮಗೆ ಗೊತ್ತಿರುವ ಸಂಗತಿ. ಈತ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವನಾಗಿದ್ದು ಪ್ರತಿಷ್ಠಿತ ಬಿಇಎಲ್ ಸಂಸ್ಥೆ ಯ ‘ಪ್ರಾಡಕ್ಟ್ ಡೆವಲಪ್‌ಮೆಂಟ್ ಆಂಡ್ ಇನ್ನೋವೇಶನ್ ಸೆಂಟರ್’ ವಿಭಾಗದಲ್ಲಿ ಹಿರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ಲಭ್ಯ ಮಾಹಿತಿ.
ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಈತನ ಬಂಧನ ವಾಗಿದೆ ಎಂಬುದು ವಿಶೇಷ. ಪಾಕಿಸ್ತಾನದಲ್ಲಿನ ಏಜೆಂಟ್‌ಗಳನ್ನು ಸಂಪರ್ಕಿಸಲು ಈತ ವಾಟ್ಸ್ಯಾಪ್ ಮತ್ತು ಟೆಲಿಗ್ರಾಂ ಆಪ್ ಗಳು ಸೇರಿದಂತೆ ಇನ್ನೂ ಸಾಕಷ್ಟು ಸಂವಹನಾ ಮಾರ್ಗೋಪಾಯಗಳನ್ನು ಬಳಸಿರಬಹುದು ಎಂಬುದು ಗುಪ್ತಚರ ಸಂಸ್ಥೆಗಳ ಶಂಕೆ.
ಇದನ್ನೂ ಓದಿ: Vishwavani Editorial: ಹಣದ ಮೂಲ ಪತ್ತೆಯಾಗಲಿ
ನಮ್ಮ ನೆಲದಲ್ಲೇ ಇದ್ದುಕೊಂಡು ನೆರೆಯ ಶತ್ರುರಾಷ್ಟ್ರದ ಜತೆಗೆ ಚಕ್ಕಂದಕ್ಕೆ ಇಳಿಯುವ ಇಂಥ ಇನ್ನೂ ಅನೇಕರು ಬಿಲಗಳಲ್ಲಿ ಅಡಗಿರಬಹುದಾದ ಸಾಧ್ಯತೆಯಿದೆ. ಬಂಧಿತನನ್ನು ಸರಿಯಾದ ಕ್ರಮದಲ್ಲಿ ಬಾಯಿ ಬಿಡಿಸಿದರೆ, ಅಂಥ ಮಾಹಿತಿಗಳು ಸಿಕ್ಕಾವು. ಕಾರ್ಗಿಲ್ ಯುದ್ಧದಲ್ಲಿ ಭಾರತವು ಸರಿಯಾದ ಪಾಠವನ್ನೇ ಕಲಿಸಿದ್ದರೂ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ, ಹೀಗಾಗಿ ಅದು ಇಂಥ ಕಿತಾಪತಿಗಳಿಗೆ ಮತ್ತೆ ಮತ್ತೆ ಕೈಹಾಕುತ್ತಲೇ ಇದೆ.
ಗಡಿಭಾಗದಲ್ಲಿ ಅಕ್ರಮವಾಗಿ ಒಳನುಸುಳುವಿಕೆ, ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವ ಮೂಲಕ ಭಾರತದ ಭದ್ರತೆ, ಸಮಗ್ರತೆ ಮತ್ತು ಸಾರ್ವ ಭೌಮತೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ದಶಕಗಳಿಂದಲೂ ಯತ್ನಿಸುತ್ತಲೇ ಇದೆ. ಭಾರತದ ವತಿಯಿಂದ ಸರ್ಜಿಕಲ್ ಸ್ಟ್ರೈಕ್ ನಡೆದು, ಉಗ್ರವಾದಿಗಳ ಬಾಲವನ್ನು ಕತ್ತರಿಸಿದ ನಂತರ ಪಾಕಿಸ್ತಾನದ ಆಟಾಟೋಪ ಕೊಂಚ ಕಡಿಮೆಯಾಗಿತ್ತು ಅಥವಾ ನಾವು ಹಾಗೆಂದು ಭಾವಿಸಿದ್ದೆವು.
ಆದರೆ ತನ್ನದು ಬುದ್ಧಿ ಕಲಿಯುವ ಜಾಯಮಾನವಲ್ಲ ಎಂಬುದನ್ನು ಪಾಕಿಸ್ತಾನ ಮತ್ತೊ ಮ್ಮೆ ತೋರಿಸಿಕೊಟ್ಟಿದೆ. ಇದಕ್ಕೆ ತಕ್ಕ ರೀತಿಯಲ್ಲೇ ಉತ್ತರ ಹೇಳಬೇಕಿದೆ ಮತ್ತು ಭಾರತದ ಗಾಳಿ-ನೀರು-ಆಹಾರವನ್ನು ಸೇವಿಸಿಕೊಂಡಿದ್ದು ಇಂಥ ದೇಶದ್ರೋಹದ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೂ ತಕ್ಕ ಶಾಸ್ತಿಯಾಗಬೇಕಿದೆ.