Viral News: ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತ ಈ ಮಹಿಳೆಯರು ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಶಾಕ್!
ನಮ್ಮ ದೇಶದಲ್ಲಿ ಅದೆಷ್ಟೋ ಮಹಿಳೆಯರು ಕೌಟುಂಬಿಕ ಹಿಂಸೆ ಮತ್ತು ತಮ್ಮ ಗಂಡಂದಿರ ಕುಡಿತದ ಚಟದಿಂದ ರೋಸಿ ಹೋಗಿರುತ್ತಾರೆ. ಆದರೆ ಇಲ್ಲಿ ಇಬ್ಬರು ಮಹಿಳೆಯರು ಮಾತ್ರ ಅದರಿಂದ ಹೊರಬರಲು ಮಾಡಿದ ಉಪಾಯ ಸಖತ್ತಾಗಿದೆ.


ಲಖನೌ: ಈ ಜಗತ್ತಿನಲ್ಲಿ ಪ್ರತಿದಿನ ಒಂದಿಲ್ಲೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸುದ್ದಿಯಾದರೆ, ಇನ್ನು ಕೆಲವು ಹಾಗೆಯೇ ಮುಚ್ಚಿ ಹೋಗುತ್ತದೆ. ಅಂತಹ ಒಂದು ವಿಚಿತ್ರ ಘಟನೆಯೊಂದು ಇದೀಗ ಉತ್ತರಪ್ರದೇಶದ (Uttar Pradesh) ಗೋರಖ್‌ಪುರದಿಂದ (Gorakhpur) ವರದಿಯಾಗಿದ್ದು, ಈ ಸುದ್ದಿ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.
ತಮ್ಮ ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತ ಇಬ್ಬರು ಹೆಂಗಸರು ತಾವೇ ಪರಸ್ಪರ ಮದುವೆಯಾದ ಘಟನೆ ವರದಿಯಾಗಿದೆ. ಕವಿತಾ ಮತ್ತು ಗುಂಜ ಅಲಿಯಾಸ್ ಬಬ್ಲು ಈ ರೀತಿಯಾಗಿ ವಿವಾಹ ಬಂಧನಕ್ಕೊಳಗಾದ ಮಹಿಳೆಯರು. ಇವರಿಬ್ಬರೂ ಇಲ್ಲಿನ ಡಿಯೊರಿಯಾದಲ್ಲಿರುವ (Deoria) ಛೋಟಿ ಕಾಶಿ (Choti Kashi) ಎಂದೇ ಹೆಸರುವಾಸಿಯಾಗಿರುವ ಶಿವ ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಇದೀಗ ಸುದ್ದಿಯ ಕೇಂದ್ರವಾಗಿದ್ದಾರೆ.
ಇವರಿಬ್ಬರೂ ಇನ್ ಸ್ಟಾಗ್ರಾಂನಲ್ಲಿ (Instagram) ಪರಸ್ಪರ ಪರಿಚಯವಾಗಿ ಬಳಿಕ ಇಬ್ಬರ ಮನೆ ಪರಿಸ್ಥಿತಿಯೂ ಒಂದೇ ರೀತಿಯಾಗಿದ್ದ ಕಾರಣ ಇವರಿಬ್ಬರು ಪರಸ್ಪರ ವಿವಾಹವಾಗಲು ತಿರ್ಮಾನಿಸಿದರು ಎಂದು ಮದುವೆಯ ಬಳಿಕ ಈ ನವದಂಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರಿಬ್ಬರೂ ತಮ್ಮ ಕುಡುಕ ಗಂಡಂದಿರ ಕಾರಣದಿಂದ ಕೌಟುಂಬಿಕ ಹಿಂಸೆಯ ಸಂತ್ರಸ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral News: ಗೂಗಲ್ ಮ್ಯಾಪ್ ನಂಬಿ ಸೈಕಲ್‌ನಲ್ಲಿ ನೇಪಾಳಕ್ಕೆ ಹೊರಟ ವಿದೇಶಿ ಪ್ರವಾಸಿಗರು; ಆದರೆ ಆದದ್ದೇ ಬೇರೆ !
🚨 UP: Two Women Marry Each Other in Deoria to Escape Harassment by Their Husbands...
— Naren Mukherjee (@NMukherjee6) January 25, 2025
Lo kudoos tumhra sapna sach ho gya 😂😂👇 pic.twitter.com/2OWcS09xBY
ದೇವಸ್ಥಾನದಲ್ಲಿ ಮದುವೆಯಾದ ಸಂದರ್ಭದಲ್ಲಿ ಗುಂಜ ಪತಿಯ ಸ್ಥಾನದಲ್ಲಿ ನಿಂತು ಕವಿತಾಳ ಹಣೆಗೆ ಸಿಂಧೂರವನ್ನಿಟ್ಟಿದ್ದಾಳೆ. ಬಳಿಕ ಇವರಿಬ್ಬರೂ ಹಾರಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಮಾತ್ರವಲ್ಲದೇ ಈ ಜೋಡಿ ಹಿಂದೂ ಸಂಪ್ರದಾಯದಂತೆ ಸಪ್ತಪದಿಯನ್ನೂ ತುಳಿಯುವ ಮೂಲಕ ಪವಿತ್ರ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ʼʼನಮ್ಮ ಗಂಡಂದಿರ ಕುಡಿತ ಮತ್ತು ಹಿಂಸಾ ಪ್ರವೃತ್ತಿಗಳಿಂದ ನಾವು ರೋಸಿ ಹೋಗಿದ್ದೆವು. ಇದು ನಮ್ಮನ್ನು ಒಂದು ಶಾಂತಿಯುತ ಹಾಗೂ ಪ್ರೀತಿಯ ಜೀವನವನ್ನು ಅರಸುವಂತೆ ಮಾಡಿದೆ. ನಾವಿಬ್ಬರೂ ದಂಪತಿಯಾಗಿ ಗೊರಖ್‌ಪುರದಲ್ಲಿ ಬದುಕುವ ನಿರ್ಧರಿಸಿದೆವುʼ’ ಎಂದು ಗುಂಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇವರಿಬ್ಬರೂ ಇದೀಗ ಒಂದು ಬಾಡಿಗೆ ಮನೆಯಿಂದ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ದೇವಸ್ಥಾನದ ಅರ್ಚಕ ಉಮಾ ಶಂಕರ್ ಹೇಳುವಂತೆ, ಇವರಿಬ್ಬರೂ ಹೂಮಾಲೆ ಮತ್ತು ಸಿಂಧೂರವನ್ನು ಖರೀದಿಸಿ, ಮದುವೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಇಲ್ಲಿಂದ ತೆರಳಿದರು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕೌಟುಂಬಿಕ ಹಿಂಸೆ ಮತ್ತು ಗಂಡನ ಕಿರುಕುಳವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ಬದಲು ಈ ಇಬ್ಬರು ಮಹಿಳೆಯರು ಪರಸ್ಪರ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದು ಇದೀಗ ಅಚ್ಚರಿಗೆ ಕಾರಣವಾಗಿದೆ.