ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vastu tips: ವಾಸ್ತು ಪ್ರಕಾರ ಲಾಫಿಂಗ್‌ ಬುದ್ಧನ ಪ್ರತಿಮೆ ಮನೆಯ ಈ ಭಾಗದಲ್ಲಿಟ್ಟರೆ ಸುಖ ಸಂತೋಷ ನೆಲೆಸುತ್ತೆ

ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧನ ಮೂರ್ತಿ ಸಮೃದ್ಧಿಯ ಸಂಕೇತವಾಗಿದೆ. ಇದು ಸಂತೋಷ ಮತ್ತು ಧನಾತ್ಮಕ ಕಂಪನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಧನಾತ್ಮಕ ಲಾಭಗಳನ್ನು ಪಡೆಯಬಹುದು.

ಲಾಫಿಂಗ್ ಬುದ್ಧನ ಪ್ರತಿಮೆ ಮನೆಯಲ್ಲಿಡ್ತೀರಾ? ಈ ವಾಸ್ತು ನಿಯಮ ಪಾಲಿಸಿ

ಹರೀಶ್‌ ಕೇರ ಹರೀಶ್‌ ಕೇರ Feb 20, 2025 8:32 AM

ವಾಸ್ತು ಶಾಸ್ತ್ರದ (Vastu tips) ಪ್ರಕಾರ, ಲಾಫಿಂಗ್ ಬುದ್ಧನನ್ನು (Laughing Buddha) ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ (Financial problems) ಹೋರಾಡುತ್ತಿದ್ದರೆ ಅಥವಾ ಕುಟುಂಬದಲ್ಲಿ ಯಾರಾದರೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನೆಯಲ್ಲಿ ಲಾಫಿಂಗ್ ಬುದ್ಧವನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಪರಿಹಾರವಾಗಿದೆ (prosperity) ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹಾಗಂತ ಮನೆಯಲ್ಲಿ ನಿಮಗೆ ಇಷ್ಟ ಬಂದ ಜಾಗದಲ್ಲಿ ಲಾಫಿಂಗ್ ಬುದ್ಧ ಇಡುವಂತಿಲ್ಲ. ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ. ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಎಲ್ಲಿ ಇಡಬಹುದು ಮತ್ತು ಎಲ್ಲಿ ಇಡಬಾರದು ಎಂದು ತಿಳಿಯೋಣ.

ಪುರಾಣ ಕಥೆಗಳ ಪ್ರಕಾರ, ನಾವು ಪ್ರತಿದಿನ ಬುದ್ಧನ ಹೊಟ್ಟೆಯನ್ನು ಉಜ್ಜಬೇಕಂತೆ, ಅದರಿಂದ ಆತ ಸಂತೋಷಪಟ್ಟು ಪ್ರತಿಯಾಗಿ, ಅವನು ನಮ್ಮ ಆಸೆಗಳನ್ನು ಪೂರೈಸುತ್ತಾನಂತೆ.

ವಾಸ್ತು ಪ್ರಕಾರ ಹಾಗೂ ಫೆಂಗ್ ಶುಯ್ ಪ್ರಕಾರ ಕೂಡಾ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಡುವುದು ಬಹಳ ಒಳ್ಳೆಯದು. ಆದರೆ, ಹಾಗಿಡುವಾಗ ಅದನ್ನಿಡುವ ದಿಕ್ಕು ಸೇರಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ವಿಗ್ರಹಕ್ಕೆ ಅಗೌರವ ತೋರಿದರೆ, ಅದು ಎಲ್ಲವನ್ನೂ ಹಿಮ್ಮೆಟ್ಟಿಸುತ್ತದೆ ಮತ್ತು ದುರದೃಷ್ಟವನ್ನು ತರುತ್ತದೆ. ಅದೇ ಸರಿಯಾದ ರೀತಿಯಲ್ಲಿಟ್ಟಾಗ ಅದು ಸಂಪತ್ತನ್ನು ಹೆಚ್ಚಿಸಿ ಮನೆಯಲ್ಲಿ ಸಂತೋಷವನ್ನೂ ಹೆಚ್ಚಿಸುತ್ತದೆ. ನಗುವ ಬುದ್ಧ ಗೃಹಪ್ರವೇಶಗಳಿಗೆ ಮತ್ತು ಹಬ್ಬದ ಸಮಯದಲ್ಲಿ ನೀಡಲು ಪರಿಪೂರ್ಣ ಕೊಡುಗೆಯಾಗಿದೆ.

ಲಾಫಿಂಗ್ ಬುದ್ಧನನ್ನು ಇಡಲು ಸರಿಯಾದ ದಿಕ್ಕು ಯಾವುದು?

ಲಾಫಿಂಗ್ ಬುದ್ಧನನ್ನು ಇಡಲು ವಾಸ್ತುವಿನಲ್ಲಿ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಲಾಫಿಂಗ್ ಬುದ್ಧನ ಪ್ರತಿಮೆಯು ಮನೆಯ ಮುಖ್ಯ ದ್ವಾರದ ಮುಂದೆ ಇಡಬೇಕು ಎಂದು ಸೂಚಿಸಿದೆ. ಇದರಿಂದ ಮನೆಯಲ್ಲಿ ಸಂತೋಷ ಸದಾ ಹೊಮ್ಮಿರುತ್ತೆ ಎನ್ನಲಾಗುತ್ತೆ.

ಲಾಫಿಂಗ್ ಬುದ್ಧನನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮಕ್ಕಳ ಸ್ಟಡಿ ರೂಮ್ನಲ್ಲಿ ಇಟ್ಟರೆ, ಅದು ಅವರ ಮನಸ್ಸನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.

ಇನ್ನು ಕಛೇರಿಯಲ್ಲಿ ನಿಮ್ಮ ಮೇಜಿನ ಮೇಲೆ ಲಾಫಿಂಗ್ ಬುದ್ಧನನ್ನು ಇರಿಸುವುದು ನಿಮ್ಮ ವೃತ್ತಿಜೀವನ(career)ದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಈ ವಿಗ್ರಹವು ಸಹೋದ್ಯೋಗಿಗಳು, ಅಧೀನ ಅಧಿಕಾರಿಗಳು ಮತ್ತು ಮೇಲಧಿಕಾರಿಗಳೊಂದಿಗೆ ವಿವಾದಗಳು, ಜಗಳಗಳು ಮತ್ತು ವಾದಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿವಿಯನ್ನುಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?