ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

vijay Hazare Trophy: ಹರಿಯಾಣವನ್ನು ಮಣಿಸಿ ಫೈನಲ್‌ಗೇರಿದ ಕರ್ನಾಟಕ!

2024-25ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಫೈನಲ್‌ಗೆ ಪ್ರವೇಶ ಮಾಡಿದೆ. ಬುಧವಾರ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಹರಿಯಾಣ ವಿರುದ್ಧ ಕರ್ನಾಟಕ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಕರ್ನಾಟಕ ಪರ ಬ್ಯಾಟಿಂಗ್‌ನಲ್ಲಿ ದೇವದತ್‌ ಪಡಿಕ್ಕಲ್‌ ಹಾಗೂ ಸ್ಮರಣ್‌ ರವಿಚಂದ್ರನ್‌ ತಲಾ ಅರ್ಧಶತಕಗಳನ್ನು ಸಿಡಿಸಿದರೆ, ಅಭಿಷೇಕ್‌ ಶೆಟ್ಟಿ 4 ವಿಕೆಟ್‌ ಕಿತ್ತರು.

ವಿಜಯ್‌ ಹಝಾರೆ ಟ್ರೋಫಿ ಫೈನಲ್‌ ತಲುಪಿದ ಕರ್ನಾಟಕ!

Karnataka enter final in Vijay Hazare Trophy

Profile Ramesh Kote Jan 16, 2025 12:02 AM

ವಡೋದರಾ: ಅಭಿಷೇಕ್‌ ಶೆಟ್ಟಿ (34ಕ್ಕೆ 4) ಶಿಸ್ತುಬದ್ದ ಬೌಲಿಂಗ್‌ ಮತ್ತು ದೇವದತ್‌ ಪಡಿಕ್ಕಲ್‌ ಹಾಗೂ ಸ್ಮರಣ್‌ ರವಿಚಂದ್ರನ್‌ ಅವರ ನಿರ್ಣಾಯಕ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಹರಿಯಾಣವನ್ನು ಮಣಿಸಿ 2024-25ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಫೈನಲ್‌ಗೆ ಪ್ರವೇಶ ಮಾಡಿದೆ.

ಇಲ್ಲಿನ ಕೊಟಂಬಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಹರಿಯಾಣ ತಂಡ, ಅಭಿಷೇಕ್‌ ಶೆಟ್ಟಿ ಸೇರಿದಂತೆ ಕರ್ನಾಟಕ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಹೊರತಾಗಿಯೂ ತನ್ನ ಪಾಲಿನ 50 ಓವರ್‌ಗಳನ್ನು ಪೂರ್ಣಗೊಳಿಸಿತ್ತು. ಆ ಮೂಲಕ ಹರಿಯಾಣ ತಂಡ 9 ವಿಕೆಟ್‌ ನಷ್ಟಕ್ಕೆ 237 ರನ್‌ಗಳನ್ನು ಕಲೆ ಹಾಕಿತ್ತು.

Karun Nairಗೆ ಅವಕಾಶ ಏಕೆ ನೀಡಿಲ್ಲ?: ಬಿಸಿಸಿಐ ವಿರುದ್ಧ ಹರ್ಭಜನ್‌ ಸಿಂಗ್‌ ಪ್ರಶ್ನೆ!

ಬಳಿಕ ಗುರಿ ಹಿಂಬಾಲಿಸಿದ್ದ ಕರ್ನಾಟಕ ತಂಡ, ದೇವದತ್‌ ಪಡಿಕ್ಕಲ್‌ (86 ರನ್) ಹಾಗೂ ಸ್ಮರಣ್‌ ರವಿಚಂದ್ರನ್‌ (76 ರನ್)‌ ಅವರ ಅರ್ಧಶತಕಗಳ ಬಲದಿಂದ 47.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 238 ರನ್‌ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು. ಜನವರಿ 16 ರಂದು ನಡೆಯುವ ಮತ್ತೊಂದು ಸೆಮಿಫೈನಲ್‌ನಲ್ಲಿ ವಿದರ್ಭ ಮತ್ತು ಮಹಾರಾಷ್ಟ್ರ ತಂಡಗಳು ಸೆಣಸಲಿವೆ. ಈ ಪಂದ್ಯ ಗೆದ್ದ ತಂಡದ ಎದುರು ಕರ್ನಾಟಕ ಪ್ರಶಸ್ತಿಗಾಗಿ ಸೆಣಸಲಿದೆ.

ಪಡಿಕ್ಕಲ್ ಮತ್ತು ಸ್ಮರಣ್‌ ಜುಗಲ್‌ಬಂದಿ

ಗುರಿ ಹಿಂಬಾಲಿಸಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ (86 ರನ್, ಎಂಟು ಬೌಂಡರಿ, ಒಂದು ಸಿಕ್ಸರ್) ಮತ್ತು ಸ್ಮರಣ್‌ ರವಿಚಂದ್ರನ್‌ (76 ರನ್, 3 ಬೌಂಡರಿ, 3 ಸಿಕ್ಸರ್) ಮೂರನೇ ವಿಕೆಟ್‌ಗೆ 128 ರನ್‌ಗಳ ಜೊತೆಯಾಟವಾಡಿದರು. ಇದರ ಪರಿಣಾಮವಾಗಿ ಕರ್ನಾಟಕ 238 ರನ್ ಗಳಿಸಿ ಗುರಿಯನ್ನು ಸುಲಭವಾಗಿ ತಲುಪಿತು.



ಮಯಾಂಕ್ ಅಗರ್ವಾಲ್ ಔಟಾದ ನಂತರ ಕೆವಿ ಅನೀಶ್ (22 ರನ್) ಮೊದಲ ರನ್ ಗಳಿಸಲು 14 ಎಸೆತಗಳನ್ನು ಆಡಿದರು ಮತ್ತು ನಿಧಾನಗತಿಯ ಪಿಚ್‌ನಲ್ಲಿ ಆರಾಮದಾಯಕವಾಗಿ ಕಾಣಲಿಲ್ಲ. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಬರೋಡಾ ವಿರುದ್ಧ 102 ರನ್ ಗಳಿಸಿದ್ದ ದೇವದತ್ ಹಾಗೂ 21ರ ಹರೆಯದ ಸ್ಮರಣ್‌ ತಾಳ್ಮೆಯಿಂದ ಆಟವಾಡಿ ತಲಾ ಅರ್ಧಶತಕ ಪೂರೈಸಿದರು. ಆ ಮೂಲಕ ಕರ್ನಾಟಕದ ಗೆಲುವಿನ ರೂವಾರಿಗಳೆನಿಸಿದರು.



ಹರಿಯಾಣ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಇದಕ್ಕೂ ಮುನ್ನ ಕರ್ನಾಟಕದ ಬೌಲರ್‌ಗಳು ಹರಿಯಾಣವನ್ನು ಹಿಮ್ಮೆಟ್ಟಿಸಿದರು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ 34 ರನ್ ನೀಡಿ 4 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 36 ರನ್ ನೀಡಿ 2 ವಿಕೆಟ್ ಹಾಗೂ ವೇಗಿ ಪ್ರಸಿದ್ಧ್ ಕೃಷ್ಣ 40 ರನ್ ನೀಡಿ 2 ವಿಕೆಟ್ ಪಡೆದರು.

ಹಿಮಾಂಶು ರಾಣಾ (44 ರನ್) ಮತ್ತು ನಾಯಕ ಅಂಕಿತ್ ಕುಮಾರ್ (48 ರನ್) ಎರಡನೇ ವಿಕೆಟ್‌ಗೆ 70 ರನ್ ಸೇರಿಸಿದರು. ಆದರೆ ಇದಾದ ನಂತರ ಯಾವುದೇ ಪಾಲುದಾರಿಕೆ ಮೂಡಿ ಬರಲಿಲ್ಲ. ಬದಲಿಗೆ, ಕೊನೆಯ ವಿಕೆಟ್‌ಗೆ ಅನುಜ್ ಥಕ್ರಾಲ್ ಮತ್ತು ಅಮಿತ್ ರಾಣಾ ಜೋಡಿ 39 ರನ್‌ಗಳಿಸಿದರು. ಅಂತಿಮವಾಗಿ ಹರಿಯಾಣ 9 ವಿಕೆಟ್‌ಗೆ 237 ರನ್‌ಗಳ ಗೌರವಾನ್ವಿತ ಸ್ಕೋರ್ ತಲುಪುವಲ್ಲಿ ಯಶಸ್ವಿಯಾಗಿತ್ತು.