ಭೋಪಾಲ್: ಮಧ್ಯ ಪ್ರದೇಶದ ಇಂಡಿಯನ್ ಕಾಫಿ ಹೌಸ್ ಬಳಿ ಪಾರ್ಕಿಂಗ್ ಏರಿಯಾದಲ್ಲಿ ನಿಲುಗಡೆಯಾಗಿದ್ದ ವಿದ್ಯಾರ್ಥಿಯ ಬೈಕ್ವೊಂದನ್ನು ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯಾವಳಿಯ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ (Viral Video).
ಹಗಲು ಹೊತ್ತಿನಲ್ಲಿಯೇ ವಿದ್ಯಾರ್ಥಿಯೊಬ್ಬನ ಬೈಕನ್ನು ಅಪರಿಚಿತ ವ್ಯಕ್ತಿಯೋರ್ವ ಕದ್ದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಕಳ್ಳನ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ. ಶೀಟ್ಲಾ ಮೈ ನಿವಾಸಿ ಕುಶಾಲ್ ವರ್ಮಾ ಎಂಬಾತ ತನ್ನ ಬೈಕ್ (MP 20 MK 5290) ಕಳ್ಳತನವಾಗಿರುವ ಬಗ್ಗೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆದರೆ 4 ದಿನ ಕಳೆದರೂ ಎಫ್‌ಐಆರ್ ದಾಖಲಾಗಿಲ್ಲ. ಪ್ರಕರಣದ ತನಿಖೆ ಬಗ್ಗೆ ಆಸಕ್ತಿ ತೋರಿಲ್ಲ. ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ವಿದ್ಯಾರ್ಥಿ ಯುಎಂಪಿ ವಿದ್ಯಾರ್ಥಿಗಳ ಒಕ್ಕೂಟಕ್ಕೆ (ಎಂಪಿಎಸ್‌ಯು) ದೂರು ನೀಡಿದ್ದು, ವಿದ್ಯಾರ್ಥಿಗಳ ಒಕ್ಕೂಟವು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಮೂಲಕ ವಿಚಾರ ಮುಂದಿಟ್ಟಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿಯೇ ಬೈಕ್ ಕಳ್ಳತನ ಆಗಿದ್ದು ಇನ್ನೂ ಆರೋಪಿಯನ್ನು ಪತ್ತೆ ಹಚ್ಚಲು ಯಾವುದೇ ಮಹತ್ವದ ಪ್ರಯತ್ನ ನಡೆದಿಲ್ಲ ಎಂದು ವಿದ್ಯಾರ್ಥಿಗಳ ಸಂಘಟನೆಯು ಪೊಲೀಸರ ನಿರ್ಲಕ್ಷ್ಯವನ್ನು ಟೀಕಿಸಿದೆ.
ಇದನ್ನು ಓದಿ: Saif Ali Khan: ಸೈಫ್ ಆಲಿ ಖಾನ್‌ಗೆ ಇರಿತ ಪ್ರಕರಣ; ಶಂಕಿತ ಆರೋಪಿ ಅರೆಸ್ಟ್
ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನವಾಗಿರುವ ದೃಶ್ಯ ಸೆರೆಯಾಗಿದ್ದು, ಅಪರಿಚಿತ ವ್ಯಕ್ತಿಯೋರ್ವ ಬೈಕ್ ಸಮೇತ ತೆರಳುವುದು ಕಂಡು ಬಂದಿದೆ. ಆ ಭಾಗದಲ್ಲಿ ಇನ್ನು ಕೆಲವು ಜನರು ಚರ್ಚೆ ಮಾಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಕಳ್ಳನ ಮುಖವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೂ ಪೊಲೀಸರು ತನಿಖೆ ಮಾಡಿಲ್ಲ ಎಂದು ವಿದ್ಯಾರ್ಥಿ ದೂರು ನೀಡಿದ್ದಾನೆ.