ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Post: ಉಬರ್ ಡ್ರೈವರ್‌ಗೆ ನಕಲಿ ನೋಟು ಕೊಟ್ಟ ಟೂರಿಸ್ಟ್- ಆಮೇಲೆ ಆಗಿದ್ದೇ ಬೇರೆ!

viral post:ಇತ್ತೀಚೆಗೆ  ಟೂರಿಸ್ಟ್ ಒಬ್ಬರು  ನಕಲಿ ನೋಟು ಅಂತ ಗೊತ್ತಿಲ್ಲದೆ ಊಬರ್ ಡ್ರೈವರ್‌ಗೆ  ನೀಡಿದ  ಘಟನೆಯನ್ನು  ಸೋಷಿಯಲ್ ಮೀಡಿಯಾದಲ್ಲಿ  ಬರೆದುಕೊಂಡಿದ್ದಾರೆ.(Viral Post)

ನವ ದೆಹಲಿ: ನೋಟು ಅಮಾನ್ಯೀಕರಣ ಜಾರಿಗೆ ಬಂದು ಹಲವು ವರ್ಷ ಕಳೆದರೂ ನಕಲಿ ನೋಟುಗಳ ಹಾವಳಿ ಮಾತ್ರ ನಿಂತಿಲ್ಲ. ದಿನ ನಿತ್ಯ ನಕಲಿ ನೋಟಿನ ಚಲಾವಣೆ  ಕುರಿತಾಗಿ  ಸುದ್ದಿ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ  ಟೂರಿಸ್ಟ್ ಒಬ್ಬರು  ನಕಲಿ ನೋಟು ಅಂತ ಗೊತ್ತಿಲ್ಲದೆ ಊಬರ್ ಡ್ರೈವರ್‌ಗೆ  ನೀಡಿದ  ಘಟನೆಯನ್ನು  ಸೋಷಿಯಲ್ ಮೀಡಿಯಾದಲ್ಲಿ  ಬರೆದುಕೊಂಡಿದ್ದಾರೆ.(Viral Post)
ಈ  ಪೋಸ್ಟ್ ಇದೀಗ ಬಹಳಷ್ಟು  ವೈರಲ್ ಆಗಿದೆ. ತನಗೆ ಎಟಿಎಂನಿಂದ ಸಿಕ್ಕಿದ್ದ 500 ರೂ. ನೋಟು ನಕಲಿಯಾಗಿತ್ತು. ಆದರೆ ಈ ನೋಟು ನಕಲಿ ಎಂದು ತಿಳಿಯದೇ  ಉಬರ್ ಟ್ಯಾಕ್ಸಿ ಡ್ರೈವರ್‌ಗೆ ಕೊಡಲು ಹೋದಾಗ  ಅಲ್ಲಿ ಆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಗುಡಗಾಂವ್‌ನ  ಉಬರ್ ಟ್ಯಾಕ್ಸಿ  ಓಡಾಟದ ಸಂದರ್ಭದಲ್ಲಿ ‌500ರೂ ನೀಡಬೇಕಿತ್ತು. ಅದರಲ್ಲಿ ನಕಲಿ 500 ರೂ. ನೋಟು ಅಂತ ಗಮನಿಸದೆ ಆ ಹಣವನ್ನು ಊಬರ್ ಡ್ರೈವರ್‌ಗೆ ಕೊಟ್ಟಾಗ ಹಣ ನೋಡಿ ಗಾಬರಿಗೊಂಡ ಡ್ರೈವರ್, ನಕಲಿ ನೋಟು ಅಂತ ಇಂಗ್ಲಿಷ್‌ನಲ್ಲಿ  ಜೋರಾಗಿ ಕಿರುಚಿದ್ದಾನೆ. ಬಳಿಕ ಇದು ನಕಲಿ ‌ನೋಟು ಹೌದು ಎಂದು ತನಗೆ ಅರಿವಾಗಿದೆ ಎಂದು ಬರೆದುಕೊಂಡಿದ್ದಾರೆ ‌.
image-efba1dd3-d4e5-4f9a-80c9-5d2e9de37529.jpg
ಈ ನೋಟು ಎಟಿಎಂನಿಂದ ನಾನು ಪಡೆದಿದ್ದು ಎಂದು ಶೇ.90 ಪರ್ಸೆಂಟ್  ನನಗೆ ತಿಳಿದಿದೆ.ಹಾಗಾಗಿ ಎಲ್ಲಿ ಹಣ ಪಡೆಯುವುದಾದರೂ ನಾವು ಮೊದಲು ಪರಿಶೀಲನೆ ಮಾಡಬೇಕೆಂದು ಬರೆದುಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಅಸಲಿ 500 ರೂ. ನೋಟು ಮತ್ತು ನಕಲಿ ನೋಟಿನ ಪೋಟೊ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ರೆಡ್ಡಿಟ್ ಎನ್ನುವ ಖಾತೆಯಲ್ಲಿ ವೈರಲ್ ಆಗಿದ್ದು ಇದಕ್ಕೆ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ ಎಟಿಎಂನಿಂದ ನಕಲಿ ನೋಟು ಸಿಗುವ ಸಾಧ್ಯತೆ ಇದೆ ಎಂದು  ಬರೆದು‌ಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗೆ ಎಲ್ಲಿಂದ ಹಣ ಬಂದರೂ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ‌.
ಈ ಸುದ್ದಿಯನ್ನೂ ಓದಿ:BBK 11: ಧನರಾಜ್ ಇಡೀ ಕುಟುಂಬವನ್ನು ಮನೆಯೊಳಗೆ ಕಳುಹಿಸಿದ ಬಿಗ್ ಬಾಸ್: ಮಗಳನ್ನು ಕಂಡು ಎಮೋಷನಲ್