Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿವಿಯನ್ನುಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?
ವಾಸ್ತು ಪ್ರಕಾರ, ಬಾಗಿಲು ಮತ್ತು ಕಿಟಕಿಯಿಂದ ಅಡುಗೆಮನೆ, ಮಲಗುವ ಕೋಣೆ ಮತ್ತು ಸ್ನಾನಗೃಹದವರೆಗೆ ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಇರಿಸಲು ಸೂಚಿಸಲಾಗುತ್ತದೆ. ಹಾಗೆಯೇ, ಮನೆಯಲ್ಲಿ ಟಿವಿಯನ್ನು ಇಡಲು ಯಾವುದು ಸರಿಯಾದ ದಿಕ್ಕು, ಯಾವ ದಿಕ್ಕಿನಲ್ಲಿ ಟಿವಿ ಇಡುವುದರಿಂದ ನಷ್ಟ ಉಂಟಾಗುತ್ತದೆ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಮನೆಯ ಈ ದಿಕ್ಕಿನಲ್ಲಿ ಟಿವಿ ಇಡಿ

ಮನೆಯಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವು ನಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಲಿದ್ದು, ವಾಸ್ತು ಶಾಸ್ತ್ರ(Vastu Tips)ದಲ್ಲಿಯೂ ಅವುಗಳಿಗೆ ಬಹಳ ಪ್ರಾಮುಖ್ಯತೆ. ಮನೆಗೆ ವಾಸ್ತು ಎಷ್ಟು ಮುಖ್ಯವೋ ಹಾಗೆಯೇ ಮನೆಯೊಳಗಿರುವ ಗೃಹಪಯೋಗಿ ವಸ್ತುಗಳಿಗೂ ಅಷ್ಟೇ ಆಗಿರುತ್ತದೆ. ಹೌದು ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುಗಳನ್ನು ಇಡಲು ಸೂಕ್ತವಾದ ದಿಕ್ಕಿದ್ದು, ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ಯಂತ್ರದಿಂದ ಹಿಡಿದು ಮಲಗುವ ಕೋಣೆಯ ಮಂಚವನ್ನು ಇಡಲು ಯಾವ ದಿಕ್ಕು ಸೂಕ್ತ ಎಂಬುದನ್ನು ವಿವರಿಸಲಾಗಿದೆ. ಇದಕ್ಕೆ ಮನೋರಂಜನೆ ಸಾಧನಗಳಲ್ಲಿ ಒಂದಾದ ಟಿವಿಯೂ ಹೊರತಾಗಿಲ್ಲ..
ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಶನಿ ಮನೆಯ ಎಲ್ಲಾ ಎಲೆಕ್ಟ್ರಾನಿಕ್ (Electronic) ವಸ್ತುಗಳ ಮೇಲೆ ಪ್ರಭಾವ ಬೀರಲಿದ್ದು, ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಅವು ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಸೃಷ್ಟಿ ಆಗುತ್ತದೆ . ಅಂತವುಗಳಲ್ಲಿ ಟಿವಿ ಕೂಡ ಒಂದಾಗಿದ್ದು, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲೆಂದರಲ್ಲಿ ಟಿ.ವಿ. ಹಾಕುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮನೆಯ ಸದಸ್ಯರುಗಳು ಹಲವು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದ್ದು, ತೀವ್ರ ಆರ್ಥಿಕ ನಷ್ಟ ಅನುಭವಿಸಬೇಕಾದೀತು ಎನ್ನುತ್ತದೆ ವಾಸ್ತು ಶಾಸ್ತ್ರ.
ಈ ದಿಕ್ಕು ಸೂಕ್ತ
ಟಿವಿಯನ್ನು ಮನೆಯ ಹಾಲ್‌ನಲ್ಲಿ ಇರಿಸಿದರೆ, ಟಿವಿಯನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಟಿವಿಯನ್ನು ನೈಋತ್ಯ ಮತ್ತು ಈಶಾನ್ಯ ದಿಕ್ಕಿನಲ್ಲಿ ಇರಿಸುವುದರಿಂದ ಕೋಣೆಗೆ ಧನಾತ್ಮಕ ಶಕ್ತಿ ಬರುತ್ತದೆ. ಇದರಿಂದ ಮನೆಯ ನಿವಾಸಿಗಳಲ್ಲಿ ಪರಸ್ಪರ ಪ್ರೀತಿಯೂ ಹೆಚ್ಚಾಗುತ್ತದೆ.
ಈ ಸುದ್ದಿಯನ್ನು ಓದಿ: Vastu Tips: ಈ ಏಳು ಸಸ್ಯಗಳನ್ನು ಮನೆಯಲ್ಲಿ ಅಪ್ಪಿತಪ್ಪಿಯೂ ಇಡಬೇಡಿ
ಈ ದಿಕ್ಕು ಒಳ್ಳೆಯದಲ್ಲ
ಅಲ್ಲದೇ ಟಿ.ವಿ ನೋಡುವಾಗ ಪೂರ್ವಕ್ಕೆ ಮುಖ ಮಾಡಬೇಕು. ಅಲ್ಲದೆ, ಮನೆಯ ಪ್ರವೇಶದ್ವಾರದ ಮುಂದೆ ಟಿವಿಯನ್ನು ಇಡುವುದು ಬಾಹಿರವಾಗಿದ್ದು, ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಜಗಳ ನಡೆದು, ಕುಟುಂಬ ಸದಸ್ಯರ ನಡುವೆ ಕಲಹದ ವಾತಾವರಣ ನಿರ್ಮಾಣವಾಗುತ್ತದೆ. ಇನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಟಿ.ವಿಯನ್ನು ಎಂದಿಗೂ ಇಡಬೇಡಿ. ಈ ದಿಕ್ಕಿನಲ್ಲಿ ಟಿವಿಯನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯ ಮಾರ್ಗವನ್ನು ನಿರ್ಬಂಧಿಸುತ್ತದೆ. ಮನೆಯಲ್ಲಿ ನಕಾರಾತ್ಮಕತೆ ತುಂಬಿಕೊಳ್ಳುತ್ತದೆ.
ಬೆಡ್ ರೂಂ ಅಲ್ಲಿ ಟಿವಿ ಇಡಬಹುದೇ..?
ವಾಸ್ತು ಶಾಸ್ತ್ರದ ಪ್ರಕಾರ.. ಮಲಗುವ ಕೋಣೆಯಲ್ಲಿ ಟಿವಿ ಇಡುವುದು ಒಳ್ಳೆಯದಲ್ಲ. ನಿಮ್ಮ ಮಲಗುವ ಕೋಣೆಯಲ್ಲಿ ಟಿ.ವಿ ಹಾಕಲು ನೀವು ನಿರ್ಧರಿಸಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಮಲಗುವ ಕೋಣೆಯಲ್ಲಿ ಟಿ.ವಿಯನ್ನು ಆಗ್ನೇಯ ದಿಕ್ಕಿನಲ್ಲಿ ಅಂದರೆ ಆಗ್ನೇಯ ಕೋನದಲ್ಲಿ ಇಡಬೇಕು. ಅಲ್ಲದೆ ಮಲಗುವ ಕೋಣೆಯ ಮಧ್ಯದಲ್ಲಿ ಟಿವಿ ಇರಬಾರದು. ಏಕೆಂದರೆ ಇದು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಟಿವಿ ಅಳವಡಿಸುವುದು, ಅದರ ಬಳಕೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಮಾಹಿತಿ ನೀಡಲಾಗಿದೆ. ವಾಸ್ತು ಪ್ರಕಾರ ಟಿವಿ ಯಾವಾಗಲೂ ಸ್ವಚ್ಛವಾಗಿರಬೇಕು. ಧೂಳು ಸಂಗ್ರಹವಾಗದಂತೆ ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಹೀಗೆ ಮಾಡದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿಯಿಂದ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನ ಮರೆಯಬೇಡಿ.