ರಾಜ್‌ಕೋಟ್: ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 26 ರನ್ ಸೋಲಿಗೆ ತುತ್ತಾದರೂ ಈ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹಲವು ದಾಖಲೆ ಬರೆದಿದ್ದಾರೆ.
24 ರನ್‌ಗೆ 5 ವಿಕೆಟ್ ಉರುಳಿಸಿದ ವರುಣ್ ಚಕ್ರವರ್ತಿ ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ 3ನೇ ಭಾರತೀಯ ಹಾಗೂ ಎರಡನೇ ಸ್ಪಿನ್ನರ್ ಎನಿಸಿದರು. ಭುವನೇಶ್ವರ್ ಕುಮಾರ್ (86 ಇನಿಂಗ್ಸ್), ಕುಲದೀಪ್ ಯಾದವ್ (39 ಇನಿಂಗ್ಸ್) ಮೊದಲಿಬ್ಬರು ಸಾಧಕರು.
ಇದು ಮಾತ್ರವಲ್ಲದೆ ವೇಗವಾಗಿ 5 ಬಾರಿ ಐದು ವಿಕೆಟ್ ಸಾಧನೆ ಮಾಡಿದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಬೌಲರ್‌ಗಳ ಪಟ್ಟಿಯಲ್ಲಿ ಅಜಂತಾ ಮೆಂಡಿಸ್ (22 ಪಂದ್ಯ) ದಾಖಲೆಯನ್ನು ಚಕ್ರವರ್ತಿ ಅಳಿಸಿ ಅಗ್ರಸ್ಥಾನಕ್ಕೇರಿದರು.
ಮಂಗಳವಾರ ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 172 ರನ್ ಬಾರಿಸಿತು. ಗುರಿ ಹಿಂಬಾಲಿಸಿದ ಭಾರತ ತಂಡ, ಇಂಗ್ಲೆಂಡ್ ಬೌಲರ್‌ಗಳ ಶಿಸ್ತು ಬದ್ದ ಬೌಲಿಂಗ್ ದಾಳಿಗೆ ನಲುಗಿ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 145 ರನ್‌ಗಳಿಗೆ ಸೀಮಿತವಾಯಿತು. ಪಂದ್ಯದಲ್ಲಿ ಸೋತರೂ ಆತಿಥೇಯರು ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದ್ದಾರೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧಗೊಳ್ಳದ ಪಾಕ್ ಕ್ರೀಡಾಂಗಣ; ಜ.30 ಅಂತಿಮ ಗಡುವು
ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಅಭಿಷೇಕ್ ಶರ್ಮಾ (24) ಹಾಗೂ ಹಾರ್ದಿಕ್ ಪಾಂಡ್ಯ (40) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಸಮಯವನ್ನು ಕಳೆಯಲಿಲ್ಲ. 24 ರನ್‌ಗಳನ್ನು ಗಳಿಸಿ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಅಭಿಷೇಕ್ ವಿಫಲರಾದರು. ಕೊನೆಯಲ್ಲಿ ಹಾರ್ದಿಕ್ ಏಕಾಂಗಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಇನ್ನುಳಿದಂತೆ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ವಿಫಲರಾದರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಹಾಗೂ ಬ್ರೈಡನ್ ಕಾರ್ಸ್ ತಲಾ ಎರಡೆರಡು ವಿಕೆಟ್ ಕಿತ್ತರೆ, ಜೇಮಿ ಓವರ್ಟನ್ 3 ವಿಕೆಟ್ ಕಿತ್ತರು. ಆದರೆ, ಆದಿಲ್ ರಶೀದ್ ಕೀ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಜೊತೆಗೆ 4 ಓವರ್‌ಗಳಿಗೆ ಕೇವಲ 15 ರನ್ ನೀಡಿದರು.