Viral Video: 1 ಬಾಳೆ ಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ವಿದೇಶಿ ವ್ಲಾಗರ್; ವಿಡಿಯೊ ವೈರಲ್
Viral Video: ಹೈದರಾಬಾದ್‌ನಲ್ಲಿ ವ್ಲಾಗ್ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಿದೇಶಿ ಪ್ರಜೆಯೊಬ್ಬರು ಬಾಳೆಹಣ್ಣು ಮಾರುತ್ತಿದ್ದ ವ್ಯಕ್ತಿ ಬಳಿ ತೆರಳಿದ್ದಾರೆ. 1 ಬಾಳೆ ಹಣ್ಣಿನ ಬೆಲೆ ಎಷ್ಟು ಕೇಳಿದಾಗ ವ್ಯಾಪಾರಿ 100 ರೂಪಾಯಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ವಿದೇಶಿ ಬ್ಲಾಗರ್ ಶಾಕ್ ಆಗಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಹೈದರಾಬಾದ್: ಸಾಮಾನ್ಯವಾಗಿ ವ್ಯಾಪಾರಿಗಳು ಬಾಳೆಹಣ್ಣನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ವಿದೇಶಿ ವ್ಯಕ್ತಿಗೆ ಒಂದು ಬಾಳೆಹಣ್ಣಿಗೆ 100 ರೂ ಬೆಲೆ ಹೇಳಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.(Viral Video).
ಈ ಮೂಲಕ ವಿದೇಶಿ ವ್ಯಕ್ತಿ ಒಂದು ಬಾಳೆಹಣ್ಣಿನ ಬೆಲೆ ಕೇಳಿ ಆಶ್ಚರ್ಯ ಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ವ್ಲಾಗ್ ಮಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಿದೇಶಿ ಪ್ರಜೆಯೊಬ್ಬರು ಬಾಳೆಹಣ್ಣು ಮಾರುತ್ತಿದ್ದ ವ್ಯಕ್ತಿ ಬಳಿ ತೆರಳಿದ್ದಾರೆ. 1 ಬಾಳೆ ಹಣ್ಣಿನ ಬೆಲೆ ಎಷ್ಟು ಕೇಳಿದಾಗ ವ್ಯಾಪಾರಿ 100 ರೂ. ಎಂದು ಹೇಳಿದ್ದಾರೆ. ವ್ಯಾಪಾರಿ ಒಂದು ಬಾಳೆಹಣ್ಣಿಗೆ 100 ರೂ. ಎಂದಾಗ ವಿದೇಶಿ ಬ್ಲಾಗರ್ ಶಾಕ್ ಆಗಿದ್ದಾರೆ. "ಅಯ್ಯೋ, ಇಷ್ಟೊಂದು ದುಬಾರಿಯೇ? ಅಷ್ಟು ಪಾವತಿಸಲು ಸಾಧ್ಯವಿಲ್ಲʼʼ ಎಂದು ಖರೀದಿಸದೆ ತೆರಳುತ್ತಾರೆ. ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.
ಹಗ್ ಎನ್ನುವ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗುದ್ದು, ಸುಮಾರು 6.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೊ ನೋಡಿ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Rohit Sharma: ಮಾಧ್ಯಮದವರ ಮೇಲೆ ಗರಂ ಆದ ಟೀಮ್ ಇಂಡಿಯಾ ನಾಯಕ ರೋಹಿತ್
ಒಬ್ಬ ಬಳಕೆದಾರ ವಿದೇಶಿ ಸೇವಾ ತೆರಿಗೆಯನ್ನು ಸೇರಿಸಿ ಬಾಳೆ ಹಣ್ಣಿನ ಬೆಲೆ ಹೇಳಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ದೇಶದ ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ದುಬಾರಿ ಮೊತ್ತದ ಬಾಳೆಹಣ್ಣು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.