ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮನುಷ್ಯರಿಗಿಂತ ತಾನೇನು ಕಮ್ಮಿ ಇಲ್ಲ... ಕೋತಿ ಟ್ಯಾಲೆಂಟ್‌ ನೋಡಿದ್ರೆ ಶಾಕ್‌ ಆಗುತ್ತೆ!

ಮನುಷ್ಯರು ಗಾಳಿಪಟವನ್ನು ಹಾರಿಸುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡುತ್ತಾರೆ. ಆದರೆ ಪ್ರಾಣಿಗಳು ಗಾಳಿಪಟವನ್ನು ಹಾರಿಸುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲಿ ಕೋತಿಯೊಂದು ಮನುಷ್ಯರಂತೆ ಗಾಳಿಪಟ ಹಾರಿಸಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

monkey viral video

ಲಖನೌ: ಸಮುದ್ರ ತೀರಗಳಲ್ಲಿ, ಮನೆಯ ಟೆರೇಸ್ ಮೇಲೆ ಮನುಷ್ಯರು ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಅದರಲ್ಲೂ ಮಕ್ಕಳಿಗೆ ಗಾಳಿಪಟ ಹಾರಿಸುವುದೆಂದರೆ ತುಂಬಾ ಇಷ್ಟ. ಆದರೆ ಇತ್ತೀಚೆಗೆ ಕೋತಿಯೊಂದು ಗಾಳಿಪಟ ಹಾರಿಸಿದ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಈ ವಿಡಿಯೊದಲ್ಲಿ ಕೋತಿ ಟೆರೇಸ್‍ನಲ್ಲಿ ಕುಳಿತು ಮನುಷ್ಯರಂತೆಯೇ ಗಾಳಿಪಟ ಹಾರಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ 30,000 ವ್ಯೂವ್ಸ್‌ ಮತ್ತು ಹಲವಾರು ಕಾಮೆಂಟ್‍ಗಳನ್ನು ಗಳಿಸಿತ್ತು. "ಒಎಂಜಿ ಪ್ಲಾನೆಟ್ ಆಫ್ ದಿ ಏಪ್ಸ್ ಪ್ರಾರಂಭವಾಗುತ್ತದೆ" ಎಂದು ಒಬ್ಬರು ತಮಾಷೆ ಮಾಡಿದರೆ, ಇತರರು ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.



ಈ ಹಿಂದೆ, ಉತ್ತರ ಪ್ರದೇಶದ ರಾಯ್‌ಬರೇಲಿಯ ರೈತ ಮತ್ತು ಕೋತಿಯ ನಡುವಿನ ಸ್ನೇಹವನ್ನು ತೋರಿಸುವ ಹೃದಯಸ್ಪರ್ಶಿ ವಿಡಿಯೊವೊಂದು ಹೊರಬಂದಿತ್ತು. ವೈರಲ್ ಆಗಿರುವ ಈ ವಿಡಿಯೊದಲ್ಲಿ ಸದ್ವಾ ಗ್ರಾಮದ ರೈತ ವಿಶ್ವನಾಥ್ ಮತ್ತು ರಾಣಿ ಎಂಬ ಕೋತಿ ನಡುವಿನ ಅಸಾಧಾರಣ ಬಂಧವನ್ನು ತೋರಿಸಲಾಗಿತ್ತು. ಈ ಕೋತಿಯ ಹೆಸರು ರಾಣಿಯಂತೆ.

ಈ ಸುದ್ದಿಯನ್ನೂ ಓದಿ:Monkey Fighting: ರೈಲು ಸಂಚಾರಕ್ಕೂ ಕೋತಿಗಳ ಕಾಟ; ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ಇದೆ

ಎಂಟು ವರ್ಷಗಳ ಹಿಂದೆ, ಕೋತಿಗಳ ಗುಂಪು ಗ್ರಾಮದ ಮೂಲಕ ಹಾದುಹೋದಾಗ ರಾಣಿ ಕೋತಿ ತನ್ನ ಗುಂಪಿನಿಂದ ಬೇರ್ಪಟ್ಟಿತ್ತು. ಅಸಹಾಯಕ ಪ್ರಾಣಿಯ ಮೇಲೆ ಕರುಣೆ ತೋರಿದ ವಿಶ್ವನಾಥ್ ಅವರ ಪತ್ನಿ ಅದನ್ನು ರಕ್ಷಿಸಿದರು. ನಂತರ ಅದು ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿದೆ.