ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇವರ ಕೋಣೆಯ ವಸ್ತುಗಳನ್ನು ಹೇಗೆ ಇಡಬೇಕು? ಈ ಬಗ್ಗೆ ವಾಸ್ತು ಶಾಸ್ತ್ರ ನೀಡೋ ಸಲಹೆ ಏನು?

Vastu Tips: ಮನೆಯ ದೇವರ ಕೋಣೆ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಇಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ನಿಯಮಬದ್ಧವಾಗಿ ಇಡುವುದು ಮುಖ್ಯ. ದೀಪವನ್ನು ವಿಗ್ರಹದ ಮುಂಭಾಗದಲ್ಲಿ ಇಡುವುದು, ಪೂಜಾ ಸಾಮಗ್ರಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಜೋಡಿಸುವುದು, ಮೃತರ ಛಾಯಾಚಿತ್ರಗಳನ್ನು ದೂರವಿಡುವುದು ಹಾಗೂ ನೈವೇದ್ಯವನ್ನು ಗೌರವದಿಂದ ಅರ್ಪಿಸುವುದು ವಾಸ್ತು ಮತ್ತು ಪರಂಪರೆಯ ಪ್ರಕಾರ ಒಳಿತು.

ದೇವರ ಕೋಣೆಯಲ್ಲಿ ಏನು ಇಡಬೇಕು, ಏನು ಬೇಡ?

ದೇವರ ಕೋಣೆ. -

Profile
Sushmitha Jain Mar 4, 2026 7:00 AM

ಬೆಂಗಳೂರು, ಮಾ. 4: ಭಾರತೀಯ ಸಂಸ್ಕೃತಿಯಲ್ಲಿ ದೇವರ ಕೋಣೆ ಮನೆಯ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪ್ರತಿದಿನ ದೀಪಾರಾಧನೆ, ಪೂಜೆ, ಜಪ, ಧ್ಯಾನ ಮತ್ತು ಪಾರಾಯಣ ನಡೆಯುತ್ತದೆ. ಆದರೆ ಈ ಕೋಣೆಯಲ್ಲಿ ವಸ್ತುಗಳನ್ನು ಎಲ್ಲಿ ಇಡಬೇಕು? ಯಾವ ನಿಯಮಗಳನ್ನು ಪಾಲಿಸಬೇಕು? ಎಂಬ ಪ್ರಶ್ನೆಗಳು ಅನೇಕ ಮನೆಗಳಲ್ಲಿ ಕೇಳಿಬರುತ್ತದೆ. ವಾಸ್ತು ಮತ್ತು ಪರಂಪರೆಯ ನಂಬಿಕೆಗಳ ಪ್ರಕಾರ ಕೆಲವು ಪ್ರಮುಖ ಸೂಚನೆಗಳು ಇಲ್ಲಿವೆ.

ದೇವರ ದೀಪ ಇಲ್ಲಿರಲಿ

ದೇವರಿಗೆ ಹಚ್ಚುವ ದೀಪವನ್ನು ಯಾವಾಗಲೂ ವಿಗ್ರಹದ ಮುಂಭಾಗದಲ್ಲೇ ಇಡಬೇಕು ಎಂದು ಪರಂಪರೆಯಲ್ಲಿ ಹೇಳಲಾಗಿದೆ. ದೀಪದ ಬೆಳಕು ದೇವರ ಮುಖದ ಮೇಲೆ ಬೀಳುವುದರಿಂದ ಆರಾಧನೆಯ ಸಮಯದಲ್ಲಿ ಆಧ್ಯಾತ್ಮಿಕ ಭಾವನೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಹಾಕುವಾಗ ಈ ನಿಯಮ ಪಾಲಿಸಿ; ಇಲ್ಲವಾದರೆ ಅಶುಭ ಫಲವೇ ಹೆಚ್ಚು

ಪೂಜಾ ಸಾಮಗ್ರಿಗಳಿಗೆ ಆಗ್ನೇಯ ದಿಕ್ಕು ಸೂಕ್ತ

ಪೂಜಾ ಸಾಮಗ್ರಿಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಸೂಕ್ತವೆಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ. ಈಶಾನ್ಯ ಮತ್ತು ಪೂರ್ವ ದಿಕ್ಕುಗಳನ್ನು ತೆರೆಯಾಗಿ ಇಡುವುದರಿಂದ ಬೆಳಗಿನ ಸೂರ್ಯನ ಕಿರಣಗಳು ದೇವರ ವಿಗ್ರಹಗಳ ಮೇಲೆ ನೇರವಾಗಿ ಬೀಳುತ್ತವೆ ಎಂದು ನಂಬಲಾಗುತ್ತದೆ.

ತಪ್ಪಿಯೂ ಈ ಫೋಟೋಗಳನ್ನು ಇಡಬೇಡಿ

ಪೂಜಾ ಕೋಣೆಯಲ್ಲಿ ಮೃತರ ಫೋಟೊ ಇಡುವುದನ್ನು ತಪ್ಪಿಸುವುದು ಒಳಿತು ಎಂದು ಹಿರಿಯರು ಸಲಹೆ ನೀಡುತ್ತಾರೆ. ಪೂಜೆ ವೇಳೆ ಮನಸ್ಸು ದೇವರ ಮೇಲೆ ಕೇಂದ್ರೀಕೃತವಾಗಿರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.

ನೈವೇದ್ಯ ಎಲ್ಲಿಡಬೇಕು?

ದೇವರಿಗೆ ಅರ್ಪಿಸುವ ನೈವೇದ್ಯವನ್ನು ವಿಗ್ರಹದ ಮುಂಭಾಗದಲ್ಲೇ ಇಡಬೇಕು. ಇದು ಗೌರವ ಮತ್ತು ಭಕ್ತಿಯ ಸಂಕೇತವಾಗಿದೆ.

ಧನ ಕನಕ ಇಡಬೇಡಿ

ಪೂಜಾ ಕೋಣೆಯನ್ನು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವ ಸ್ಥಳವಾಗಿ ಬಳಸಬಾರದು. ದೇವರ ಕೋಣೆಯ ಪವಿತ್ರತೆಯನ್ನು ಕಾಪಾಡುವುದು ಮುಖ್ಯವೆಂದು ನಂಬಲಾಗಿದೆ.

ಇನ್ನು ವಿಗ್ರಹಗಳಿಗಿಂತ ಕೆಳಭಾಗದಲ್ಲಿರುವ ಬೀರು ಅಥವಾ ಶೇಖರಣಾ ಸ್ಥಳವನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಕಡೆ ಇಡುವುದು ಸೂಕ್ತವೆಂದು ಹೇಳಲಾಗಿದೆ. ಇದರಿಂದ ಪೂರ್ವ ದಿಕ್ಕಿನ ಬೆಳಕಿಗೆ ಅಡ್ಡಿಯಾಗುವುದಿಲ್ಲ. ಒಟ್ಟಾರೆ ದೇವರ ಕೋಣೆಯಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಶಿಸ್ತಿನೊಂದಿಗೆ ಇಡುವುದು ಮನೆಗೆ ಶಾಂತಿ ಹಾಗೂ ಸಾತ್ವಿಕ ವಾತಾವರಣವನ್ನು ತರಲಿದೆ ಎಂಬ ನಂಬಿಕೆ ಇದೆ. ವಾಸ್ತು ಸೂಚನೆಗಳನ್ನು ಪಾಲಿಸುವುದರಿಂದ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.