Bagalkot News: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರ ಸಾವು; ಬಾಲಕನ ರಕ್ಷಿಸಲು ಹೋಗಿ ನೀರುಪಾಲು
Bagalkot News: ಬಾಗಲಕೋಟೆ ಜಿಲ್ಲೆಯ ಮಣ್ಣೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ನಾನ ಮಾಡಲು ಬಾಲಕನೊಬ್ಬ ಮೊದಲು ನದಿಗೆ ಇಳಿದಿದ್ದ. ಈ ವೇಳೆ ಈಜು ಬಾರದೇ ಆತನ ಮುಳುಗುತ್ತಿದ್ದಾಗ ರಕ್ಷಣೆಗೆ ಯೋಧ ತೆರಳಿದ್ದಾರೆ. ನೀರಿನ ಮಧ್ಯೆ ಯೋಧನ ಕೊರಳು ಹಿಡಿದು ಬಾಲಕ ಒದ್ದಾಡಿದ್ದಾನೆ. ಹೀಗಾಗಿ ಇಬ್ಬರೂ ದಡ ಸೇರಲಾಗದೆ ನೀರಿನಲ್ಲಿ ಮುಳುಗಿದ್ದಾರೆ.


ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮಣ್ಣೇರಿ ಗ್ರಾಮದಲ್ಲಿ ನಡೆದಿದೆ. ಬಾಲಕನ ರಕ್ಷಣೆ ಮಾಡಲು ಹೋಗಿ ಯುವಕನ ಜತೆ ಯೋಧ ಸಹ ಮೃತಪಟ್ಟಿದ್ದಾರೆ. ಶೇಖಪ್ಪ (15) ಮತ್ತು ಯೋಧ ಮಹಾಂತೇಶ (25) ಮೃತ ದುರ್ದೈವಿಗಳು. ಹಂಸನೂರು ಗ್ರಾಮದ ಶೇಖಪ್ಪ, ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ ಮೃತರು.
ಶೇಖಪ್ಪ ಸ್ನಾನ ಮಾಡಲು ಮೊದಲು ನದಿಗೆ ಇಳಿದಿದ್ದ. ಈ ವೇಳೆ ಈಜು ಬಾರದೇ ಮುಳುಗುತ್ತಿದ್ದಾಗ ರಕ್ಷಣೆಗೆ ಯೋಧ ಮಹಾಂತೇಶ ತೆರಳಿದ್ದಾರೆ. ನೀರಿನ ಮಧ್ಯೆ ಯೋಧನ ಕೊರಳು ಹಿಡಿದು ಶೇಖಪ್ಪ ಒದ್ದಾಡಿದ್ದಾನೆ. ಹೀಗಾಗಿ ನದಿಯ ದಡ ಸೇರಲಾರದೇ ಶೇಖಪ್ಪ ಮತ್ತು ಮಹಾಂತೇಶ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಅಗ್ನಿಶಾಮಕ ದಳ ಮತ್ತು ಪೋಲಿಸರಿಂದ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಾದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Basanagouda Patil Yatnal: ಯತ್ನಾಳ್ ಹತ್ಯೆಗೆ ಸಂಚು; ಆಡಿಯೋ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ವೈರಲ್!
ಚಾಕೋಲೆಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ!
ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಚಾಕೋಲೆಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Murder Case) ಹುಬ್ಬಳ್ಳಿಯಲ್ಲಿ ನಡೆದಿದೆ. ಮಗುವಿನ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದಾಗ ಮಗು ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ವೇಳೆ ಆರೋಪಿ ಗೇಟ್ ತೆರೆದು ಒಳ ನುಗ್ಗಿ ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದಿದ್ದಾನೆ. ಬಳಿಕ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಮನೆಯ ಬಳಿ ಬರುತ್ತಿರುವ ಹಾಗೂ ಬಾಲಕಿಯನ್ನು ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನೂ ಓದಿ | Terrorist Arrest: ಪಂಜಾಬ್‌ನಲ್ಲಿ ಇಬ್ಬರು ಭಯೋತ್ಪಾದಕರ ಬಂಧನ; ಆರ್‌ಡಿಎಕ್ಸ್, ಐಇಡಿ ವಶಕ್ಕೆ
ಬಿಹಾರ ಮೂಲದ ಯುವಕನಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿ ಅಶೋಕನಗರ ಠಾಣೆಗೆ ನುಗ್ಗಿರುವ ಬಾಲಕಿ ಪೋಷಕರು ಹಾಗೂ ಸಾರ್ವಜನಿಕರು, ಆರೋಪಿಯನ್ನು ಬಂಧಿಸಿ ತಮಗೊಪ್ಪಿಸುವಂತೆ ಪಟ್ಟು ಹಿಡಿದಿದ್ದಾರೆ, ಪೊಲೀಸ್ ಠಾಣೆ ಎದಿರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.