ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MRPL Tragedy: ಮಂಗಳೂರಿನ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರ ಸಾವು

MRPL Tragedy: ಮಂಗಳೂರಿನ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಈ ಅವಘಡ ನಡೆದಿದೆ. ಘಟನೆಯ ಬಗ್ಗೆ ತನಿಖೆಗೆ ಎಂಆರ್‌ಪಿಎಲ್ ಆಡಳಿತ ಮಂಡಳಿಯು ಸಮಿತಿ ರಚನೆ ಮಾಡಿದೆ. ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ.

ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರ ಸಾವು

Profile Prabhakara R Jul 12, 2025 2:06 PM

ಮಂಗಳೂರು: ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ (MRPL Tragedy) ಮಂಗಳೂರು ಹೊರವಲಯದ ಸೂರತ್ಕಲ್‌ನ ಎಂಆರ್‌ಪಿಎಲ್ ತೈಲ ಶುದ್ಧಿಕರಣ ಘಟಕದಲ್ಲಿ ನಡೆದಿದೆ. ದೀಪಚಂದ್ರ ಭಾರ್ತೀಯಾ, ಬಿಜಿಲ್ ಪ್ರಸಾದ್ ಮೃತರು ಎಂದು ತಿಳಿದುಬಂದಿದೆ.

ತೈಲ ಶುದ್ಧೀಕರಣ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಈ ಅವಘಡ ನಡೆದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಎಂಆರ್‌ಪಿಎಲ್‌ನ ಒಎಂಎಸ್ (ಆಯಿಲ್ ಮೂಮೆಂಟ್ ಸರ್ವೀಸ್) ನಲ್ಲಿ ಘಟನೆ ನಡೆದಿದೆ. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದ್ದಾಗ ಇಬ್ಬರು ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ.

MRPL  (1)

ಸಣ್ಣ ಪ್ರಮಾಣದ ಎಚ್‌2ಎಸ್‌ (ಹೈಡ್ರೋಜನ್ ಸಲ್ಫೈಡ್) ಅನಿಲ ಸೋರಿಕೆಯಾಗಿದೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕೆಲಸದ ಭಾಗವಾಗಿ ಮಾಸ್ಕ್ ಧರಿಸಿ ಅನಿಲವನ್ನು ಪರೀಕ್ಷಿಸುವಾಗ ಈ ದುರ್ಘಟನೆ ಸಂಭವಿಸಿದೆ. ಬಳಿಕ ಎಂಆರ್‌ಪಿಎಲ್‌ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ.

ಅಸ್ವಸ್ಥರಾದ ಇಬ್ಬರನ್ನು ತಕ್ಷಣ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಅಸ್ವಸ್ಥರ ರಕ್ಷಣೆಗೆ ಮುಂದಾಗಿದ್ದ ವಿನಾಯಕ ಮೈಗೇರಿ ಎನ್ನುವವರ ಸ್ಥಿತಿ ಕೂಡ ಗಂಭೀರವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ವಿನಾಯಕಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಎಂಆರ್‌ಪಿಎಲ್ ಆಡಳಿತ ಮಂಡಳಿ ಸಮಿತಿ ರಚನೆ ಮಾಡಿದೆ. ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | DK Suresh: ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ, ಪದೇ ಪದೆ ಈ ವಿಚಾರ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ ಎಂದ ಡಿ.ಕೆ.ಸುರೇಶ್‌